Breaking News

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವರದಿ.
ಕೊಪ್ಪಳ : ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು 2015-16 ರಿಂದ 2021-22 ನೇ ಸಾಲಿನ ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ವಸತಿ ಯೋಜನೆಯಲ್ಲಿ ಫಲಾನುಭವಿಗಳಾದವರು ಕೂಡಲೇ ತಮ್ಮ ಮನೆಯ ಕಾಮಗಾರಿಗಳನ್ನ ಪೂರ್ಣಗೋಳಿಸಬೇಕೆಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.

ಈ ಕುರಿತು ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇಗಾಗಲೇ ಮನೆಗಳನ್ನ ಅರ್ದಕ್ಕೆ ನಿಲ್ಲಿಸಿದವರಿಗೆ ಹಾಗೂ ಕಟ್ಟಡ ಕಾಮಗಾರಿಯನ್ನ ಪ್ರಾರಂಭಿಸದೆ ಇರುವಂತಹ ಫಲಾನುಭವಿಗಳಿಗೆ ನಮ್ಮ ಕಾರ್ಯಾಲಯದಿಂದ ಹಲವಾರು ಭಾರಿ ನಮ್ಮ ಸಿಬ್ಬಂದಿ ಮನೆ ಬೇಟಿ ಮಾಡಿ ಮಾಹಿತಿ ನಿಡಿದ್ದು ಹಾಗೂ ಅಧಿಕೃತವಾಗಿ ನೋಟಿಸ್ ನೀಡಲಾಗಿದ್ದರು ಸಹಿತ ಹಲವಾರು ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುತ್ತಿಲ್ಲಾ ಡಿಸೆಂಬರ್ 12ರ ಒಳಗೆ ಮನೆ ನಿರ್ಮಿಸಿಕೊಂಡು ನಮ್ಮ ಗಮನಕ್ಕೆ ತಂದಲ್ಲಿ ಜಿಪಿಎಸ್ ಅಳವಡಿಸಿ ಅನುಧಾನ ಬಿಡುಗಡೆಗೆ ಅನುಕೂಲ ಕಲ್ಪಿಸಲಾಗುವದು.

ಒಂದು ವೇಳೆ ನಮ್ಮ ಮಾಹಿತಿಯನ್ನು ಹಾಗೂ ನೋಟಿಸನ್ನು ಲೆಕ್ಕಿಸದೆ ತಮ್ಮ ಮನೆಯ ಕಾಮಗಾರಿಯನ್ನು ಪ್ರಾರಂಬಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಈ ಮೊದಲು ನೀಡಿದ ಹಲವು ಕಂತಿನ ಹಣವನ್ನು ಸರಕಾರಕ್ಕೆ ಹಿಂತಿರುಗಿಸಲು ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯ ಆದೇಶದಂತೆ ಕ್ರಮವಹಿಸಲಾಗುವದು ಆದ್ದರಿಂದ ಫಲಾನುಭವಿಗಳು ಆದಷ್ಟು ಶೀಘ್ರದಲ್ಲೇ ತಮ್ಮ ಮನೆಯ ಕಾಮಗಾರಿ ಪ್ರಾರಂಬಿಸಿ ಅನುಧಾನ ಪಡೆಯಿರಿ ಎಂದರು.

ಈ ಸಂದರ್ಭದಲ್ಲಿ ವಸತಿ ಶಾಖೆ ಸಿಬ್ಬಂದಿ ರವಿ ಯಕ್ಲಾಸಪೂರ ಹಾಜರಿದ್ದರು.

About Mallikarjun

Check Also

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara” ಕರ್ನಾಟಕ ಸರ್ಕಾರಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.