Aroli village finally got the luck of drinking water
ಮಾನ್ವಿ : ತಾಲೂಕಿನ ಅರೋಲಿ ಗ್ರಾಮದ ವಾರ್ಡ್ 4ರಲ್ಲಿ ಸುಮಾರು ಮೂರು ವರ್ಷಗಳಿಂದ ನೀರಿನ ಪೈಪ್ ಲೈನ್ ಬ್ಲಾಕ್ ಆಗಿದ್ದು ಗ್ರಾಮ ಪಂಚಾ ಯತ್ ಸದಸ್ಯರ ನಿರ್ಲಕ್ಷತನದಿಂದ ಅಲ್ಲಿನ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗದೇ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು.
ಗ್ರಾಮದ ಗೋವಿಂದ ನಾಯಕ ಅವರು ಗ್ರಾಮ ಪಂಚಾಯತಿ ಅಧಿಕಾರಿಗೆ ದೂರು ನೀಡಿದ ಕೆಲವೇ ದಿನಗಳಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಚೌಡಯ್ಯ ನಾಯಕ ಅವರ ನೇತೃತ್ವದಲ್ಲಿ ವಾರ್ಡ್ ನಂ. 4 ರಲ್ಲಿ ಸೂಕ್ತ ಸ್ಥಳವನ್ನು ಪರಿಶೀಲಿಸಿ ಗ್ರಾಮದ ಜನರಿಗೆ ನೀರಿನ ಸಮಸ್ಯೆ ಬಾರದಂತೆ ಬೋರ್ ವೆಲ್ ಕೊರೆಸಲಾಯಿತು ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿಯನ್ನು ಮೆಚ್ಚಿ ಅರೋಲಿ ಗ್ರಾಮಕ್ಕೆ ಕೊನೆಗೂ ಸಿಕ್ಕಿತು ನೀರಿನ ಭಾಗ್ಯದ ಖುಷಿಯಲ್ಲಿ ಗೋವಿಂದ ನಾಯಕ ಅವರು ಇಂದು ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೌಡಯ್ಯ ನಾಯಕ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರರೆಡ್ಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ವ ಸದಸ್ಯರು ಗ್ರಾಪಂ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಬಾಕ್ಸ್ ಸುದ್ದಿ…..
ಅರೋಲಿ ಗ್ರಾಮದ 4ನೇ ವಾರ್ಡ್ ಕಳೆದ 3 ವರ್ಷಗಳಿಂದ ಕುಡಿಯುವ ನೀರು ಇಲ್ಲದೆ ಇಲ್ಲಿನ ವಾರ್ಡ್ ನಿವಾಸಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಪಂಚಾಯತ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇವಲ ಮೂರ್ನಾಲ್ಕು ತಿಂಗಳಲ್ಲಿ ದೂರು ಹಿನ್ನೆಲೆಯಲ್ಲಿ ಬೋರ್ವೆಲ್ ಕೊರೆಯಲು ಜಿಲ್ಲಾ ಪಂಚಾಯಿತಿ ಅನುದಾನ ಕ್ರಿಯಾ ಯೋಜನೆಯಲ್ಲಿ ಬೋರ್ವೆಲ್ ಕೊರೆಸಲಾಗಿದೆ
ಮುಂದಿನ ದಿನಗಳಲ್ಲಿ ಈ ವಾರ್ಡ್ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು.