Breaking News

ಬುಡಕಟ್ಟು ಶಾಲಾ ಮಕ್ಕಳಿಗೆ ಧಾನಿಗಳಾದ ದಂತ ವೈದ್ಯ ಅನಿಲ್ ಕುಮಾರ್ ಶೆಟ್ಟಿರವರ ಬಳಗದಿಂದ ಕಲಿಕಾ ಹಾಗು ಕ್ರೀಡಾ ಸಾಮಗ್ರಿಗಳ ವಿತರಣೆ.

Distribution of educational and sports materials to tribal school children by Dr. Anil Kumar Shetty’s team.

ಜಾಹೀರಾತು


ವರದಿ: ಬಂಗಾರಪ್ಪ ಸಿ.
ಹನೂರು : ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಬ್ಯಾಸ ಮತ್ತು ಸೂಕ್ತ ಸಾಮಾಗ್ರಿಗಳನ್ನು ತಲುಪಿಸುವ ಪ್ರಯತ್ನ ಮಾಡಿದರೆ ಮುಂದಿನ‌ದಿನಗಳಲ್ಲಿ ಅವರ ವಿದ್ಯಾಭ್ಯಾಸವು ಉನ್ನತ ಮಟ್ಟದಲ್ಲಿರುತ್ತದೆ ಎಂದು ಸಮಾಜ ಸೇವಕರು ಹಾಗೂ ಖಾಸಗಿ ಬ್ಯಾಂಕ್ ಶಾಖೆಯ ಮುಖ್ಯಸ್ಥರಾದ ಲೊಕ್ಕನಳ್ಳಿ ಸತೀಶ್ ಕುಮಾರ್ ತಿಳಿಸಿದರು.
ಹನೂರು ತಾಲ್ಲೂಕಿನ ವ್ಯಾಪ್ತಿಯ ಪಿಜಿ ಪಾಳ್ಯ ಗ್ರಾಮ ಪಂಚಾಯತಿಗೆ ಸೇರಿದ ಅತ್ತಿಖಾನೆ ಮತ್ತು ನೆಲ್ಲಿಖಾತ್ರಿ .ಎಂಬ ಪೋಡಿಗಳಿಗೆ ಲೇಖನ ಸಾಮಾಗ್ರಿಗಳನ್ನು ನೀಡಿದ ನಂತರ ಮಾತನಾಡಿದ
ಚಾಮರಾಜನಗರ ಪಟ್ಟಣದ ಹೆಸರಾಂತ ದಂತ ವೈದ್ಯರಾದಂತಹ ಅನಿಲ್ ಕುಮಾರ್ ಶೆಟ್ಟಿ ರವರು ಪಟ್ಟಣಗಳಿಂದ ದೂರದಲ್ಲಿರುವ ಕಾಡಂಚಿನ ಪ್ರದೇಶದಲ್ಲಿ ಓದುವ ಮಕ್ಕಳಿಗೆ ನಮ್ಮಕೈಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರೆ ಸಾಕು, ನಾವುಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈಗಿನ ಕಾಲಘಟ್ಟಗಳೇ ಬೇರೆ ಸರ್ಕಾರಗಳು ಹಾಗೂ ಕೆಲ ಸಂಘ-ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಗಳನ್ನು ನೀಡುತ್ತಿವೆ . ಪಟ್ಟಣಗಳಲ್ಲಿ ವಾಸಿಸುವಂತಹ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಮುಂತಾದ ಕಲಿಕೆ ಸಾಮಗ್ರಿಗಳು ಹಾಗೂ ಆಟವಾಡಲು ಬೇಕಾಗಿರುವ ಕ್ರೀಡಾ ಸಾಮಗ್ರಿಗಳು ಬೇಕು ಎನ್ನುವ ಸಮಯಕ್ಕೆ ಸಿಗುತ್ತವೆ, ಆದರೆ ಓಡಾಡಲು ಒಂದು ಸಾರಿಗೆ ವ್ಯವಸ್ಥೆಯು ಇಲ್ಲದಂತಹ ಇಂತಹ ಹಾಡಿಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ಹೆಚ್ಚು ,ಇಂತಹ ಕಷ್ಟದ ಸಂದರ್ಭಗಳಲ್ಲೂ ತಮ್ಮ ಮಕ್ಕಳು ತಮ್ಮಂತಾಗದೆ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆ ಕೆಲಸಕ್ಕೆ ಹೋಗಲಿ ಎಂದು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವಂತಹ ಬುಡಕಟ್ಟು ಜನಾಂಗದವರಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ತಿಳಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕ ಆಹಾರಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಸಮಾಜ ಸೇವಕರಾದ ಗುರುಸ್ವಾಮಿ ಮಾತನಾಡಿ ನಮ್ಮ ಸ್ನೇಹ ಬಳಗವು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಬುಡಕಟ್ಟು ಶಾಲಾ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಪೆನ್ಸಿಲ್ ಮುಂತಾದವುಗಳನ್ನು ಒಳಗೊಂಡಂತಹ ಕಲಿಕಾ ಸಾಮಗ್ರಿಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದೆವೆ ಎಂದರು .
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರುಗಳಾದ ಹರೀಶ್ ,ವಿಜಯ್ ಕುಮಾರ್ ಸೇರಿದಂತೆ ಇನ್ನಿತರ ಶಿಕ್ಷಕರು ಹಾಜರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.