Breaking News

ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಅಪಮಾನ ಖಂಡಿಸಿ ದಲಿತ ಒಕ್ಕೂಟ ಪ್ರತಿಭಟನೆ.

Dalit union protests against insulting Constitution architect Ambedkar.

ಜಾಹೀರಾತು

ಗಂಗಾವತಿ,ಡಿ:24:ಇಡೀ ಭಾರತ ದೇಶಕ್ಕೆ ಸ್ವಾತಂತ್ರೋತ್ತರವಾಗಿ ಸಂವಿಧಾನವನ್ನು ಬರೆದುಕೊಟ್ಟಂತಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಮಾನ್ಯ ಲೋಕಸಭೆ ಸಚಿವರಾದ ಅಮಿತ್ ಶಾ ರವರು ಅಪಮಾನ ಹೇಳಿಕೆ ಖಂಡಿಸಿ ಇಂದು ಗಂಗಾವತಿಯಲ್ಲಿ ಡಾ. ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಇಂದ ಶ್ರೀ ಕೃಷ್ಣದೇವರಾಯ ಸರ್ಕಲ್ ಬಸ್ ಸ್ಟ್ಯಾಂಡ್ರವರಿಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಲೋಕಸಭಾ ಕಲಾಪ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಅಮಿತ್ ಶಾ ರವರ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎನ್ನುವ ಬದಲು ದೇವರು ಹೆಸರು ಹೇಳಿದರೆ ಏಳು ಜನ್ಮದ ಪ್ರಾಪ್ತಿ ಸಿಗುತ್ತದೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದರು. ಇದನ್ನು ಖಂಡಿಸಿದ ದಲಿತಪರ ಒಕ್ಕೂಟ ಸಂಘಟನೆಗಳು ದೇಶದಾದ್ಯಂತ ಹೋರಾಟ ನಡೆಸಿದವು ಇಂತಹ ಸಂದರ್ಭದಲ್ಲಿ ನಗರದಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಮಾಗಿ ಹುಲುಗಪ್ಪ ಮಾತನಾಡಿ ಇಡೀ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಸಂವಿಧಾನವನ್ನು ನೀಡಿದಂತಹ ಬಾಬಾ ಸಾಹೇಬರಿಗೆ ಇಂತಹ ಅಪಮಾನ ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ, ಮಾನ್ಯ ಗೃಹ ಮಂತ್ರಿಗಳು ಇಂತಹ ಹೇಳಿಕೆಯಿಂದ ದೇಶದಲ್ಲಿನ ದಲಿತರಲ್ಲರ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಕೂಡಲೇ ಅವರು ಕ್ಷಮೆಯಾಚನೆ ಮಾಡಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಮತ್ತೋರ್ವ ಹಿರಿಯ ಮುಖಂಡರಾದ ಅಂಬಣ್ಣ ಮಾತನಾಡಿ ಅಮಿತ್ ಶಾ ಅವರ ಹೇಳಿಕೆಯಿಂದ ಅವರ ನಿಜ ಬಣ್ಣ ಬಯಲಾಗಿದೆ ಮನಸ್ಸೃತಿಯನ್ನು ಒಪ್ಪಿಕೊಳ್ಳುವಂತಹ ಅವರು ಬಾಬಾ ಸಾಹೇಬ್ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಅವರ ತಲೆಯಲ್ಲಿ ಇಂತಹ ಕೆಟ್ಟ ಯೋಚನೆಗಳು ಬರುತ್ತವೆ ಕೂಡಲೇ ರಾಜೀನಾಮೆಗೆ ಆಗ್ರಹಿಸಿದರು. ದಮನಿತರ ಸಮುದಾಯದಿಂದ ಬಂದಂತಹ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರಚಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಇಡೀ ದೇಶಕ್ಕೆ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಇದರಿಂದ ದೇಶದ ಎಲ್ಲಾ ಜನರಿಗೆ ಸಮಾನ ಅವಕಾಶವನ್ನು ಕಲ್ಪಿಸುವ ಮೂಲಕ ಅವಕಾಶ ನೀಡಿದೆ. ಇಂತ ದಲಿತರ ದೇವರೆಂದು ಕರೆಸಿಕೊಳ್ಳುವ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಪುನರುಚ್ಚರಿಸಿದ್ದಾರೆ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟ ಸಮಿತಿ ದಲಿತ ಮತ್ತು ವಿವಿಧ ಸಂಘಟನೆ ಒಕ್ಕೂಟದಿಂದ ಮಾನ್ಯ ತಹಶೀಲ್ದಾರ್ ಅವರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಚಲವಾದಿ ಬಸವರಾಜ್, ಹುಲಗೇಶ ದೇವರಮನಿ, ಹಂಪೆಶ್ ಹರಿಗೋಲು, ಮರಿಸ್ವಾಮಿ ಬರಗೂರು, ಯಮನೂರಪ್ಪ,ಆಂಜನೇಯ, ಸುರೇಶ್ ಮಾಲೀಮನಿ, ಮುತ್ತಣ್ಣ, ಮಲ್ಲಿಕಾರ್ಜುನ ಹಂಚಿನಾಳ,ಮಂಜುನಾಥ,ಗೋಪಾಲ್ , ಜಡಿಯಪ್ಪ,ಭಾಷಾ ಹಣವಳ, ಹುಲ್ಲೇಶ,ಪರುಶುರಾಮ,ಮಾರುತಿ ತಡ್ಕಲ್ ಇನ್ನಿತರು ಪದಾಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.