Submission of request to leave bus to Javagal and Kalaburgi
ಯಲಬುರ್ಗಾ.ಡಿ.11.: ಯಲಬುರ್ಗಾ ಪಟ್ಟಣದ ಬಸ್
ಡಿಪೋ ಕಚೇರಿಯಲ್ಲಿ ಬುಧವಾರ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ ಅವರಿಗೆ ಯಲಬುರ್ಗಾ ಪ್ರಯಾಣಿಕರು ಮತ್ತು ಮುಖಂಡರಿಂದ ಯಲಬುರ್ಗಾದಿಂದ ಜಾವಗಲ್, ಕಲಬುರ್ಗಿ ಮತ್ತು ಮಂತ್ರಾಲಯಕ್ಕೆ ಬಸ್ ಬಿಡುವಂತೆ ಅಗ್ರಹಿಸಿ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಶರಣಪ್ಪ ಕರಂಡಿ ಮತ್ತು ಅಜಮೀರ ಹಿರೇಮನಿ ಮಾತನಾಡಿ, ಈ ಯಾತ್ರಾ ಸ್ಥಳಗಳಿಗೆ ಬಸ್ ಬಿಡುವಂತೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ ಇದುವರೆಗೂ ಬಸ್ ಸೌಲಭ್ಯ ಕಲ್ಪಿಸಿಲ್ಲ. ಈ ಹಿಂದೆ ಯಲಬುರ್ಗಾದಿಂದ ಜಾವಗಲ್ ಗೆ ಸೇರಿ ಇತರ ಮಾರ್ಗಗಳಿಗೆ ಬಸ್ ಸಂಚಾರ ಪ್ರಾರಂಭವಿತ್ತು ವಿನಾ ಕಾರಣ ಸ್ಥಗಿತ ಮಾಡಲಾಗಿದೆ ಇದರಿಂದ ಯಲಬುರ್ಗಾ ಪ್ರಯಾಣಿಕರು ಸೇರಿ ಇತರ ಗ್ರಾಮಗಳ ಪ್ರಯಾಣಿಕರಿಗೆ ತೊಂದರೆಯಾಗಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಜಾವಗಲ್, ಕಲಬುರ್ಗಿ, ಮತ್ತು ಮಂತ್ರಾಲಯಕ್ಕೆ ಬಸ್ ಬಿಡಲು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವೆಂಕಟೇಶ್ ಅವರು ಮತ್ತು ಯಲಬುರ್ಗಾ ಬಸ್ ಡಿಪೋ ಮ್ಯಾನೇಜರ್ ರಮೇಶ ಅವರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು. ಮುಖಂಡರಾದ ಖಾಜಾಸಾಬ ಆರ್ ಮತ್ತು ಪಾಷಾಸಾಬ ಗುಳೇದಗುಡ್ಡ ಮಾತನಾಡಿ ಜಾವಗಲ್, ರಾಮನಗರ ಸೇರಿ ಇತರ ಮಾರ್ಗಗಳಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿತ್ತು ಆದರೆ ವಿನಾ ಕಾರಣ ಈ ಮಾರ್ಗಗಳ ಬಸ್ ಸಂಚಾರ ಸ್ಥಗಿತ ಸರಿಯಲ್ಲ ಕೂಡಲೇ ಪುನಃ ಬಸ್ ಸಂಚಾರ ಪ್ರಾರಂಭ ಮಾಡಲು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು. ಮನವಿ ಸ್ವೀಕರಿಸಿದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ ಅವರು ಮಾತನಾಡಿ ಯಲಬುರ್ಗಾ