On Koppal Gadag National Highway,,! A collision between a tractor and a lorry resulted in one death.
ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಕೊಪ್ಪಳದಿಂದ ಗದಗ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಮಿಲೆನಿಯಂ ಪಬ್ಲಿಕ್ ಸ್ಕೂಲ್ ಹತ್ತಿರದಲ್ಲಿ ಶನಿವಾರ ಸಾಯಂಕಾಲ ಟ್ರ್ಯಾಕ್ಟರ್ ಹಾಗೂ ಲಾರಿ ಮದ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಕೊಪ್ಪಳದಿಂದ ಗದಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗವಾಗಿ ಚಲಿಸುತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ರಭಸವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನ ಚಾಲಕ ನಂಜುಂಡಯ್ಯ ಎನ್ನುವವರಿಗೆ ತಲೆಗೆ ಪೆಟ್ಟಾಗಿದ್ದು, ಇನ್ನೋರ್ವ ಲೇಬರ್ ಮಹಾಂತೇಶ (28) ಗುರಿಕಾರ ಎನ್ನುವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಟ್ರ್ಯಾಕ್ಟರ್ ಚಾಲಕ ನಂಜುಂಡಯ್ಯ ಹಾಗೂ ಲೇಬರ್ ಮಹಾಂತಪ್ಪ ಗುರಿಕಾರ ಇಬ್ಬರು ಕುಕನೂರು ತಾಲೂಕಿನ ನಿಂಗಾಪೂರದವರೆಂದು ಮಾಹಿತಿ ಲಭ್ಯವಾಗಿದೆ.
ಗಾಯಾಳು ನಂಜುಂಡಯ್ಯನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.