Educational tour of Bevur students was successful
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಬೇವೂರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ಪಠ್ಯೇತರ ಚಟುವಟಿಕೆಯೊಂದಿಗೆ ಹೊರಗಿನ ಪರಿಸರ ಮತ್ತು ಪಠ್ಯದಲ್ಲಿ ಬರುವ ವಿಷಯಗಳ ಪರಿಚಯಕ್ಕಾಗಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತು.
ಪ್ರೌಢಶಾಲೆಯ ೮ ರಿಂದ ೧೦ನೇ ತರಗತಿಯ ಒಟ್ಟು ೯೪ ವಿದ್ಯಾರ್ಥಿಗಳು ಈ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳನ್ನು ಬನವಾಸಿ, ಹೊರನಾಡು, ಕೊಲ್ಲೂರು, ಉಡುಪಿ, ಮಣಿಪಾಲ್ ವಿಜ್ಞಾನದ ವಸ್ತು ಸಂಗ್ರಾಲಯ, ಮಲ್ಪೆ ಬೀಚ್ ಸೇರಿದಂತೆ ಇತರೆ ಸ್ಥಳಗಳ ಪರಿಚಯ ಮಾಡಿಸಲಾಯಿತು. ಈ ಶೈಕಣಿಕ ಪ್ರವಾಸದ ಉಸ್ತುವಾರಿಯನ್ನು ಶಾಲೆಯ ಮುಖ್ಯೋಪಾಧ್ಯಯರಾದ ಗಣೇಶ ಪತ್ತಾರ, ಸಂಗೀತ ಶಿಕ್ಷಕರಾದ ಮಹಾಂತೇಶಯ್ಯ ಶಾಸ್ತಿç, ಸಹ ಶಿಕ್ಷಕರಾದ ಮಹೇಶಕುಮಾರ ದೇವಗಣಮಠ, ಪ್ರಕಾಶ್ ಎಲ್, ಶ್ರೀಮತಿ ವಿಜಯಲಕ್ಷಿö್ಮÃ ಸೇರಿದಂತೆ ಮತ್ತಿತರ ಶಿಕ್ಷಕರು ಬಿಸಿಯೂಟದ ಅಡುಗೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು.