Math competition activity for primary school children
ತಿಪಟೂರು: ಶಿಕ್ಷಣ ಫೌಂಡೇಶನ್‌ನ ಮಾರ್ಗದರ್ಶನದೊಂದಿಗೆ ಗಣಿತ ಕಲಿಕಾ ಆಂದೋಲನದ ಮೂಲಕ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಗಣಿತ ಸ್ಪರ್ಧಾ ಸಮಾರೋಪ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿಮೈಲಾರಸ್ವಾಮಿ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು ನಿತ್ಯ ಶ್ರಮವಹಿಸಿ ಅಭ್ಯಾಸಮಾಡಿ ಇಂಥ ಹಲವು ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸಿ ಜೀವನದಲ್ಲಿ ಯಶಸ್ವಿಯಾಗಬೇಕೆಂದರು.
ಮಖ್ಯಅತಿಥಿಗಳಾಗಿ ಭಾಗವಹಿಸಿದ್ದ ಗ್ರಂಥಪಾಲಕ ಪಿ ಶಂಕರಪ್ಪ ಬಳ್ಳೇಕಟ್ಟೆ ರವರು ಮಾತನಾಡಿ ವಿದ್ಯಾರ್ಥಿಗಳ ಜೀವನ ಚಿನ್ನದಂತ ಜೀವನ ಗ್ರಾಮೀಣ ಮಕ್ಕಳು ಇಂಥ ಪ್ರಗತಿಪರ ಸ್ಪರ್ಧಾತ್ಮಕ ಚಟುವಟಿಕೆಗಳಿಂದ ಉತ್ತಮ ಅಂಕಗಳಿಸಿ ಅತ್ಯುನ್ನತ ಸ್ಥಾನ ಗಳಿಸಲು ಸಹಕಾರಿಯಾಗುತ್ತದೆ ಆದ್ದರಿಂದ ಜೀವನದಲ್ಲಿ ಸೋಲು ಗೆಲುವುಗಳು ಇದ್ದೇ ಇರುತ್ತವೆ ಪಠ್ಯ ಮತ್ತು ಪಠ್ಯೇತರ ಸ್ಪರ್ಧಾ ಚಟುವಟಿಕೆಗಳಲ್ಲಿ ಸ್ವಯಂ ತೊಡಗಿಸಿಕೊಂಡು ನಿಮ್ಮನ್ನು ಸಾಕಿ ಬೆಳಸಿದ ತಂದೆ ತಾಯಿಗಳಿಗೆ ಆದರ್ಶಪ್ರಾಯರಾಗಿ ಎಂದರು.
ಪಿ.ಡಿ ಓ.ಪ್ರಸನ್ನಾತ್ಮರವರು ಮಾತನಾಡಿ ಪಂಚಾಯತಿ ವತಿಯಿಂದ ತಮಗೆ ಬೇಕಾದಂತ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ, ನಿಮ್ಮ ಜೀವನ ಸಾಧನೆಯಿಂದ ಕೂಡಿರಲಿ ಎಂದರು.
ಸಮಾರಂಭದಲ್ಲಿ ಗುತ್ತಿಗೆದಾರ ಮೈಲಾರ ಸ್ವಾಮಿ ಶಾಲಾ ಶಿಕ್ಷಕರಾದ ಪೂರ್ಣಿಮಾ, ಪುಷ್ಪ ಮಮತಾ ಹಾಗೂ ಹಲವು ಶಾಲೆಗಳ ಶಿಕ್ಷಕರು , ಮಕ್ಕಳು ಹಾಜರಿದ್ದು ಕರಡಾಳು ಶಾಲಾ ರವೀಶ್ ಅವರು ಸ್ವಾಗತಿಸಿ ಕೊಂಡ್ಲಿಘಟ್ಟ ಉದಯ್ ಕಾರ್ಯಕ್ರಮ ನಿರೂಪಿಸಿ ಮುಖ್ಯೋಪಾದ್ಯಯರಾದ ಪ್ರಕಾಶಪ್ಪ ಎಲ್ಲರಿಗೂ ವಂದಿಸಿದರು.