Rahul Ratnam Pandey promises site inspection for construction of toilet in Anegundi on Oct-2: Sindhu D
ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮವು ಐತಿಹಾಸಿಕ, ಪುರಾಣ, ಪೌರಾಣಿಕ ಹಾಗೂ ವಿಶ್ವ ಪಾರಂಪರಿಕ ಪ್ರಸಿದ್ಧ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದು ವೀಕ್ಷಿಸಿ ಹೋಗುವಂತಹ ಸ್ಥಳವಾಗಿರುತ್ತದೆ. ದುರಂತವೇನೆAದರೆ, ಆನೆಗುಂದಿ ಭಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇರುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿರುವುದಿಲ್ಲ. ಈಗ ಜಿಲ್ಲಾ ಪಂಚಾಯತ್‌ನ ಸಿ.ಇ.ಓ ಆದ ರಾಹುಲ್ ರತ್ನಂ ಪಾಂಡೆ ಅವರು ಆನೆಗೊಂದಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲು ಅಕ್ಟೋಬರ್-೨ ರಂದು ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪರಿಸರ ಪ್ರೇಮಿಯಾದ ಕೇಂದ್ರೀಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಸಿಂಧು ಡಿ ರವರು ಹರ್ಷ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಶಾರ್ವಜನಿಕ ಶೌಚಾಲಯ ಇಲ್ಲದೇ ಸುತ್ತ-ಮುತ್ತಲಿನ ಪ್ರದೇಶದಲ್ಲಿರುವ ಹೋಟೆಲ್‌ಗೆ ಹೋಗಿ ಶೌಚಾಲಯ ಉಪಯೋಗಿಸಿಕೊಂಡು ಬರುವ ಸ್ಥಿತಿ ಬಂದೊದಗಿರುತ್ತದೆ. ಪ್ರಸ್ತುತ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಶೌಚಾಲಯ ನಿರ್ಮಾಣಕ್ಕೆ ಮುಂದಾಗಲು ಭರವಸೆ ನೀಡಿದ್ದು, ಈ ಭಾಗದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹರ್ಷದಾಯಕವಾಗಿದೆ. ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಅಕ್ಟೋಬರ್-೨ ಬೆಳಿಗ್ಗೆ ೧೧ ರವರೆಗೆ ಕಾಯ್ದು, ಒಂದು ವೇಳೆ ಮಾತು ತಪ್ಪಿದಲ್ಲಿ ಬೆಳಿಗ್ಗೆ ೧೧ ಗಂಟೆಯ ನಂತರ ಪ್ರತಿಭಟನೆ ನಡೆಸಲಗುವುದು