Cooperation of private doctors is essential in building a tuberculosis free society
ಗಂಗಾವತಿ: ಕ್ಷಯ ಮುಕ್ತ ಸಮಾಜ ನಿರ್ಮಾಣ ಖಾಸಗಿ ವೈದ್ಯರ ಸಹಕಾರ ಅವಶ್ಯ ಜಿಲ್ಲಾ ಪಿ ಪಿ ಎಂ ಶ್ರೀ ಗೋಪಾಲಕೃಷ್ಣ ಬಿ ಕ್ಷಯರೋಗ ಆರೋಗ್ಯ ಪರಿವೀಕ್ಷಕ ಶ್ರೀ ಮಲ್ಲಿಕಾರ್ಜುನ್ ಎಚ್ ಇವರುಗಳು ಇಂದು ಗಂಗಾವತಿ ನಗರದ ಖಾಸಗಿ ಆಸ್ಪತ್ರೆಯ ಮತ್ತು ಔಷಧಿ ಅಂಗಡಿಗಳ ಬೇಟಿ ಕ್ಷಯ ಮುಕ್ತ ಸಮಾಜದ ನಿರ್ಮಾಣ ಮಾಡುವಲ್ಲಿ ಖಾಸಗಿ ವೈದ್ಯರ ಸಹಕಾರ ಅತೀ ಅವಶ್ಯಕತೆ ಇದೆ ಸರ್ಕಾರಿ ವ್ಯವಸ್ಥೆ ಯಲ್ಲಿ ತಪ್ಪಿ ಹೋದ ಅನೇಕ ಸಂಶಯಾಸ್ಪದ ಕ್ಷಯ ರೋಗಿಗಳು ಖಾಸಗಿಯಲ್ಲಿ ಪರೀಕ್ಷೆಗೆ ಒಳಪಟ್ಟು
ಚಿಕಿತ್ಸೆಯಲಿರುತ್ತಾರೆ ಅಂತಹ ಎಲ್ಲಾ ಕ್ಷಯ ರೋಗಿಗಳ ಮಾಹಿತಿಯನ್ನು ಸರ್ಕಾರಿ ವ್ಯವಸ್ಥೆಗೆ ತಿಳಿಸಿದಾಗ ಆ ರೋಗಿಗಳಿಗೆ ನೀಡುವ ಎಲ್ಲಾ ಸವಲತ್ತುಗಳ ಜೊತೆಗೆ ಹೆಚ್ಚಿನ ಪರೀಕ್ಷೆ ಮೊದಲ ಹಂತದ ರೋಗನಿರೋಧಕ ಪರೀಕ್ಷೆ ರಾಯಚೂರು ಮತ್ತು ಬೆಂಗಳೂರಿನಲ್ಲಿ ಇರುವ ವಿಶೇಷ ಪ್ರಯೋಗಾಲಯಗಳಿಗೆ ಕಳುಹಿಸಿ ಯಾವ ಹಂತದ ಮಾತ್ರೆಯ ನಿರೋಧಕತೆ ಇದೆ ಎಂದು ದೃಢಪಡಿಸಿ ರೋಗಿಗೆ ಅವಶ್ಯಕತೆ ಇರುವ ಮೊದಲ ಹಂತದ ಅಥವಾ ಬಹು ಔಷಧ ನಿರೋಧಕತೆಯ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು ಹಾಗೂ ಪ್ರತಿ ತಿಂಗಳು ನಿಕ್ಷೇಯ ಪೋಷಣೆ ಅಡಿಯಲ್ಲಿ 500 ಗಳ ಸಹಾಯಧನ ಮತ್ತು ಚಿಕಿತ್ಸೆಯಲ್ಲಿರುವ ಬಡ ಕ್ಷಯ ರೋಗಿಗಳಿಗೆ ನಿಕ್ಷಯ ಮಿತ್ರ ಅಡಿಯಲ್ಲಿ ದವಸ ಧಾನ್ಯಗಳನ್ನು ನೀಡಲಾಗುವುದು ಆದ್ದರಿಂದ ಗಂಗಾವತಿ ನಗರದ ಪ್ರತಿಷ್ಠಿತ ಖಾಸಗಿ ವೈದ್ಯರಾದ ಡಾ ಚಂದ್ರಪ್ಪ ಸಿ, ಡಾ. ಸೋಮರಾಜ್, ಡಾಕ್ಟರ್ ಸತೀಶ್ ರಾಯ್ಕರ್, ಡಾಕ್ಟರ್ ಮಿಥುನ್ ಎಸ್, ಡಾ ಅಮರೇಶ್ ಪಾಟೀಲ್, ಭೇಟಿ ನೀಡಿ ಸಂಶಯಸ್ಪದ ಕ್ಷಯ ರೋಗಿಗಳು ಮತ್ತು ದೃಢಪಟ್ಟಕ್ಷ ರೋಗಿಗಳ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಲಾಯಿತು