Farmer leader Devappa warns of fierce struggle if farmers’ demands are not met
ಕೊಪ್ಪಳ : ಕುಕನೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು ನೂರಾರು ವರ್ತಕರಿದ್ದು ಹಲವಾರು ಗೋದಾಮುಗಳಿದ್ದರು 25 ವರ್ಷಗಳಿಂದಲೂ ರೈತರ ಯಾವುದೇ ವ್ಯಾಪಾರ ವಹಿವಾಟುಗಳು ಇಲ್ಲಿ ನಡೆಯುತ್ತಿಲ್ಲಾ ಎಂದು ರೈತ ಮುಖಂಡ ದೇವಪ್ಪ ಸೋಬಾನದ ಆಕ್ರೋಶ ವ್ಯಕ್ತ ಪಡಿಸಿದರು.
ಅವರು ಕುಕನೂರು ಪಟ್ಟಣದಲ್ಲಿ ಮಂಗಳವಾರದಂದು ಕರ್ನಾಟಕ ರೈತ ಸಂಘ ಹಸಿರು ಸೇನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಮಾತನಾಡಿ ಎಪಿಎಂಸಿ ಅಧಿಕಾರಿಗಳು ಹಾಗೂ ವರ್ತಕರು, ರಾಜಕಾರಣಿಗಳು ಶಾಮೀಲಾಗಿ ರೈತರ ಜೀವನದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು 25 ವರ್ಷಗಳಿಂದಲೂ ಇಲ್ಲಿ ಯಾವುದೇ ಟೆಂಡರ್ ಪ್ರಕ್ರೀಯೇ ಇಲ್ಲದರಿಂದ ರೈತರು ವರ್ತಕರು ಹೇಳಿದ ದಾರಣಿಯಂತೆ ಮಾರಾಟ ಮಾಡುವದು ಅನಿವಾರ್ಯವಾಗಿದೆ. ಒಂದು ತೂಕಕ್ಕೆ ಮೂರು ಕೆಜಿ ಬಾದ ತೆಗೆಯುತ್ತಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ತೂಕ ಮಾಡುತ್ತಾ ವರ್ತಕರು ಹಗಲು ದರೋಡೆ ಮಾಡುತ್ತಿರುವುದು ಖಂಡನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ನ್ಯಾಯಯುತ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಆಗ್ರಹಿಸಿದರು.
ನಂತರದಲ್ಲಿ ರಾಜ್ಯಾಧ್ಯಕ್ಷ ವಿ.ಆರ್ ನಾರಾಯಣರೆಡ್ಡಿ ಮಾತನಾಡಿ ಮದ್ಯ ವರ್ತಿಗಳಿಲ್ಲದೇ ರೈತರ
ಬೆಳೆದ ಬೆಳೆಗಳನ್ನು ಟೆಂಡರ್ ಮೂಲಕ ಖರೀದಿಸಲು ನೇರ ಮಾರುಕಟ್ಟೆ ಒದಗಿಸಿ ರೈತರ ಬೆಳೆಗಳನ್ನು ಖರೀದಿಸಲು ಮುಂದಾಗಬೇಕು ಎಂದರು.
ರೈತರಿಗೆ ರಾಜ್ಯಾದ್ಯಂತ ಅನ್ಯಾಯಗಳು ನಡೆಯುತ್ತಿದ್ದರು ರೈತರ ಬೆಳೆದ ಬೆಳೆಗಳ ವಿಂಗಡನೆ ಮಾಡುತ್ತಾರೆ. ಆದರೆ ಅವರು ನೀಡುವ ಬೆಂಬಲ ಬೆಲೆಗೆ ಅನ್ಯಾಯವಾಗುತ್ತಿದೆ.
ರಾಜ್ಯ ಸರಕಾರವಾಗಲಿ ಕೇಂದ್ರ ಸರಕಾರವಾಗಲಿ ರೈತರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗುತ್ತಿಲ್ಲಾ ಕೂಡಲೇ ಸರಕಾರಗಳು ರೈತರ ಸಾಲ ಮನ್ನಾ ಮಾಡಬೇಕು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ನಂತರದಲ್ಲಿ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ರೈತರ ಬೇಡಿಕೆಗಳನ್ನು ವಿವರಿಸಿದರು.
ನಂತರದಲ್ಲಿ ಚಿಕ್ಕ ಬಳ್ಳಾಪುರ ಜಿಲ್ಲಾಧ್ಯಕ್ಷ ಎಚ್. ಎನ್ ಗೋವಿಂದ ರೆಡ್ಡಿ ಮಾತನಾಡಿ ರೈತರು ಮಳೆ, ಬಿಸಿಲು, ಗಾಳಿಯನ್ನು ಲೆಕ್ಕಿಸದೇ ಉಳಿಮೆ ಮಾಡಿ ಬೆಳೆದ ಬೆಳೆಗಳು ಸಮರ್ಪಕವಾಗಿ ಬೆಳೆಗಳು ರೈತರ ಕೈಗೆ ಬರುತ್ತಿಲ್ಲ, ಬಂದಷ್ಟು ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರಿಯಾದ ಬೆಲೆ ಇರುವುದಿಲ್ಲಾ ಇದರಿಂದ ರೈತ ಸಾಲದ ಸೂಳಿಗೆ ಸಿಲುಕಿ ನಲುಗುತ್ತಾನೆ, ಆದ್ದರಿಂದ ಎಪಿಎಂಸಿ ಅಧಿಕಾರಿಗಳು ಎಚ್ಚೆತ್ತು ರೈತರ ಬೇಡಿಕೆಗಳನ್ನು ಈಡೇರಿಸದೇ ಇದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಕಾಂತ, ಮಲ್ಲಿಕಾರ್ಜುನಗೌಡ ತಳಬಾಳ, ಗವಿಸಿದ್ದಪ್ಪ ಜಿನಿನ್, ಕಳಕಪ್ಪ ಕ್ಯಾದಗುಂಪಿ, ಶೇಖಪ್ಪ ಬಟಪನಹಳ್ಳಿ, ಯಲ್ಲಪ್ಪ ಬಾಬರಿ ಹಾಗೂ ಮಹಿಳಾ ರೈತ ಮುಖಂಡರಾದ ಗಂಗಮ್ಮ ಚನಪನಹಳ್ಳಿ, ಸಾವಿತ್ರಿ ತೆಗ್ಗಿನಮನಿ, ವಿಶಾಲಾಕ್ಷಿ ಅಬ್ಬಿಗೇರಿ, ಹಾಗೂ ಕುಕನೂರು ಸೇರಿದಂತೆ ವಿವಿಧ ಗ್ರಾಮಗಳ ರೈತ ಮುಖಂಡರು ಉಪಸ್ಥಿತರಿದ್ದರು.