Shri Guru Yogananda Rathotsava which was celebrated by Vijrambhane
ಯಲಬುರ್ಗಾ— ತಾಲೂಕಿನ ಕರಮುಡಿ ಗ್ರಾಮದಲ್ಲಿ ಶ್ರೀ ಗುರು ಯೋಗಾನಂದ ಪುಣ್ಯಾಶ್ರಮದ ರಥೋತ್ಸವವು ಸೋಮವಾರ ವಿಜ್ರಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ಚಾಲನೆ ನೀಡಿದ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಆಶೀರ್ವಚನಗೈದು ಕರಮುಡಿಯಲ್ಲಿ ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಆಗಾಗ್ಗೆ ಜರುಗುತ್ತಿದ್ದು ಎಲ್ಲಾ ವರ್ಗದ ಜನರು ಕೂಡಿಕೊಂಡು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ಭಾತ್ರತ್ವ ವ್ರದ್ಧಿ ಆಗುವುದರ ಜೊತೆಗೆ ಸಮ್ರದ್ಧಿ ಹಾಗೂ ಸಹಬಾಳ್ವೆ ಜೀವನ ನಡೆಸುತ್ತಿರುವುದು ಮಾದರಿ ಆಗಿದೆ ಎಂದರು.
ಡಾ! ಕಾಶಯ್ಯ ನಂದಿಕೋಲ ಒಡಪುಗಳನ್ನು ಹೇಳಿದರೆ ಖಾಜಾಸಾಬ ಕಲ್ಲೂರ ರವರು ಉರುಳು ಸೇವೆಗೈದರು.ಭಜನಾ ಸಂಘದವರು ಹಾಗೂ ನೂರಾರು ಮುತ್ಯೇದೆಯರು ಆರತಿ ಬೆಳಗಿ ಶ್ರೀಗಳನ್ನು ಸ್ವಾಗತಿಸಿ ರಥೋತ್ಸವ ಚಾಲನೆಗೆ ಸಹಕಾರ ನೀಡಿದರು.
ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಅನ್ನ ಸಂತರ್ಪಣೆ ಜರುಗಿತು .
ಗುರಯ್ಯ ಹಿರೇಮಠ ˌ ವೀರಯ್ಯ ಹಿರೇಮಠˌ
ತಾ.ಪಂ. ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ ˌ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ರಾಮಣ್ಣ ಪ್ರಭಣ್ಣನವರ ˌ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಕುಕನೂರˌ ಚನ್ನಬಸಪ್ಪ ಗೊಂಗಡಶೆಟ್ಟಿ ˌ ಶಿವಪ್ಪ ಉಳ್ಳಾಗಡ್ಡಿ ˌ ಕರಶಿದ್ಧಪ್ಪ ಪತ್ತಾರˌಗಂಗಪ್ಪ ಹವಳಿˌ ಬಸವರಾಜ ಬಲಕುಂದಿ ˌ ಮೈಲಾರಪ್ಪ ಪಲ್ಲೆದˌ ಶಿವಪುತ್ರಪ್ಪ ಮಲಿಗೋಡದ ˌ ನಿಂಗಪ್ಪ ಇಟಗಿ ˌ ಅಶೋಕ ಉಳ್ಳಾಗಡ್ಡಿ ˌ ಪರಸಪ್ಪ ಲಮಾಣಿˌ ಭೀಮಪ್ಪ ಬಂಡಿ ˌ ಭೀಮಪ್ಪ ಹವಳಿ ˌ ಯಮನೂರಪ್ಪ ಹವಳಿ ˌ ಉಮೇಶ ಕುಕನೂರ ˌ ವೀರಣ್ಣ ಪಟ್ಟೇದ ˌ ಪರಸಪ್ಪ ಹಾದಿಮನಿ ˌ ಶರಣಪ್ಪ ನಿಡಶೇಸಿ ಇನ್ನು ಹಲವಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.