Sec. On the 27th of Vibhava Vishwakarma Mahotsavam – Dr. B.M. Umesh Kumar
ಬೆಂಗಳೂರು; ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ಇದೇ 27ರಂದು ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ರಾಜ್ಯಸಭಾ ಸದಸ್ಯ, ಚಿತ್ರನಟ ಜಗ್ಗೇಶ್ ಮಹೋತ್ಸವವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಸಂದೇಶದ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದ್ದಾರೆ ಎಂದರು.
ಆಡಳಿತ ಕ್ಷೇತ್ರದಲ್ಲಿ ಭಾರತೀಯ ಸಮಾಚಾರ ಸೇವೆ ಅಧಿಕಾರಿ ಸುಹಾಸ್ ರಾಮಚಂದ್ರಚಾರ್, ಕೆ.ಎ.ಎಸ್ ಅಧಿಕಾರಿ ಆರ್. ಉಮಾದೇವಿ, ರಾಜಕೀಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರ ರಾಮಪ್ಪ ಬಡಿಗೇರ್, ಚಲನಚಿತ್ರದಲ್ಲಿ ಚಲನಚಿತ್ರ ಕಲಾವಿದೆ ವೀಣಾ ಸುಂದರ್, ಸಮುದಾಯ ಸೇವಾ ಕ್ಷೇತ್ರದಲ್ಲಿ ಬಿ.ಎನ್.ವಿ. ರಾಜಶೇಖರ್ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಸಂಗೀತ ಕ್ಷೇತ್ರದಲ್ಲಿ ರಾಜೇಶ್ ಕೃಷ್ಣನ್, ಶಾಸ್ತ್ರೀಯ ನೃತ್ಯಪಟು ಡಾ. ಶ್ರೀಧರ್, ಆಡಳಿತ ಕ್ಷೇತ್ರದಲ್ಲಿ ಡಿಜಿಪಿ ನಂಜುಂಡಸ್ವಾಮಿ, ಕಲಾವಿದ ಡಿ. ಮಹೇಂದ್ರ, ಬರಹಗಾರ ನಾಡೋಜ ಎಸ್. ಷಡಾಕ್ಷರಿ, ಯೋಗ ಗುರು ಆರಾಧ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜ್, ವಾಸವಿ ಆಸ್ಪತ್ರೆ, ಪಂಚಶಿಲ್ಪಿಗಳಾದ ರಾಜಗೋಪಾಲ ಆಚಾರ್ಯ, ನಂಜುಂಡಸ್ವಾಮಿ, ವೆಂಕಟರಮಣಾಚಾರಿ, ಎಂ. ಶಂಕರ್ ಮೂರ್ತಿ, ಎನ್ ಶಂಕರಾಚಾರ್ಯ ಹಾಗೂ ಗೌರವ ಪ್ರಶಸ್ತಿಗಳನ್ನು ಪಿ.ಲಿಂಗಾಚಾರ್, ಬಾಲಸುಬ್ರಹ್ಮಣ್ಯ ಚಾರಿ, ಗಿರಿಧರ್ ಲಾಲ್ ಜಹಂಗೀಡ್, ಮಾನಪ್ಪ ಪತ್ತಾರ, ಕೆ.ಪಿ ಸ್ವಾಮಿ, ಉಮಾಶಂಕರಾಚಾರ್ಯ, ಭಾಜನರಾಗಿದ್ದು ಪ್ರಶಸ್ತಿ ಪುರಸ್ಕೃತ ರೆಲ್ಲರಿಗೂ ವಿಶ್ವಕರ್ಮ ಭಾವಚಿತ್ರದ ಸ್ಮರಣಿಕೆ, ಫಲಕ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸ್ಮಾರಕ ಪ್ರಶಸ್ತಿ ವಲಯದಲ್ಲಿ ಖಂಜಿರ ವಿದ್ವಾನ್ ಎಚ್.ಪಿ. ರಾಮಾಚಾರ್, ಖ್ಯಾತ ಸಂಗೀತ ಹಾಗೂ ಮೃದಂಗ ವಿದ್ವಾಂಸರು ಆನೂರು ಅನಂತ ಕೃಷ್ಣ ಶರ್ಮ, ತುಮಕೂರಿನ ಶಿಲ್ಪಿ ದಿ. ಕೆ.ಎಚ್. ರಾಜಶೇಖರಚಾರ್ ಪ್ರಶಸ್ತಿಗೆ ಸ್ವರ್ಣ ಶಿಲ್ಪಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಗಡಿ ಪ್ರದೇಶಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ವೇದಮೂರ್ತಿ, ಶಿಲ್ಪಿ ಹೊನ್ನಪ್ಪಾಚಾರ್, ಜಿ.ಶಂಕರ್, ಚಂದ್ರಶೇಖರ ಚಾರಿ , ಬಿ. ರುದ್ರಾಚಾರ್, ಎಸ್. ನಂಜುಂಡ ಪ್ರಸಾದ್, ಡಾ. ಆರ್. ಮಧುಸೂದನ್, ಬಾಲಾಜಿ ಹಾಗೂ ಆರ್. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.