Breaking News

ಅದ್ದೂರಿಯಾಗಿ ಜರುಗಿದ ಗೂತ್ತೂರು ಮಾರುತೇಶ್ವರ ಜಾತ್ರಾ ಮಹೋತ್ಸವ,

Guttur Maruteshwar Jatra Mahotsav,

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುತ್ತೂರಿನ ಮಾರುತೇಶ್ವರನ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆಯ ಮಾರನೆ ದಿನ ಸೋಮವಾರದಂದು ನೆರೆದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಜಯ ಘೋಶದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಕಾರ್ತಿಕ ಮಾಸದಲ್ಲಿ ಬರುವ ಈ ಜಾತ್ರಾ ಮಹೋತ್ಸವಕ್ಕೆ ಹಾಗೂ ಕಾರ್ತಿಕೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು ಒಂದು ದಿನ ಮೊದಲೇ ಆಗಮಿಸಿ ಕಾರ್ತಿಕೋತ್ಸವದಲ್ಲಿ ದೀಪಗಳನ್ನು ಮುಡಿಯುವದು ನೋಡುವದೇ ಒಂದು ಸೊಗಸು. ಸಾವಿರಾರು ಭಕ್ತಾಧಿಗಳು ಪ್ರಣತಿಗಳಲ್ಲಿ ದೀಪ ಹಚ್ಚಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ಆಗಮಿಸಿದ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಕಮೀಟಿಯವರು ಆಯೋಜಿಸಿದ್ದರು.

ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು ಪ್ರತಿ ಶನಿವಾರ, ಅಮವಾಸ್ಯೆ, ಹುಣ್ಣಿಮೆಗಳಂದು ದೇವಸ್ಥಾನದಲ್ಲಿ ನೂರಾರು ಭಕ್ತರು ಬೀಡು ಬಿಟ್ಟಿರುವುದು ಕಂಡು ಬರುತ್ತದೆ.

ಹೌದು ಇಲ್ಲಿಗೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ ಮಾರುತೇಶನ ಆಗಾದ ಶಕ್ತಿಯಾಗಿದ್ದು, ಬೇಡಿ ಬಂದ ಭಕ್ತರ ಇಷ್ಟಾರ್ಥ ಪೂರೈಸುವ ಕಾಮಧೇನುವಾಗಿ ನೆಲೆ ನಿಂತಿದ್ದಾನೆ.

ಇಲ್ಲಿನ ಮಾರುತೇಶನಲ್ಲಿಗೆ ನಾಡಿನ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ತಮ್ಮ ಹರೆಕೆ ಇಡೇರುವವರೆಗೂ ಅಲ್ಲಿಯೇ ಇದ್ದು ತಮ್ಮ ಸಮಸ್ಯೆಗಳು ಸಂಪೂರ್ಣ ಗುಣ ಮುಖವಾದ ನಂತರ ತೆರಳುತ್ತಾರೆ.

ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಗಾಳಿ ಸೋಕಿದವರು, ದೆವ್ವ, ಭೂತ ಹಿಡಿದವರು, ಮಾಟ ಮಂತ್ರಗಳಿಗೆ ಒಳಗಾದವರು ಆಗಮಿಸಿ ಗರ್ಭಗುಡಿಯ ಮುಂದೆ ಕುಳಿತುಕೊಳ್ಳುತ್ತಿದ್ದಂತೆ ದೆವ್ವ, ಭೂತ, ಪೀಡೆ ಇದ್ದವರು ಕೇ ಕೇ ಹಾಕುವುದು, ಚಿರಾಡುವುದು ನೋಡಿದರೇ ಮೈ ಜುಂ ಎಂದು ಭಯ ಬಂದಂತಾಗುತ್ತದೆ.

ಆದರೂ ಮಾರುತೇಶನಲ್ಲಿ ಬಂದೊಡನೆ ಒಳಗಿರುವ ದುಷ್ಟ ಶಕ್ತಿಗಳು ವಿಲ ವಿಲ ಒದ್ದಾಡಿದ ದೃಷ್ಯ ಸಾಮಾನ್ಯವಾಗಿ ಕಾಣಬಹುದು ಮತ್ತು ಇದರ ಜೊತೆಗೆ ಗುಣ ಮುಖರಾಗಿ, ಹರಕೆ ತೀರಿಸಿ ಹೋಗುತ್ತಾರೆ. ಜೊತೆಗೆ ಪ್ರತಿ ಶನಿವಾರ ಇಲ್ಲವೇ ಅಮವಾಸ್ಯೆ, ಹುಣ್ಣಿಮೆಗೆ ಬಂದ ಕಾಯಿ, ಕರ್ಪೂರ ಮಾಡಿಸಿಕೊಂಡು ಹೋಗುತ್ತಾರೆ.

ಇಲ್ಲಿಯವರೆಗೆ ಈ ಮಾರುತೇಶನಿಗೆ ನಡೆದುಕೊಂಡವರು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿಯಿಂದ ಜೀವನ ನಡೆಸುತ್ತೀರುವುದು ಸ್ತುತ್ಯಾರ್ಹವಾಗಿದೆ. ಒಟ್ಟಾರೇ ಆಂಜನೇಯ, ಮಾರುತಿಯ ಶಕ್ತಿಯೇ ಅಗಾದವಾದದು ಎಂದು ಹೇಳುತ್ತಾ ಇಲ್ಲಿಗೆ ಈ ಸ್ಟೋರಿ ಮುಗಿಸ್ತೇವೆ.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.