A request to the Minister to fulfill the various demands of the civil service employees
ಮಾನ್ವಿ: ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರಸೇವ ನೌಕರರ ಸೇವಾ ಸಂಘದ ತಾಲೂಕು ಘಟಕ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ರವರಿಗೆ ಅಖಿಲ ಕರ್ನಾಟಕ ರಾಜ್ಯ ಪೌರಸೇವ ನೌಕರರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಹಂಪಯ್ಯ ಪಾಟೀಲ್ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಮನವಿ ಸಲ್ಲಿಸಿ ಮಾತನಾಡಿ ತಾವುಗಳು ಮುಖ್ಯಮಂತ್ರಿಗಳು ಹಾಗೂ ಪೌರಾಡಳಿತ ಸಚಿವರಲ್ಲಿ ಮಾತನಾಡಿ ರಾಜ್ಯದಲ್ಲಿ ಸಮುದಾಯ ಸಂಘಟನಾಧಿಕಾರಿಗಳಾಗಿ ವಿವಿಧ ಪುರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ತಮ್ಮ ಸ್ವಂತ ವೇತನ ಶ್ರೇಣಿಯಲ್ಲಿ ಮುಖ್ಯಾಧಿಕಾರಿ ಮತ್ತು ಪೌರಾಯುಕ್ತರನ್ನಾಗಿ ಅವಕಾಶ ಮಾಡಿಕೊಡಬೇಕು.ರಾಜ್ಯದಲ್ಲಿ ಸಮುದಾಯ ಸಂಘಟನಾಧಿಕಾರಿ ಖಾಲಿ ಇರುವ ಹುದ್ದೆಗಳಿಗೆ ರಾಜ್ಯಗಳಲ್ಲಿ ಈಗಾಗಲೇ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಘಟಕರಿಗೆ ಸಮುದಾಯ ಸಂಘಟನಾಧಿಕಾರಿಗಳಾಗಿ ಮುಂಬಡ್ತಿ ನೀಡಬೇಕು. ಹಿರಿಯ ಆರೋಗ್ಯ ನಿರೀಕ್ಷಕರಿಗೆ ಕೆ.ಎಮ್.ಎಸ್ ಗೆ ಮುಂಬಡ್ತಿ ನೀಡಬೇಕು ಗುತ್ತಿಗೆ ಆಧಾರದ ಮೇಲೆ ಹಾಗೂ ದಿನಗೂಲಿಯಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿನಿಯರ್ ಮತ್ತು ಜೂನಿಯರ್ ಪ್ರೋಗ್ರಾಮರ್ ಗಳನ್ನು , ಅಕೌಂಟೆಂಟ್‌ಗಳನ್ನು, ನೀರು ಸರಬರಾಜು ಸಿಬ್ಬಂದಿಗಳನ್ನು ,ಪೌರಕಾರ್ಮಿಕರನ್ನು,ವಿದ್ಯುತ್ ಲೈನ್ ಮ್ಯಾನ್ ಗಳನ್ನು ಕ್ಷೇಮಾಭಿವೃದ್ದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಕಾಯಂ ಮಾಡುವ ಮೂಲಕ ಅವರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮಾನ್ವಿ ಪುರಸಭೆಯ ಆರೋಗ್ಯ ನಿರೀಕ್ಷಕರಾದ ಮಹೇಶ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.