The problem of life away from the society of gentlemen
ಸಜ್ಜನರ ಸಂಘದಿಂದ ಜೀವನದ ಸಮಸ್ಯೆ ದೂರ
ಕೊಪ್ಪಳ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ಸಾಂಕೇತಿಕವಾಗಿ ರಾಷ್ಟ್ರೀಯ ಬಸವ ದಳ ಉದ್ಘಾಟನೆ ಮತ್ತು ಶರಣ ಹನಮಮ್ಮ ಗಂಡ ಚಿಕ್ಕಪ್ಪ ಕುಟಗನಳ್ಳಿ ಇವರ ಮನೆಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡದ ಶರಣ ಬಸವರಾಜ ಹೂಗಾರ ಇವರು ಮಾತನಾಡಿ, ನಮ್ಮ ನಂಬಿಕೆ,ಶ್ರದ್ದೆ, ವಿಶ್ವಾಸ ಅಚಲವಾಗಿದ್ದರೆ ಪರ್ವತ ಸಹ ಅಲ್ಲಾಡಿಸಬಹುದಾಗಿದೆ. ಇದರಿಂದ ಅಸಾಧ್ಯ ಸಾಧ್ಯ, ಆಭೇದ್ಯ ಭೇದ್ಯ ಎಂಬಂತೆ ಗುರು ಬಸವತಂದೆಯಲ್ಲಿ ಭರವಸೆ ಇಡಿರಿ, ಬಸವ ಎಲ್ಲರ ನಿಧಿ.ಬಸವ ಕಲ್ಪತರು, ಕಾಮಧೇನು, ಚಿಂತಾಮಣಿ ಎಂಬುವುದು ನಿರ್ವಿವಾದ, ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು, ಎಂಬ ಶರಣರ ವಾಣಿಯಂತೆ ಶರಣರಾದ ಮುತ್ತಣ್ಣ ಕುಟಗನಳ್ಳಿ ದಂಪತಿಗಳು ಸಮೇತ ಕುಟುಂಬದವರು ಕೂಡಿಕೊಂಡು, ಕೂಡಲ ಸಂಗಮಕ್ಕೆ ಹೋಗಿ ಪರಮ ಪೂಜ್ಯ ಡಾ. ಗಂಗಾಮಾತಾಜಿಯವರ ಹಸ್ತ ಮಸ್ತಕ ಸಂಯೋಗದಿಂದ ಇಷ್ಟಲಿಂಗ ದಿಕ್ಷ ಪಡೆದು . ಬಸವ ಬಳ್ಳಿ ಗಳಾಗಿ ಪರಿವರ್ತನೆಗೊಂಡಿದ್ದಾರೆ. ಈ ಕುಟುಂಬಕ್ಕೆ ಗುರು ಬಸವಣ್ಣನವರ ಶ್ರೀ ರಕ್ಷೆ ಸದಾ ಇರಲಿ ಎಂದು ಪ್ರಾರ್ಥನೆ ಮಾಡುವುದರ ಮೂಲಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತಿ ಪಿ ಎಸ್ ಐ ಇವರು ಮಾತನಾಡಿ, ಶರಣ ಬಂಧುಗಳೆ ಗುರು ಬಸವಣ್ಣನವರನ್ನು ನಂಬಿ ಬದುಕಬೇಕು, ನಂಬಿದವರಿಗೆ ಇಂಬು ಕೊಡುವಾತ ಬಸವಣ್ಣ,
ಸರ್ವರಿಗು ಸಮಪಾಲು ಸಮಬಾಳು ಕಲಿಸಿದಾತ ಬಸವಣ್ಣ. ಪ್ರಾಣಿಗಳಲ್ಲಿ ದಯೆ ತೋರಿಸಿ ದಯವೇ ಧರ್ಮದ ಮೂಲ ಎಂದವರು. ಬಸವ ಮೂರ್ತಿ ನಮ್ಮ ಕಷ್ಟ ಕಾರ್ಪಣ್ಯ ದೂರೀಕರಿಸಿ, ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ವಚನಗಳು ಓದುವುದರಿಂದ ನಮ್ಮಲ್ಲಿ ಜ್ಞಾನವೃದ್ದಿಯಾಗುತ್ತದೆ. ಕಳಬೇಡ ಕೊಲಬೇಡ ಎಂಬ ಅತ್ಯಂತ ಸರಳವಾದ ವಚನ ಜೀವನದಲ್ಲಿ ಅಳವಡಿಸಿ ಕೊಂಡು ಸಂತೃಪ್ತಿ ಬದುಕು. ಅಷ್ಟೇ ಅಲ್ಲದೆ ಹಲವು ದೇವರ ಗುಡಿ ಗುಂಡಾರಗಳಗೆ ಹೋಗದೆ, ನಮ್ಮ ದೇಹವೇ ದೇವಾಲಯ ಮಾಡಿಕೊಂಡು ಬದುಕಬೇಕು. ದೇಹವೇ ದೇವಾಲಯ ಮಾಡಿದ ಗುರು ಬಸವಣ್ಣನವರು, ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಭುವನದ ಭಾಗ್ಯ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಂದ ಹಿರಿಯರಿಲ್ಲ ಎಂಬ ತತ್ವ್ತ ಸಿದ್ಧಾಂತ ಅನುಷ್ಠಾನಕ್ಕೆ ತಂದವರು. ಬಸವ ಯುಗದ ಉತ್ಸಾಹ. ಇಂಥ ಧರ್ಮಗುರುವಿನ ಬದುಕು ನಮಗೆಲ್ಲರಿಗೆ ಆದರ್ಶವಾಗಲಿ ಎಂದು ಹೇಳಿದರು.
ಶರಣ ಶಿವಬಸಯ್ಯ ಹಿರೇಮಠ ವೀರಾಪುರ ಜಿಲ್ಲಾ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಕೊಪ್ಪಳ ಮತ್ತು ಟಣಕನಕಲ್ ಗ್ರಾಮ ಘಟಕದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ಇವರು ಮಾತನಾಡಿ,
ಬಸವ ಸಂಸ್ಕ್ರತಿ ಬೆಳೆಯಲು ಬಸವ ಮೂರ್ತಿ ಒಂದು ಪ್ರೇರಣೆ. ಛಲವಂತಿಕೆಯ ಬದುಕು ನಮ್ಮದಾಗಬೇಕು.ಇದು ಬಸವ ನೆಲ, ಮನುಕುಲಕ್ಕೆ ಉದ್ಧಾರ, ಜಾತಿಯ ಪೆಡಂಭೂತ ಬೇರು ಸಹಿತ ಕಿತ್ತೆಸೆದು ಸಮಾನತೆಯ ತಳಹದಿಯ ಮೇಲೆ ಸಮಾಜ ಕಟ್ಟಿ ಬೆಳೆಸಿದವರು ಗುರು ಬಸವಣ್ಣನವರು. ಮಾನವರಲ್ಲಿ ಭವಿ ಭಕ್ತ ಎಂಬ ಭೇದವಿದ್ದು ಅನ್ಯ ಭೇದ ಭಾವ ಶರಣರ ನಂಬೊದಿಲ್ಲ ಎಂದು ತಮ್ಮ ವಿಚಾರ ವ್ಯಕ್ತಪಡಿಸಿಸದರು. ಹಿರಿಯ ಶರಣರಾದ ಕೊಟ್ರಪ್ಪ ಶೇಡದ್ ರಾಷ್ಟ್ರೀಯ ಬಸವ ದಳ ಕೊಪ್ಪಳ ಇವರು ಮಾತನಾಡಿ,
ಇಂದು ಎಲ್ಲೆಡೆ ಬಸವ ಬೆಳೆ ಸಮೃದ್ದಿಯಾಗಿ ಬೆಳೆಯುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಇಂಥ ಬಸವ ಮೂರ್ತಿ ಯುವಕರು ಮುಂದೆ ಬಂದು ಅನಾವರಣ ಮಾಡಲಿ ಸಮಾಜ ಸಂಘಟಿಸಿರಿ ಮತ್ತು ಶರಣರು ವೈಚಾರಿಕ ವೈಜ್ಞಾನಿಕ ತಳಹದಿಯ ಮೇಲೆ ಲಿಂಗಾಯತ ಧರ್ಮ ಕಟ್ಟಿದ್ದಾರೆ. ಅವರ ಅನುಯಾಯಿಗಳಾದವರು ಆದಿಶೆಯಲ್ಲಿ ಚಿಂತನೆ ಮಾಡಿ ತತ್ವ್ತ ಬೆಳೆಸುವ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಕರಾದ ಶರಣ ದೇವಪ್ಪ ಕೋಳೂರು ಗೌರವಾದ್ಯಕ್ಷರು ರಾಷ್ಟ್ರೀಯ ಬಸವ ದಳ ವನಜಭಾವಿ ಇವರು ಮಾತನಾಡಿದರು. ಶರಣ ನಾಗನಗೌಡ ಜಾಲಿಹಾಳ, ಗಿರಿಮಲ್ಲಪ್ಪ ಪರಂಗಿ ಸಾ. ವನಜಭಾವಿ, ಶರಣ ಪರಪ್ಪ ಗೊಂದಿಹೊಸಳ್ಳಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಟಣಕನಕಲ್. ಸೋಮಲಿಂಗಪ್ಪ ಮಂತ್ರಿ ಸಾ.ತಾಳಕೇರಿ, ಬಸಣ್ಣ ಹೊಸಳ್ಳಿ. ಶರಣ ನಂದಯ್ಯ ಸ್ವಾಮಿ ಹಿರೇಮಠ ಮಂಗಳಾಪುರ. ಮಂಜುನಾಥ್ ಉಚ್ಚಲಕುಂಟಿ, ವನಜಭಾವಿ, ನಿಂಗಪ್ಪ ಪರಂಗಿ, ಚಿದಾನಂದಗೌಡ ಗೊಂದಿ ಯಮನೂರಪ್ಪ ಕೋಳೂರು, ರಾಷ್ಟ್ರಪತಿ ಹೊಸಳ್ಳಿ, ಮೇಟಿ, , , ದೇವೇಂದ್ರಪ್ಪ ಆವಾರಿ, ಹಾಗು ಅಕ್ಕನಾಗಲಾಂಬಿಕೆ ಬಳಗದ ಶರಣೆ ಶರಣಮ್ಮ ಬಸವನಗೌಡ ಪೋಲಿಸ್ ಪಾಟೀಲ್, ಜಯಮ್ಮ ಪೋಲಿಸ್ ಪಾಟೀಲ್, ಯಮನಮ್ಮ ಗೌಡ್ರ ವನಜಭಾವಿ, ಅಕ್ಕಮಹಾದೇವಿ ಮೇಟಿ, , ಸಾವಿತ್ರಮ್ಮ ಆವಾರಿ, ನಾಗಮ್ಮ ಜಾಲಿಹಾಳ, ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದಿಂದ ಅನೇಕ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ