The role of theaters in the freedom struggle was important! Artist Rajanna Jewargi
ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಂಗಭೂಮಿಗಳು ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ರಂಗಭೂಮಿ ಕಲಾವಿದರು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಾಜಣ್ಣ ಜೇವರ್ಗಿ ಹೇಳಿದರು.
ಡಿ.15ರ ಹೊಸ್ತಲ ಹುಣ್ಣಿಮಿಯಂದು ಜರುಗುವ ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಗುದ್ನೇಶ್ವರ ಸ್ವಾಮಿಯ ಜಾತ್ರೋತ್ಸವದ ಪ್ರಯುಕ್ತ ಪಟ್ಟಣ ಪಂಚಾಯತ ಹತ್ತಿರ ಹಾಕಿದ ಗುಬ್ಬಿ ಕಂಪನಿ ಬಿ.ಎಸ್.ಆರ್ ನಾಟಕ ಸಂಘದ ಮೊದಲ ನಾಟಕ ಪ್ರದರ್ಶನದ ದಿನಾಂಕ ಘೋಷಣೆಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ನಾಟಕ ಕಂಪನಿಯಿಂದ ದಿ. 08.12.2024 ರವಿವಾರದಿಂದ, ಅಕ್ಕ ಅಂಗಾರ ತಂಗಿ ಬಂಗಾರ ಎಂಬ ಕೌಟುಂಬಿಕ ನಾಟಕ ಪ್ರತಿದಿನ 2 ಪ್ರದರ್ಶನಗಳು ಜರುಗುತ್ತವೆ ಎಂದು ತಿಳಿಸಿದ ಅವರು ನಮ್ಮ ನಾಟಕ ಕಂಪನಿಗಳಲ್ಲಿ ಅಭಿನಯಿಸುವ ಕಲಾವಿದರು ಜಿ. ಕನ್ನಡದ ಕಾಮಿಡಿ ಕಿಲಾಡಿ ಸುಜಾತ ಜೇವರ್ಗಿ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ನೀಲಾ ಜೇವರ್ಗಿ ಹಾಸ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದರು.
ನಾಟಕಗಳು ನಿಜ ಜೀವನದ ಒಂದು ಅವಿಭಾಜ್ಯ ಅಂಗಗಳಾಗಿದ್ದು, ಇದರಿಂದ ಸಮಾಜದ ತಿದ್ದುವ ಕಾರ್ಯಗಳಾಗಬೇಕು, ಜಾತಿ, ಮತಗಳ ಮದ್ಯೆ ಘರ್ಷಣೆ, ಮಹಿಳೆಯರ ಶೋಷಣೆ, ವರದಕ್ಷಿಣೆ ಪಿಡುಗು, ಅನೈತಿಕತೆ, ಮೂಡ ನಂಬಿಕೆ ಇವುಗಳನ್ನು ತೊಲಗಿಸಿ ಸಾಮರಸ್ಯ ಮೂಡಿಸಿ, ಹಿರಿಯರಿಗೆ ಗೌರವ ನೀಡುವ ಸನ್ನಿವೇಶಗಳ ಮೂಲಕ ಸಮಾಜಗಳನ್ನು ಬದಲಾಯಿಸುವ ಕೆಲಸವನ್ನು ನಾವು ನಾಟಕಗಳಿಂದ ಮಾಡುತ್ತಿದ್ದೇವೆ.
ಅಶ್ಲೀಲ ಸಂಭಾಷಣೆಯಂತಹ ನಾಟಕಗಳನ್ನು ನೀಡಿದರೇ ಕುಟುಂಬಗಳು ಮುಜುಗರಕ್ಕಿಡಾಗುತ್ತವೆ, ಆದ್ದರಿಂದ ನಮ್ಮ ನಾಟಕಗಳಲ್ಲಿ ಯಾವುದೇ ರೀತಿಯಾಗಿ ಅಶ್ಲೀಲ ಸಂಭಾಷಣೆಗೆ ಅವಕಾಶವಿರುವುದಿಲ್ಲಾ, ಆದ್ದರಿಂದ ಕಲಾಭಿಮಾನಿಗಳು, ಕಲಾ ಪ್ರೇಕ್ಷಕರು ಕುಟುಂಬ ಸಮೇತರಾಗಿ ಆಗಮಿಸಿ ನಾಟಕವನ್ನು ವೀಕ್ಷಿಸಿ, ಆಶಿರ್ವದಿಸಿ, ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನಾವು ಈ ಜಾತ್ರೋತ್ಸಕ್ಕೆ ಸತತವಾಗಿ ನಮ್ಮ ಕಂಪನಿ ಹಾಕುತ್ತಿದ್ದು ಇಲ್ಲಿನ ಕಲಾಭಿಮಾನಿಗಳು, ಕಲಾಪ್ರೇಕ್ಷಕರು ನಮ್ಮನ್ನು ಪ್ರತಿ ವರ್ಷ ಆಶಿರ್ವದಿಸಿದಂತೆ ಈ ಬಾರಿಯು ಸಹಕಾರ ನೀಡಿ ಆಶಿರ್ವದಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿತೈಸಿಗಳಾದ ವಿನಾಯಕ ಬೆನಳ್ಳಿ, ಕಳಕನಗೌಡ ತೊಂಡಿಹಾಳ, ಕಲಾವಿದ ಅಂದಪ್ಪ ಬನ್ನಿಕೊಪ್ಪ ಇನ್ನಿತರರು ಇದ್ದರು.