Heartiest wishes on the 135th birth anniversary of Pujya Dr Sri Maha Cha Chennabasava Pattadevaru Bhalki:
ಪೂಜ್ಯ ಪಟ್ಟದೇವರು ಹೀರೆಮಠ ಭಾಲ್ಕಿ ಬಸವಮಯವಾಗಿ ಮಾಡಿದ್ದರು, ಅದರಂತೆ ಬಸವ ತತ್ವ ಸಿದ್ದಾಂತ ಮೈಗುಡಿಸಿಕೊಂಡು ಪ್ರಚಾರ ಮಾಡಿದರು. ಈ ಭಾಗದಲ್ಲಿ ಬಸವ ತತ್ವ ಸಿದ್ದಾಂತ ಪ್ರಚಾರ ಜೊತೆ ಜೊತೆಗೆ ಕನ್ನಡ ಕಲಿಸಲು ಪ್ರಯತ್ನ ಮಾಡಿದ್ದರು.
ಈ ಭಾಗದ ಜನರಿಗೆ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಹೊಸ ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟರು. ಆದರಿಂದ ಭಾಲ್ಕಿ ಸುತ್ತಮುತ್ತ ಜನಕ್ಕೆ ದಾರಿ ದೀಪ ಆದರು, ಸಾವಿರಾರು ಕುಟುಂಬಗಳ ಮನೆ ಬೆಳಕಾದರು, ಉಚಿತ ಪ್ರಸಾದ ನಿಲಯ ಸ್ಥಾಪನೆ ಮಾಡಿ ಬಡ ಕುಟುಂಬಗಳ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಸಹಕಾರಿ ಆದರು. ಅನಾಥ ಆಶ್ರಮ ಸ್ಥಾಪನೆ ಮಾಡಿ ತಂದೆ ತಾಯಿ ಇಲ್ಲದ ಮಕ್ಕಳಿಗೆ ತಂದೆ ತಾಯಿ ಆಗಿ ಪ್ರಪಂಚದಲ್ಲಿ ಬದುಕುಲು ದಾರಿ ಮಾಡಿಕೊಟ್ಟರು, ಸಾವಿರಾರು ಸಂಖ್ಯೆಯಲ್ಲಿ ಅನಾಥ ಮಕ್ಕಳು ಸಮಾಜದಲ್ಲಿ ಎತ್ತರಕ್ಕೆ ಬೆಳೆದು ಜೀವನ ಕಟ್ಟಿಕೊಂಡರು.
ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ಸ್ಥಾಪನೆ ಮಾಡಲು ಹಗಲಿರುಳು ದುಡಿದರು, ಜಗತ್ತಿಗೆ ಇಲ್ಲಿಯ ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ನಾಂದಿ ಎಂದು ತೋರಿಸಿದರು. ಇಲ್ಲಾಂದರೆ ಜಗತ್ತಿಗೆ ಬಸವಣ್ಣನವರು ಸ್ಥಾಪನೆ ಮಾಡಿದ್ದ ಅನುಭವ ಮಂಟಪ ಮರೆಮಾಚಿ ಹೋಗುತ್ತಿತ್ತು.
ನಮ್ಮ ಮನೆತನದ ಹಿರಿಯರು ಮತ್ತು ನಮ್ಮ ಪೂಜ್ಯ ತಂದೆ ಲಿಂಗೈಕ್ಯ ಶ್ರೀ ವೀರಯ್ಯ ಸ್ವಾಮಿ ಸ್ವಾತಂತ್ರ ಸೇನಾನಿ ಪೂಜ್ಯ ಶ್ರೀ ಚೆನ್ನಬಸವ ಪಟ್ಟದೇವರು ಅನುಯಾಯಿ ಆಗಿದ್ದರು, ಅವರ ಮಾರ್ಗದರ್ಶನದಲ್ಲಿ ನಮ್ಮೂರು ಹೆಡಗಾಪುರ ಔರಾದ ತಾಲೂಕಾದಲ್ಲಿ 1960ರಲ್ಲಿಯ ಗ್ರಾಮದ ಜನರ ಸಹಕಾರದಲ್ಲಿ ಫ್ರೌಢ ಶಾಲಾ ಸ್ಥಾಪನೆ ಮಾಡಿ, ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಸ್ಥಾಪನೆ ಮಾಡಿ ಭಾಗದ ಬಡಮಕ್ಕಳ ಶಿಕ್ಷಣ ಸಹಕಾರ ಮಾಡಿಕೊಟ್ಟಿದ್ದರು. ನಮ್ಮ ಕುಟುಂಬ ಇಂದಿಗೂ ಮಠದ ಜೊತೆಗೆ ಅವಿನಾಭಾವ ಸಂಬಂಧವಿದೆ.
ಇಂದಿಗೂ ಪೂಜ್ಯ ಶ್ರೀ ಚೆನ್ನಬಸವ ಪಟ್ಟದೇವರು ಎಲ್ಲರಿಗೂ ಮಾದರಿ ಆಗಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಪೂಜ್ಯ ಡಾ ಬಸವಲಿಂಗ ಪಟ್ಟದೇವರು ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಪಟ್ಟು ಮತ್ತೆ ಭಾಲ್ಕಿ ಹಿರೇಮಠ ಹಿರಿಮೆ ನಾಡಿನಲ್ಲಿ ಪ್ರಚಾರ ಮಾಡಿದರು. ಬಸವ ತತ್ವ ಸಿದ್ದಾಂತವೆ ಸಂಪೂರ್ಣ ಮೈಗೂಡಿಸಿಕೊಂಡು ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ತುಂಬಾ ಹಗಲಿರುಳು ಬಸವ ತತ್ವ ಲಿಂಗಾಯತ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಅವರು ಮುಂದೆ ತಮ್ಮ ಉತ್ತರಾಧಿಕಾರಿಯಾಗಿ ಪೂಜ್ಯ ಶ್ರೀ ಮ ಘ ಚ ಗುರುಬಸವ ಪಟ್ಟದೇವರು ನೇಮಿಸಿ, ಇಬ್ಬರು ಸೇರಿ ನಾಡಿನ ತುಂಬಾ ಬಸವ ಪರಿಮಳ ಹರಿಸುತ್ತಿದ್ದಾರೆ. ಜೊತೆಗೆ ಜೊತೆಗೆ ಶಿಕ್ಷಣ ಸಂಸ್ಥೆ ಮುಖಾಂತರ ಸೇವೆ ಸಲ್ಲಿಸಿ ಈ ಭಾಗದ ಮಕ್ಕಳಿಗೆ ದಾರಿ ದೀಪ ಆಗಿ, ಮಕ್ಕಳಿಗೆ ಆಧುನಿಕ ವೈಜ್ಞಾನಿಕ ಶಿಕ್ಷಣ ಕೊಟ್ಟು ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.
ಭಾಲ್ಕಿ ಹಿರೇಮಠ ನಾಡಿನ ತುಂಬಾ ಬಸವ ತತ್ವದ ಬೆಳಕು ಚೆಲ್ಲುತ್ತಾ ಬೆಳೆಯಲಿ ಎಂದು ದೇವರು ಸೃಷ್ಟಿಕರ್ತ ಲಿಂಗದೇವರು, ಪರಶಿವ ಮತ್ತು ವಿಶ್ವಗುರು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇನೆ.
ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ