Efficiency, transparency in agricultural marketing system: KMF president S Bhimanayak

ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ಸದಸ್ಯರ ವತಿಯಿಂದ ಅಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಸೋಮವಾರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ಮಾತನಾಡಿ ಎಲ್ಲಾ ಸದಸ್ಯರು ಕೃಷಿ ಉತ್ಪನ್ನ ಮಾರಾಟ ನೀತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತಂದು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಿ,ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನಾಗಿಸಿ ಎಂದು ಹೇಳಿದರು
ಈ ಸಂಧರ್ಭದಲ್ಲಿ ಕೂಡ್ಲಿಗಿ ಶಾಸಕ ಶ್ರೀ ಎನ್.ಟಿ ಶ್ರೀನಿವಾಸ್,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ದ್ವಾರುಕೇಶ್,ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ರಮೇಶ್, ಪುರಸಭೆ ಅಧ್ಯಕ್ಷರಾದ ಶ್ರೀ ಮರಿ ರಾಮಪ್ಪನವರು,ಕೆ.ಪಿ.ಸಿ.ಸಿ ಸದಸ್ಯರಾದ ಗೂಳಿ ಮಲ್ಲಿಕಾರ್ಜುನ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೋರಿ ಗೋಣಿ ಬಸಪ್ಪನವರು, ಪುರಸಭೆ ಸದಸ್ಯರಾದ ಡಿಶ್ ಬಾಳಪ್ಪನವರು, ಮುಖಂಡರಾದ,ನಾಗರಕಟ್ಟೆ ರಾಜೇಂದ್ರ ಪ್ರಸಾದ್ ,ಅಕ್ಕಿ ತೋಟೇಶ್,ಡಿಶ್ ಮಂಜುನಾಥ್, ಉಚ್ಚಪ್ಪ ಸೇರಿದಂತೆ ಇನ್ನು ಅನೇಕ ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
