Mr. Ganayogi Ltd. Swaropasana as part of the 14th Punyasamranotsava of Puttaraja Gawai
ಮಾನ್ವಿ: ಪಟ್ಟಣದ ಧ್ಯಾನ ಮಂದಿರದಲ್ಲಿ ಶ್ರೀ ವಿರೂಪಾಕ್ಷೇಶ್ವರ ವಿದ್ಯಾಕೇಂದ್ರ ಟ್ರಸ್ಟ್, ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್,ರಾಜಗುರು ಲೋಕ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರೀ ಗಾನಯೋಗಿ ಲಿಂ.ಪ. ಪುಟ್ಟರಾಜ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಸ್ವರೋಪಾಸನೆ ಕಾರ್ಯಕ್ರಮವನ್ನು ರಾಯಚೂರಿನ ಖ್ಯಾತ ಮಾನಸಿಕ ರೋಗ ತಜ್ಞರಾದ ಡಾ.ವಿ.ಎ. ಮಾಲಿಪಾಟೀಲ್ ಉದ್ಘಾಟಿಸಿ ಮಾತನಾಡಿ ನಮ್ಮ ಪ್ರಾಚಿನ ಪರಂಪರೆಯಲ್ಲಿ ಬರುವ ಶುದ್ದವಾದ ಶಾಸ್ತಿçಯ ಸಂಗೀತವನ್ನು ಪ್ರತಿ ನಿತ್ಯ ಸ್ವಲ್ಪ ಸಮಯ ಅಲಿಸುವುದರಿಂದ ಮಾನಸಿಕ ಹಾಗೂ ದೈಹಿಕ ಸ್ಥಿರತೆ ಹೆಚ್ಚುವುದಾಗಿಹಾಗೂ ಮಾನಸಿಕ ಒತ್ತಡ ನಿವಾರಿಸಿ ನಮ್ಮಲಿನ ನಕರಾತ್ಮಕ ಚಿಂತನೆಗಳನ್ನು ಕಳೆದು ಸಕರಾತ್ಮಕ ಚಿಂತನೆಗಳನ್ನು ಮೂಡಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ ಶಾಸ್ತ್ರ ಸಂಗೀತ ಪರಿಕಾರಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮನಸ್ಸಿಗೆ ವಿಶ್ರಾಂತಿ ಹಾಗೂ ನೆಮ್ಮದಿಯನ್ನು ತರುತ್ತದೆ .ಜ್ಞಾಪಕ ಶಕ್ತಿ ಹೆಚ್ಚಾಳವಾಗುತ್ತದೆ ಇಂದಿನ ಒತ್ತಾಡದ ಜೀವನಕ್ಕೆ ಸಂಗೀತವೇ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು,
ಕಿಡಿಗಣ್ಣಯ್ಯಸ್ವಾಮಿ,ಬ್ರಹ್ಮಯ್ಯ ಶಿಲ್ಪಿ, ಗಾಯಕಿ ಶಾಂತ ಬಲ್ಲಟಗಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಗೀತ ಕಾರ್ಯಕ್ರಮದಲ್ಲಿ ಹೆಚ್.ಪುಷ್ಪಾವತಿ ಹೊಸಪೇಟೆ,ಬಾಗಲಕೋಟೆಯ ಜಯತೀರ್ಥ ತಾಸಂಗಾAವ,ಧಾರವಾಡದ ಬಸವರಾಜ ವಂದಲಿ ಯವರಿಂದ ವಚನಗಾಯನ,ಶಾಸ್ತಿçಯ ಗಾಯನ ನಡೆಯಿತು. ಹುಬ್ಬಳಿಯ ಆದಿತ್ಯ ಜೋಶಿಯವರ ಬಾನ್ಸೂರಿ ವಾದನ ಗಮನಸೇಳೆಯಿತು, ವೀರೇಶ ಹಿಟ್ನಾಳ್, ಮಹಾಂತಸ್ವಾಮಿ ಗೋನ್ವರ ಇವರಿಮದ ಹಾಮ್ಮೋನಿಯಂವಾದನ , ತಬಾಲಸಾಥ್ ಅಕ್ಷಯಜೋಶಿ, ರಾಘವೇಂದ್ರ ,ವಿರುಪಾಕ್ಷಯ್ಯ ವಂದಲಿ, ಅಮರೇಶ ಸಾಲಿಮಠ ಸೇರಿದಂತೆ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಗೌರವಧ್ಯಕ್ಷರಾದ ,ವಿರುಪಾಕ್ಷಯ್ಯ ವಂದಲಿ,ಕಲ್ಮಠ ಕಾಲೇಜಿನ ಉಮಾಶಂಕರ, ಶಂಕರಾನಂದ ಸೇರಿದಂತೆ ಇನ್ನಿತರರು ಇದ್ದರು.