St. Falls students greet pharmacists.

ಗಂಗಾವತಿ: ಇಡೀ ಜಗತ್ತಿನಾದ್ಯಂತ ಸೆಪ್ಟೆಂಬರ್-25 ರಂದು ವಿಶ್ವ ಫ಼ಾರ್ಮಾಸಿಸ್ಟ ಡೇ ಆಚರಿಸಲಾಗುತ್ತದೆ ಅದರಂತೆ ನಗರದ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜಿನ ಡಿ.ಫ಼ಾರ್ಮಸಿ ವಿಧ್ಯಾರ್ಥಿಗಳು ಸ್ಥಳೀಯ ಔಷಧೀಯ ಸಂಕೀರ್ಣಕ್ಕೆ ಭೇಟಿ ನೀಡಿ,ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳಿಗೆ ಶುಭ ಕೋರಿದರು.
ಶಾಲಾ ವಾಹನದ ಮೂಲಕ ಹೊರಟ ವಿಧ್ಯಾರ್ಥಿಗಳು, ನಗರದ ಮುಖ್ಯ ರಸ್ತೆಯಲ್ಲಿ ಇರುವ ಔಷಧ ಅಂಗಡಿಗಳ ಫ಼ಾರ್ಮಸಿಸ್ಟಗಳಿಗೂ ಶುಭಾಶಯ ಹೇಳುತ್ತಾ ಸಾಗಿದರು.
ನೋಂದಾಯಿತ ಫ಼ಾರ್ಮಾಸಿಸ್ಟಗಳಾದ ನಾಗರಾಜ ಸ್ವಾಮಿ,ನಟರಾಜ ಆನೆಗುಂದಿ,ಚಂದ್ರಶೇಖರಯ್ಯ ಹೇರೂರ ಮುಂತಾದವರು ಮಾತನಾಡಿದರು.ಈ ಸಂದರ್ಭದಲ್ಲಿ ಔಷಧ ವಿತರಕರಾದ ಕಲ್ಯಾಣ ರಾವ್ ಮತ್ತು ಶ್ರೀಮತಿ ಸಂಧ್ಯಾ ಪಾರ್ವತಿ ಉಪಸ್ಥಿತರಿದ್ದರು.
ಫ಼ಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಬೂದಗುಂಪಾ ಹಿರೇಮಠ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಸರ್ವೇಶ ವಸ್ತ್ರದ ಅವರ ಈ ವಿನೂತನ ಕಾರ್ಯಕ್ಕೆ ಕರ್ನಾಟಕ ರಾಜ್ಯ ನೋಂದಾಯಿತ ಫ಼ಾರ್ಮಾಸಿಸ್ಟಗಳ ಸಂಘಟನೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸ್ವಾಗತಿಸಿದ್ದಾರೆ.
Kalyanasiri Kannada News Live 24×7 | News Karnataka
