Breaking News

ಪ್ರಜಾಪಿತಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸಾದಕರಿಗೆ ನೀಡುವ ಸನ್ಮಾನಕ್ಕೆ ಭಾಜನರಾದ ಪತ್ರಕರ್ತರಾದ ಪೊನ್ನಾಚಿ ಬಂಗಾರಪ್ಪ .

Ponnachi Bangarappa, a journalist, has been honored with the award given to a doer by Prajapitha Brahmakumari Eshwariya Vishwa Vidyalaya.

ಜಾಹೀರಾತು

ಹನೂರು :ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ. ವತಿಯಿಂದ ಮೌಲ್ಯಯುತ ಸಮಾಜ ನಿರ್ಮಾಣಕ್ಕಾಗಿ ತಮ್ಮದೇ ಆದ. ಕೊಡುಗೆ ನೀಡುತ್ತಿರುವ 50 ವಿಶಿಷ್ಟ ವ್ಯಕ್ತಿಗಲಕಿಗೆ ಗೌರವ ಸಮರ್ಪಣೆಯನ್ನು ನೀಡಲಾಗುತ್ತಿದೆ ಎಂದು ಬಿಂದು ಅಕ್ಕರವರು ತಿಳಿಸಿದರು .
ಹನೂರು ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಾತನಾಡಿದ ಅವರು

ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು ಅವಶ್ಯಕವಿರುವ ಅನೇಕ ಘಟಕಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಮುಖ್ಯವಾದವು. ಇವುಗಳು ಕೇವಲ ಭೌತಿಕ ಸ್ತರದಲ್ಲಿ ಮಾತ್ರವಲ್ಲ ಆದರೆ ಸೂಕ್ಷ್ಮ ಮಟ್ಟದಲ್ಲಿ ಕೂಡ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬ ಪ್ರಜೆಯೂ ಈ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದಾಗ ಜೀವನದ ಗುಣಮಟ್ಟದಲ್ಲಿ ಸುಧಾರಣೆ ಕಾಣಬರುತ್ತದೆ. ಅದಕ್ಕಾಗಿ ಪ್ರತಿನಿತ್ಯವೂ ಅನವರತವಾಗಿ ನಾವು ಎದುರಿಸುವ ನಕಾರಾತ್ಮಕ ಮತ್ತು ವ್ಯರ್ಥತೆಯ ಬಿರುಗಾಳಿಗಳಿಗೆ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಾಗುತ್ತದೆ. ಈ ಅಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದರೆ ಸಮಾಜದಲ್ಲಿ ಸಂತೋಷದ ವಾತಾವರಣವು ಮೂಡಲು ಸಾಧ್ಯವಾಗುತ್ತದೆ. ಹೀಗೆ ಪ್ರತಿಯೊಬ್ಬರೂ ಸಮಾಜಕ್ಕೆ ಸೂಕ್ಷ್ಮ ದೇಣಿಗೆ ನೀಡಿದಾಗ ಸಂತೋಷವು ಎಲ್ಲರಿಗೂ ಸಮಾನವಾಗಿ ವಿತರಣೆಯಾದಂತಾಗುತ್ತದೆ. ಇದೂ ಕೂಡ ನೆರವೇರುವುದು ನಮ್ಮ ಪಾತ್ರ ಮತ್ತು ಜವಾಬ್ದಾರಿಗಳ ಅರಿವಿನ ಜೊತೆಯಲ್ಲಿ ನಮ್ಮ ಸತ್ಯ ಗುರುತನ್ನು ಅರಿತಾಗ ಮಾತ್ರ. ಈ ಪ್ರಕ್ರಿಯೆಗೆ ಆಧ್ಯಾತ್ಮಿಕ ಸಶಕ್ತಿಕರಣ ಎನ್ನಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ದಿನಾಂಕ ಮತ್ತು ಸಮಯ: 15 ಡಿಸೆಂಬರ್ 2024, ಭಾನುವಾರ ಬೆಳಗ್ಗೆ 10.30ಕ್ಕೆ
ಸ್ಥಳ: ‘ಜ್ಞಾನ ಸರೋವರ ರಿಟ್ರೇಟ್ ಸೆಂಟರ್’ ಲಿಂಗದೇವರಕೊಪ್ಪಲು, ಹುಣಸೂರು ರಸ್ತೆ, ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು‌ ಎಂದು ತಿಳಿಸಿದರು .

About Mallikarjun

Check Also

ಹನುಮಮಾಲಾ ವಿಸರ್ಜನೆ ಸಿದ್ಧತಾ ಕಾರ್ಯಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಭೇಟಿ, ಪರಿಶೀಲನೆ ಪರಿಶೀಲನೆ

Hanumamala Dissolution Work District Officers, GPM CEO visit, verification inspection ಭಕ್ತರಿಗೆ ಯಾವ ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.