BJP MLA Muniratnam disqualified from MLA post and exiled Parasuram Kerehalli
ಕೊಪ್ಪಳ: ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವ ಹಾಗೂ ದಲಿತರ ಬಗ್ಗೆ ಜಾತಿ ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ,ಗಡಿಪಾರು ಮಾಡಬೇಕೆಂದು ಕೊಪ್ಪಳ ಕಾಂಗ್ರೆಸ್ಸಿನ ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ ಕೆರೆಹಳ್ಳಿ ಪತ್ರಿಕೆಗೆ ತಿಳಿಸಿದ್ದಾರೆ.
ಬಿ.ಜೆ.ಪಿ ಯ ಶಾಸಕರಾದ ಮುನಿಯಪ್ಪ ನಾಯ್ಡು ಅವರು ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದ್ದು. ಇದಕ್ಕೆ ಬಿಜೆಪಿ ಪಕ್ಷವು ಶಾಸಕ ಮುನಿರತ್ನ ರವರನ್ನು ಪಕ್ಷದಿಂದ ವಜಾಗೊಳಸದೆ ಮೌನವಹಿಸಿದೆ, ಒಕ್ಕಲಿಗರ ಸಮುದಾಯದ ಮಹಿಳೆಯರ ಬಗ್ಗೆ ಕೆಟ್ಟ ಪದಗಳಿಂದ ಮಾತನಾಡಿದಾರೆ, ಮತ್ತು ನಮ್ಮ ದಲಿತ ವ್ಯಕ್ತಿಯನ್ನು ಜಾತಿ ನಿಂದನೆಯನ್ನು ಮಾಡಿ, ದಲಿತರಂದರೆ ಕೀಳು ಜಾತಿಯವರು ಅನ್ನೋ ರೀತಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ, ಇಂತಹ ದಲಿತರ ವಿರೋಧಿ ವ್ಯಕ್ತಿಯನ್ನು ಶಾಸಕರಾಗಿರುವುದೆ ನಮ್ಮ ರಾಜ್ಯಕ್ಕೆ ದುರದೃಷ್ಟಕ, ಹಾಗಾಗಿ ಇವರನ್ನು
ಅತಿ ಶೀಘ್ರದಲ್ಲೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ನಮ್ಮ ಸಭಾಧ್ಯಕ್ಷರು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು, ಹಾಗೂ ಅವರನ್ನು ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು. ಬಿಜೆಪಿ ಪಕ್ಷ ಅಧಿಕಾರದಲ್ಲಿ 40% ಭ್ರಷ್ಟಾಚಾರ ಮಾಡಿರೋದು ರುಜುಮಾಡಿಕೊಂಡಿದ್ದಾರೆ. ಶಾಸಕರಾದ ಮುನಿರತ್ನ ನಾಯ್ಡು ಬೆಂಗಳೂರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅವರು ಪರಿಶಿಷ್ಟ ಜಾತಿಯ ಬಗ್ಗೆ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ, ಭ್ರಷ್ಟಾಚಾರ, ಮತ್ತು 30 ಪರ್ಸೆಂಟ್ ಲಂಚ ನೀಡುವಂತೆ ಒತ್ತಾಯ, ಮಾಡಿರೋದು ಆಡಿಯೋದಲ್ಲಿರುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ.ಅಧಿಕಾರ ದುರುಪಯೋಗದಿಂದ ಅತ್ಯಂತ ಕೀಳು ಮಟ್ಟದ ಮಾತುಗಳನ್ನಾಡಿ ಒಕ್ಕಲಿಗರ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವ ನಿಕೃಷ್ಟ ಮನಸ್ಥಿತಿಯನ್ನು ಹೊಂದಿರುವಂತಹ ಈ ವ್ಯಕ್ತಿಯನ್ನು ಶಾಸಕ ಸ್ಥಾನದಲ್ಲಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಶಾಸಕ ಸ್ಥಾನದಿಂದ ಇವರನ್ನು ಅನರ್ಹಗೊಳಿಸಿ, ಈಗಾಗಲೇ ಬಂದನವಾಗಿ ಜೈಲು ಸೇರಿರುವ ಮುನಿರತ್ನರನ್ನು ಅಟ್ರಾಸಿಟಿ ಕೇಸಿನಲ್ಲಿ ನಾನ್ ಬೇಲಾಬೆಲ್ ಅಂದರೆ ಬೇಲ್ ನೀಡದೆ, ಕಠಿಣ ಶಿಕ್ಷೆ ಜೀವಾವಧಿ ಶಿಕ್ಷೆ ನೀಡಬೇಕು. ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಎಚ್ ಪೂಜಾರ್ ಹಾಗೂ ಪರಿಶಿಷ್ಟ ಜಾತಿಯ ವಿಭಾಗದ ವತಿಯಿಂದ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.