No problem for drug dealers: Nagarsabha President Maula Saab
ಗಂಗಾವತಿ:ನಗರದ ಕೆಲವು ಕಡೆ ಕೆಲವು ವ್ಯಕ್ತಿಗಳು ಅಸಹಜವಾಗಿ ಔಷಧ ಸೇವನೆ ಮಾಡುತ್ತಿರುವ ಬಗ್ಗೆ ವರದಿಗಳು ಬಂದಿದ್ದು, ಇದರಿಂದ ಕಾನೂನು ಪ್ರಕಾರ ವ್ಯವಹರಿಸುವ ಔಷಧ ವ್ಯಾಪಾರಿಗಳಿಗೆ ತೊಂದರೆ ಕೊಡುವುದು ಬೇಡ ಎಂದು ನಗರ ಸಭಾ ಅಧ್ಯಕ್ಷ ಮೌಲಾ ಸಾಬ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಔಷಧೀಯ ಭವನದಲ್ಲಿ ಎಂಟಿ ಬಯೋಟಿಕ್ ದುರುಪಯೋಗಗಳ ಕುರಿತು ಪ್ರಕಟಿಸಲಾದ ‘ಪೋಷ್ಟರ’ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಜನರ ಜೀವ ಉಳಿಸುವ ಔಷಧ ವ್ಯಾಪಾರಿಗಳಿಗೆ ವಿನ್ಹ ಕಾರಣ ತೊಂದರೆಯಾಗಬಾರದು.ಅಧಿಕಾರಿಗಳು, ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದವರು ಒತ್ತಾಯಿಸಿದರು.
ನಗರ ಸಭೆಯ ಸ್ಯಾನಿಟರಿ ಇನ್ಸಪೆಕ್ಟರ್ ಅವರ ಮೂಲಕ ಔಷಧ ವ್ಯಸನಿಗಳ ಪತ್ತೆಗೆ ಸಹಕಾರ ನೀಡಬೇಕು ಎಂದು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಗರ ಸಭೆ ಅಧ್ಯಕ್ಷರು, ಮತ್ತು ಸದಸ್ಯರನ್ನು ಕೋರಿದರು.ಸತ್ಯಾ ಸತ್ಯತೆಯನ್ನು ಪತ್ತೆ ಹಚ್ಚಲು ಔಷಧ ವ್ಯಾಪಾರಿಗಳು ಮುಂದಾಗ ಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಮನೋಹರ ಸ್ವಾಮಿ, ಉಸ್ಮಾನ್ ಬಿಚ್ಕತ್ತಿ , ಸೋಮನಾಥ್ ಭಂಡಾರಿ,ನವೀನ್ ಮಾಲಿ ಪಾಟೀಲ್, ವಾಸುದೇವ್ ನವಲಿ, ಪರಶುರಾಮ್ ಮಡ್ಡೇರ್ ಸೇರಿದಂತೆ ಪ್ರಮುಖರಾದ ರಾಜಪ್ಪ ಸಿದ್ದಾಪುರ, ಸೋಮ್ನಾಥ್ ಕಂಪ್ಲಿ ಮತ್ತು ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಿಜಯನಗರ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಮ್.ಬಿ.ಬಿ.ಎಸ್.ಪದವಿ ಪಡೆದು,ವೈಧ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 1734 ನೇ ರ್ಯಾಂಕ ಪಡೆದ ಎಚ್.ವಿ.ಫ಼ಾರ್ಮಾ ಮಾಲೀಕರಾದ ಫ಼ಾರ್ಮಾಸಿಸ್ಟ ಎಸ್. ನಾಗರಾಜ ಮತ್ತು ಶ್ರೀಮತಿ ಲತಾ ಅವರ ಪುತ್ರ ಡಾ.ಎಸ್.ಪ್ರಜ್ವಲ್ ಅವರನ್ನು ಮತ್ತು ಸುಜಾತಾ ಮೆಡಿಕಲ್ ಸ್ಟೊರ್ಸ್ ಮಾಲೀಕರಾದ ಮರೆಗೌಡ ಮಾಲಿ ಪಾಟೀಲ್ ಮತ್ತು ಶ್ರೀಮತಿ ಸುಜಾತಾ ಇವರ ಪುತ್ರಿ ಶೃತಿ ಬೂದಗುಂಪಾ ಡಾಕ್ಟರೇಟ್ ಪದವಿಗೆ ಭಾಜನರಾಗಿರುವುದಕ್ಕೆ ಅವರನ್ನು ಸನ್ಮಾನಿಸಲಾಯಿತು.
200 ಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಸಭೆಯಲ್ಲಿ ಹಾಜರಿದ್ದರು.