32 lakhs profit for Kanakadasa Souharda Patti Sahakari
ಗಂಗಾವತಿ: ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡುವ ಮೂಲಕ ಇನ್ನೊಬ್ಬ ಗ್ರಾಹಕ ಸಾಲ ಪಡೆಯಲು ನೆರವಾಗಬೇಕೆಂದು ಹಾಲುಮತ ಕುರುಬ ಸಮಾಜದ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ ಹೇಳಿದರು.
ಅವರು ನಗರದ ಶ್ರೀ ಕನಕದಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 18 ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಹಕಾರಿ ಇನ್ನಷ್ಟು ಗ್ರಾಹಕರನ್ನು ತಲುಪುವಂತಹ ಕಾರ್ಯ ಮಾಡಬೇಕು. ಇದರಿಂದ ಠೇವಣಿ, ಪಿಗ್ಮಿ ಸಂಗ್ರಹದ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ಆರ್ಥಿಕ ಸಾಲ ಪಡೆಯಲು ಅನುಕೂಲವಾಗುತ್ತದೆ. ಸಾಲ ಪಡೆಯುವುದು ಮತ್ತು ಮರುಪಾವತಿ ಮಾಡುವುದು ಗ್ರಾಹಕ ಜವಾಬ್ದಾರಿಯಾಗಿದೆ. ಆದ್ದರಿಂದ ಸಹಕಾರ ತತ್ವದಡಿಯಲ್ಲಿ ಎಲ್ಲರೂ ನಂಬಿಕೆ ಇಡಬೇಕು. ಸಹಕಾರಿಯ ಸದಸ್ಯರಿಂದ ಷೇರು ಸಂಗ್ರಹ ಮಾಡಿ ಸಾರ್ವಜನಿಕ ಹಣವನ್ನು ಸಹಕಾರಿಯ ನಿರ್ದೇಶಕರು, ಅಧ್ಯಕ್ಷರು ಕಾಯುವ ಕಾರ್ಯ ಮಾಡಬೇಕು. ಖರ್ಚು ಕಡಿಮೆ ಮಾಡಿ ಸಹಕಾರಿಯನ್ನು ಆರ್ಥಿಕವಾಗಿ ಸದೃಢವಾಗಿಸಬೇಕೆಂದರು.
ಸಹಕಾರಿ ಅಧ್ಯಕ್ಷ ಕೆ.ನಾಗೇಶಪ್ಪ ವಾರ್ಷಿಕ ವರದಿಯನ್ನು ಓದಿ ಸಭೆಯ ಒಪ್ಪಿಗೆಯನ್ನು ಪಡೆದರು.ವ್ಯವಸ್ಥಾಪಕ ಸಂತೋಷ ಲೆಂಕಿ ಹಿಂದಿನ ವರದಿ ಓದಿ ಲೆಕ್ಕಪತ್ರ ಒಪ್ಪಿಸಿದರು.
ಸಹಕಾರಿಯ ಸದಸ್ಯರೂ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕಾರಟಗಿ ಪುರಸಭೆಯ ಅಧ್ಯಕ್ಷೆ ರೇಖಾ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಿ.ರಾಮಣ್ಣ ಇವರನ್ನು ವಾರ್ಷಿಕ ಸಭೆಯಲ್ಲಿ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಹಾಲುಮತ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ, ಮುಖಂಡರಾದ ಸಣ್ಣಕ್ಕಿ ನೀಲಪ್ಪ, ಶರಣೇಗೌಡ ,ಸಹಕಾರಿಯ ಅಧ್ಯಕ್ಷ ಕೆ.ನಾಗೇಶಪ್ಪ,ಸಣ್ಣ ಅಗರಪ್ಪ,ಕಸ್ತೂರಮ್ಮ, ಬಕ್ಕಂಡಿ ಬಸವರಾಜ, ಲಿಂಗರಾಜ,ನಿAಗಪ್ಪ,ಶ್ರೀನಿವಾಸ ಪಾಟೀಲ, ಆರ್.ಕೆ.ಲಿಂಗಪ್ಪ,ಬಾಲಪ್ಪ,ಶ್ರೀಧರ ಡ್ಯಾಗಿ, ರುದ್ರೇಶ ಡ್ಯಾಗಿ, ಸೇರಿ ಸಹಕಾರಿ ಸದಸ್ಯರು, ಸಮಾಜದ ಮುಖಂಡರಿದ್ದರು.