Breaking News

ಬಸನಗೌಡ ಪಾಟೀಲ್ ಯತ್ನಾಳ್‌ ಕ್ಷಮೆ ಕೇಳದಿದ್ದರೆ ಅವರ ಮನೆಗೆ ಮುತ್ತಿಗೆ -ವೀರೇಶ ಅಸರೆಡ್ಡಿ

If Basanagowda Patil Yatnal does not apologize, his house will be besieged – Veeresh Asareddy

ಜಾಹೀರಾತು


ಗಂಗಾವತಿ,ಡಿ,2:ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಅವಹೇಳನಕಾರಿಯಾಗಿ ಮಾತನಾಡಿದ ವಿಜಯಮರ ಯತ್ನಾಳರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಜರುಗಿಸುವ ಬಗ್ಗೆ. ಬಸವಣ್ಣನವರ ಬಗ್ಗೆ ಶಾಸಕ ಬಸವನಗೌಡ ಶಿಸ್ತು ಕಾನೂನು ಕ್ರಮ ಕೈಗೊಳ್ಳ ಬೇಕು ಮತ್ತು ಕ್ಷಮೆ ಹೇಳಬೇಕು. ಇಲ್ಲದಿದ್ದರೆ ಯತ್ನಾಳ ಮನೆಗೆ ಮುತ್ತಿಗೆ ಹಾಕಲಾಗುದೆಂದು ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಮತ್ತು ಗಣಾಚಾರಿ ದಳದ ರಾಜ್ಯಾದ್ಯಕ್ಷ. ವೀರೇಶ ಅಸರಡ್ಡಿ ಒತ್ತಾಯಿಸಿದರು.



ಇಂದು ನಗರದ ಶ್ರೀ ಕೃಷ್ಣ ದೇವರಾಯ ವೃತ್ತ ದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಆಯೋಜಿಸಿದ್ದ ಪ್ರತಿಭಟನೆ ರ್ಯಾಲಿಯಲ್ಲಿ ಮಾತನಾಡಿ ವಿಜಯಪುರ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳರವರು ಇತ್ತೀಚೆಗೆ ತಮ್ಮ ಪಕ್ಷದವತಿಯಿಂದ ಬೀದರ್ ನಲ್ಲಿ ವೆಕ್ಸ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಾ, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಅಂಗೈಕ್ಯದ ಬಗ್ಗೆ

ಅವಹೇಳನಕಾರಿಯಾಗಿ ಭಾಷಣ ಮಾಡಿ, ಬಸವಣ್ಣನವರಿಗೆ ಅಪಮಾನವೆಸಗಿದ್ದಾರೆ. ಇದನ್ನು ಬಸವಾಭಿಮಾನಿಗಳು ತೀವ್ರವಾಗಿ ಖಂಡಿಸುತ್ತೇವೆ.
ಬಸನಗೌಡ ಪಾಟೀಲ್ ಯತ್ನಾಳ್‌ರವರು ಪ್ರತಿಭಟನೆಯಲ್ಲಿ ನಾಲಿಗೆ ಹರಿಬಿಟ್ಟು. ವಕ್ಸ್ ವಿರುದ್ಧ ಎಲ್ಲರೂ ದಂಗೆ ಏಳಬೇಕು. ಇಲ್ಲದಿದ್ದರೆ ಬಸವಣ್ಣ ಹೊಳೆಗೆ ಹಾರಿದಂತೆ ಹಾರಬೇಕಾಗುತ್ತದೆ ಇಲ್ಲವೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕಾಗುತ್ತದೆ ಎಂಬುವ ರೀತಿಯಲ್ಲಿ ಹನ್ನೆರಡನೇ ಶತಮಾನದ

ಸಮಾನತೆಯ ಹರಿಕಾರ ವಿಶ್ವಗುರು ಬಸವೇಶ್ವರರ ಅಂಗೈಕ್ಯತೆಯ ಬಗ್ಗೆ ಹಗುರವಾಗಿ ಮಾತನಾಡಿ ಬಸವಣ್ಣನವರಿಗೆ ಅಪಮಾನ ಮಾಡಿದ್ದರೆ. ಈ ಹೇಳಿಕೆಯು ಅವರ ಕೆಳಮಟ್ಟದ ವ್ಯಕ್ತಿತ್ವವನ್ನು ತೋರಿಸಿದ್ದು. ಇವರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಂಡು ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ತಹಸಿಲ್ದಾರ ಮೂಲಕ ಗೌರವಾನ್ವಿತ ಶ್ರೀ ಥಾವರಚೆಂದ್ ಗೇಪ್ಲೋಟ್‌ರವರು.


ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ, ರಾಜಭವನ ಇವರಿಗೆಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರು ಹೆಚ್. ಮಲ್ಲಿಕಾರ್ಜುನ ಹೊಸಕೇರಿ,ಅಧ್ಯಕ ದಿಲೀಪಕುಮಾರ ವಂದಾಲ,ಉಪಾಧ್ಯಕ್ಷ ಕೆ. ವೀರೇಶಪ್ಪ, ಚನ್ನಬಸಮ್ಮ ಕಂಪ್ಲಿ, ಬಸಜೋತಿ ಲಿಂಗಾಯತ, ರತ್ನಮ್ಮ ಅರೇಗಾರ,ಹೆಚ, ಕವಿತಾ ರಗಡಪ್ಪ,ರೇಣಕಮ್ಮ ಗೌಡ್ರ,ಚನ್ನಬಸಪ್ಪ ಅರೇಗಾರ,ಮಲ್ಲಿಕಾರ್ಜುನ ಅರಲಳ್ಳಿ,ಪುರುಷೋತ್ತಮ

ಹಡಪದ್,ವಿನಯಕುಮಾರ ಅಂಗಡಿ ನೂರಮುಮ್ಮದ ಇಟಿಗಿ,ದುರಗಲ್ಲ ಚಲವಾದಿ ಮುಂತಾದವರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.