Breaking News

ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುವುದು ನ್ಯಾಯ ಸಮ್ಮತವಲ್ಲ: ಸೈಯ್ಯದ್ ಹಾಷ್ಮುದ್ದೀನ್ ವಕೀಲರು

Demanding Chief Minister’s resignation is not fair: Syed Hashmuddin Advocate

ಜಾಹೀರಾತು

ಗಂಗಾವತಿ: ಮೂಡಾ ಹಗರಣಕ್ಕೆ ಸಂಬAಧಿಸಿದAತೆ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಾಹಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಇವರುಗಳು ರಾಜ್ಯಪಾಲರ ಸಮಕ್ಷಮ ತನಿಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ ದಿನದಿಂದ ಈ ಕ್ಷಣದವರೆಗೂ ವಿರೋಧ ಪಕ್ಷದಗಳ ನಾಯಕರುಗಳು ಹಾಗೂ ಮುಖಂಡರು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ರಾಜಿನಾಮೆಗೆ ಆಗ್ರಹಿಸುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಮಾಜಿ ಜಿಲ್ಲಾ ಅಧ್ಯಕ್ಷರು ಹಾಗೂ ವಕೀಲರಾದ ಸೈಯ್ಯದ್ ಹಾಷುಮುದ್ದೀನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.


ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಮಾನ್ಯ ಮುಖ್ಯ ಮಂತ್ರಿಗಳು ಹಲವು ಬಾರಿ ಶಾಸಕರಾಗಿ, ಮಂತ್ರಿಗಳಾಗಿ, ಉಪ ಮುಖ್ಯಮಂತ್ರಿಗಳಾಗಿ ಪ್ರಸ್ತುತ ಮುಖ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಂಪೂರ್ಣ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯನ್ನು ಹೊಂದಿರುವುದಿಲ್ಲ. ಇಂತಹ ಹಿರಿಯ ರಾಜಕೀಯ ಧುರೀಣರನ್ನು ತೇಜೋವಧೆ ಮಾಡುವ ರಾಜಕೀಯ ಪಿತೂರಿಯ ಭಾಗವಾಗಿ ಸಾಮಾಜಿಕ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ.
ರಾಜ್ಯಪಾಲರು ಅರ್ಜಿದಾರರ ದೂರಿನೊಂದಿಗೆ ಸಲ್ಲಿಸಿರುವ ದಾಖಲೆಗಳ ನಿಜಾಂಶವನ್ನು ಅರ್ಥೈಸಿಕೊಳ್ಳದೇ ಸಾಮಾನ್ಯ ಜ್ಞಾನದಿಂದ ಕೂಡ ಅವುಗಳನ್ನು ಪರೀಶೀಲಿಸದೆ ಮುಖ್ಯಮಂತ್ರಿಗಳ ಪಾತ್ರದ ಬಗ್ಗೆ ಲವಲೇಶವೂ ಇಲ್ಲದಿದ್ದರೂ ಕೂಡ ಅನುಮತಿ ನೀಡಿರುವುದು ನ್ಯಾಯ ಸಮ್ಮತವಲ್ಲ. ಈಗಾಗಲೇ ಉಚ್ಚ ನ್ಯಾಯಾಲಯವು ಕೂಡ ಕಲಂ ೨೧೮ ಬಿ.ಎನ್.ಎಸ್.ಎಸ್. ಅಡಿ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ ೧೭ಎ ಅಡಿ ಅನುಮತಿ ನೀಡಿರುವುದು ಕೂಡ ಪ್ರಕರಣದ ವಾಸ್ತವಿಕ ಅಂಶಗಳ ಮೇಲೆ ನ್ಯಾಯ ಸಮ್ಮತವಾಗಿಲ್ಲ.
ಕಸರ ಗ್ರಾಮದ ಸರ್ವೇ ನಂ. ೪೬೪ ವಿಸ್ತೀರ್ಣ ೦೩-೧೬ ಗುಂಟೆ ಭೂಮಿಯು ಮೂಲತಃ ನಿಂಗ ತಂದೆ ಜವರ ಇವರಿಗೆ ಸಂಬAಧಿಸಿದ ಆಸ್ತಿಯಾಗಿದ್ದು ಕಾಲ ಕ್ರಮೇಣ ಕಂದಾಯ ದಾಖಲೆಗಳಲ್ಲಿ ಆಗಿರುವ ವ್ಯತ್ಯಾಸಕ್ಕೆ ದೂರುದಾರರು ಮುಖ್ಯ ಮಂತ್ರಿಯವರನ್ನು ಹೇಗೆ ಜವಾಬ್ದಾರರನ್ನಾಗಿಸುತ್ತಾರೆ? ಅಲ್ಲದೇ ಸದರಿ ಭೂಮಿಯು ದಿನಾಂಕ ೨೦-೦೮-೧೯೯೭ ರಂದು ಭೂಸ್ವಾಧೀನವಾಗಿದ್ದು ದಿನಾಂಕ: ೩೦-೦೩-೧೯೯೮ ರಂದು ಪರಿಹಾರಧನ ರೂ. ೩,೨೪,೭೦೦/- ಎಂದು ನಿಗದಿಯಾಗಿದ್ದು, ಭೂ ಮಾಲೀಕರು ಪರಿಹಾರ ಪಡೆಯದೇ ತಮ್ಮ ಭೂಮಿಯನ್ನು ಹಿಂದುರುಗಿಸಲು ಮನವಿ ಮಾಡಿದ್ದು ದಿನಾಂಕ: ೧೮-೦೫-೧೯೯೮ ರಂದು ಡಿ-ನೋಟಿಫೈ ಆಗಿರುತ್ತದೆ. ವಾಸ್ತವಿಕತೆ ಹೀಗಿದ್ದರೂ ಮೂಡಾದವರು ಭೂಮಿ ಅಭಿವೃದ್ದಿಪಡಿಸಿ ೨೦೦೩-೨೦೦೪ ರಲ್ಲಿ ಖರೀದಿ ಪತ್ರಗಳನ್ನು ರಚಿಸಿ ಫಲಾನುಭವಿಗಳ ಹೆಸರಿನಲ್ಲಿ ನೊಂದಣಿ ಮಾಡಿಸಿದ್ದು ಕಾನೂನು ಬಾಹೀರವಾಗಿದ್ದು, ಸಾಮಾಜಿಕ ಕಾರ್ಯಕರ್ತರು ಅಂತಹ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರದೇ ಇರುವುದು ಅವರ ದುರುದ್ದೇಶವನ್ನು ಸ್ಪಷ್ಟಪಡಿಸುತ್ತದೆ.
ಡಿ-ನೋಟಿಫೈ ಆದ ಸದರಿ ಭೂಮಿಯನ್ನು ೨೦೦೩-೨೦೦೪ ರಲ್ಲಿ ಬಿ.ಎಮ್. ಮಲ್ಲಿಕಾರ್ಜುನ ಸ್ವಾಮಿ ತಂದೆ ಮರಿಲಿಂಗಯ್ಯ (ಮುಖ್ಯ ಮಂತ್ರಿಗಳ ಅಳಿಯ) ರೂ. ೫,೯೫,೦೦೦/- ಗಳಿಗೆ ಖರೀದಿಗೆ ಪಡೆದಿದ್ದು, ಅವರ ಹೆಸರಿಗೆ ವರ್ಗಾವಣೆ ಆಗಿದ್ದು, ೨೦೧೦-೨೦೧೧ ರಲ್ಲಿ ಸದರಿ ಭೂಮಿಯನ್ನು ತನ್ನ ಸಹೋದರಿ ಶ್ರೀಮತಿ ಬಿ.ಎಮ್. ಪಾರ್ವತಿ (ಮುಖ್ಯ ಮಂತ್ರಿಗಳ ಪತ್ನಿ) ಇವರಿಗೆ ನೊಂದಾಯಿತ ದಾನಪತ್ರದ ಮುಖಾಂತರ ನೀಡಿದ್ದು ಅದು ಅವರ ಹೆಸರಿನಲ್ಲಿ ವರ್ಗಾವಣೆ ಆಗಿರುತ್ತದೆ. ಈ ಎಲ್ಲಾ ವಾಸ್ತವಿಕ ಅಂಶಗಳನ್ನು ಪರೀಶೀಲಿಸಿದಾಗ ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಯಾವುದೇ ಪಾತ್ರ ಇಲ್ಲದಿರುವುದು ಸ್ಪಷ್ಟವಾಗುತ್ತದೆ.
ಆದ್ದರಿಂದ ವಿರೋಧ ಪಕ್ಷಗಳ ನಾಯಕರು ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ವಾಸ್ತವಿಕ ಅಂಶಗಳನ್ನು ಅರ್ಥ ಮಾಡಿಕೊಳ್ಳದೇ ಮುಖ್ಯ ಮಂತ್ರಿಗಳ ರಾಜಿನಾಮೆಗೆ ಆಗ್ರಹಿಸಿ ತೇಜೋವಧೆ ಮಾಡುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಮಾಜಿ ಜಿಲ್ಲಾ ಅಧ್ಯಕ್ಷರು ಹಾಗೂ ವಕೀಲರಾದ ಸೈಯ್ಯದ್ ಹಾಷುಮುದ್ದೀನ್ ಹಾಗೂ ಯುವ ಮುಖಂಡ ಹಾಗೂ ಚಿತ್ರನಟ ವಿಷ್ಣುತೀರ್ಥ ಜೋಶಿ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.