Town Panchayat Chief A Nasrullah gave first aid to the wormed cow
ಹಳೇ ಕೊಟ್ಟೂರು ತಂಡದ ಪದಾಧಿಕಾರಿಗಳ:ಸಾಮಾಜಿಕ ಕಳಕಳೆ
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು,ಮೂಕಪ್ರಾಣಿಗಳಿಗೆ ರಕ್ಷಣೆ ಇಲ್ಲವೇ…?
ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತಾದಿಗಳು ಆಕಳುಗಳನ್ನು ಹರಕೆ ರೂಪದಲ್ಲಿ ಒಪ್ಪಿಸುವುದು ರೂಢಿ ಸಂಪ್ರದಾಯ. ಆ ರೀತಿ ಹರಕೆ ಹಸುಗಳ ಸಂಪೂರ್ಣ ಜವಾಬ್ದಾರಿ ದೇವಸ್ಥಾನದ ಮೇಲಿರುತ್ತದೆ. ಆದರೆ ಪಟ್ಟಣದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಆಡಳಿತ ಮೂಕಪ್ರಾಣಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಆ ಹಸುಗಳಿಗೆ ಏನೇ ಆದರೂ ಯಾರೂ ನೋಡುವರೇ ಇಲ್ಲ. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಇಲಾಖಾ ಆಯುಕ್ತರು, ಇದರ ಬಗ್ಗೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಗೋಶಾಲೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಳೇ ಕೊಟ್ಟೂರು ತಂಡದ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ಒಂದು ಹಸುವಿಗೆ ಹುಳು ಬಿದ್ದು, ನರಳುತ್ತಿರುವ ವಿಷಯವನ್ನು ಹಳೇ ಕೊಟ್ಟೂರು ತಂಡದ ಪದಾಧಿಕಾರಿಗಳು ಜವಾಬ್ದಾರಿತವಾಗಿ ಸ್ಥಳದಲ್ಲಿ ಕರೆ ಮೂಲಕ ತಿಳಿಸಿದ ನಂತರ ಆಗಲೇ ಕಾರ್ಯಪ್ರವೃತ್ತರಾದ ಪಟ್ಟಣ ಪಂಚಾಯಿತಿ
ಮುಖ್ಯಾಧಿಕಾರಿಗಳಾದ ಎ.ನಸುರುಲ್ಲಾ ಖುದ್ದು ಸ್ಥಳಕ್ಕೆ ಧಾವಿಸಿ, ಪಶುವನ್ನು ಪಶು ಚಿಕಿತ್ಸಾಲಯಕ್ಕೆ ತಮ್ಮದೇ ವಾಹನದಲ್ಲಿ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹಸುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದು, ತಮ್ಮ ಮಾನವೀಯತೆ ವ್ಯಕ್ತಪಡಿಸಿದರು. ಪಶುವೈದ್ಯರಾದ ಚಂದ್ರಾನಾಯ್ಕ, ಯೋಗೀಶ್ವರ್ ಹಾಗೂ ಸಿಬ್ಬಂದಿ ಖುದ್ದು ಕಾಳಜಿ ವಹಿಸಿ ಹಸುವಿನ ಕಾಯಿಲೆಗೆ ಹೆಚ್ಚಿನ ಚಿಕಿತ್ಸೆ ನೀಡಿದರು. ಚಿಕಿತ್ಸೆ ನಂತರ ಹಸು ಚೇತರಿಸಿಕೊಂಡದ್ದು
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪನವರು ತಮ್ಮ ಸಿಬ್ಬಂದಿಗಳನ್ನು ಕಳುಹಿಸಿ ಚಿಕಿತ್ಸೆ ಕೊಡಿಸುವಲ್ಲಿ ಭಾಗವಹಿಸಿದರು. ಸುಸಜ್ಜಿತ ಕೊಠಡಿಯಲ್ಲಿ ಇರಿಸಲಾಗಿದೆ .ಈ ಹಿಂದೆ ಈ ರೀತಿ ಹರಕೆ ಬಿಟ್ಟ ಹಸುಗಳನ್ನು ಕಳ್ಳರು ಕದ್ದೊಯ್ದ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ದೇವಾಲಯದ ಆಡಳಿತ ಹರಕೆ ಬಿಟ್ಟ ಹಸುಗಳಿಗೆ ಒಂದು ಗೋಶಾಲೆ ನಿರ್ಮಿಸಬೇಕೆಂಬುದು ಹಳೇ ಕೊಟ್ಟೂರು ಹಾಗೂ ಸಾರ್ವಜನಿಕರ ಕೂಗೂ ಸಹ ಇತ್ತೀಚೆಗೆ ಬಲವಾಗಿ ಕೇಳಿಬರುತ್ತದೆ. ಇಲಾಖಾ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮದೂರು ಕೊಟ್ರೇಶ್,ಹಳೇ ಕೊಟ್ಟೂರು ತಂಡದ ವಿಜಯಕುಮಾರ್, ಕೆ.ಕೊಟ್ರೇಶ್, ಮೆಹಬೂಬ್ ಬಾಷಾ, ಗೌಸ್ ,ಸಂಪೂರ್ಣ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.