Breaking News

“ಹಳೆ ಕೊಟ್ಟೂರು ಸೇವಾ ಟ್ರಸ್ಟ್ ವತಿಯಿಂದ ಪ್ರಥಮ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ”



First Cricket Tournament Launched by Old Kottoor Seva Trust”

ಜಾಹೀರಾತು

ಕೊಟ್ಟೂರು:- ದಿನ ನಿತ್ಯದ ಕರ್ತವ್ಯ ಹಾಗೂ ಕೆಲಸದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಕೆ.ಕೊಟ್ರೇಶ್ ಅದ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘ, ತಾಲೂಕು ಘಟಕ ಕೊಟ್ಟೂರು ಇವರು ತಿಳಿಸಿದರು.

ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ) ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತಾಡಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಸೋಲು ಗೆಲುವು ಎನ್ನದೇ ಆಟದಲ್ಲಿ ಭಾಗಿಯಾಗಬೇಕಿದೆ ಎಂದು ವಿಜಯ ಕುಮಾರ್ ಹೆಚ್ ತಿಳಿಸಿದರು.

ಕ್ರಿಕೆಟ್‌ ಪಂದ್ಯವಳಿಯಲ್ಲಿ ಪ್ರಥಮ ಬಹುಮಾನ ಇಪ್ಪತ್ತು ಸಾವಿರ ರೂಪಾಯಿಗಳು, ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿಗಳು ಬಹುಮಾನ ನೀಡುತ್ತಿದ್ದು, ಕ್ರಿಕೆಟ್ ಪಂದ್ಯವಳಿಯಲ್ಲಿ ಭಾಗವಹಿಸುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳಿಗೆ ಇತರೇ ಬಹುಮಾನಗಳ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ತಿಳಿಸಿದರು.

ಅಗ್ನಿಶಾಮಕ ಇಲಾಖೆ,,ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ಹಳೆ ಕೊಟ್ಟೂರು, ಕೆಪಿಎಸ್ ಪತ್ರಕರ್ತರು ತಂಡ,ಯುಥ್ ಕ್ರಿಕೆಟರ್ಸ್, ಗೇಮ್ ಚೆಜರ್, ಹಸಿರು ಹೊನಲು ತಂಡ, ಯುವ ಕ್ರಿಕೆಟರ್ಸ್, ಲಾಯನ್ಸ್ ಕೊಟ್ಟೂರು , ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಜುನಾಥ ಸ್ವಾಮಿ ಅಗ್ನಿ ಶಾಮಕ ಇಲಾಖೆ ,ಕರವೇ ಅಧ್ಯಕ್ಷ ಎಂ.ಶ್ರೀನಿವಾಸ, ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್, ಯುವ ಮುಖಂಡ ಎಂ ಎಂ ಜೆ ಮಂಜುನಾಥ, ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ, ಎಸ್ ಪರುಶುರಾಮ, ಗೌಸ್,ಮಂಜುನಾಥ್ ಭಜಂತ್ರಿ,ಸುವೇಭ , ಅನಿಲ್ ಸುಭಾನ್, ರಾಜು,ತಗ್ಗಿನಕೇರಿ ಕೊಟ್ರೇಶ್,, ಹಾಗೂ ಅಪಾರ ಕ್ರೀಡಾ ಅಭಿಮಾನಿಗಳು ಇದ್ದರು.

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *