Breaking News

ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರö್ಯವಂತ ಎಂಬ ಪುಸ್ತಕ ಬಿಡುಗಡೆ

Release of book titled Prophet Muhammad (PBUH) Great Character by Jama Ate Islami Hind

ಜಾಹೀರಾತು

ಮಾನ್ವಿ: ಪಟ್ಟಣದ ಶಾಸಕರ ಭವನದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ಮಾನವಿ ತಾ.ಘಟಕದಿಂದ ಸೀರತ್ ಅಭಿಯಾನ ಅಂಗವಾಗಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಿಕಟಪೂರ್ವ ಕ.ಸಾ.ಪ.ಜಿಲ್ಲಾಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ವಿವಿಧ ಲೇಕಕರು ಬರೆದ ಶಾಂತಿ ಪ್ರಕಾಶನದಿಂದ ಪ್ರಕಟಿತ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರö್ಯವಂತ ಎಂಬ ಲೇಖನಗಳ ಸಂಕಲನದ ಪುಸ್ತಕವನ್ನು ಬಿಡುಗಡೆ ಗೊಳಿಸಿ ಮಾತನಾಡಿ 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ (ಸ)ರವರು ಮರುಭೂಮಿ ಪ್ರದೇಶದಲ್ಲಿ ಜನರ ಜೀವನವನ್ನು ಉದ್ದರಿಸುವುದಕ್ಕಾಗಿ ದೇವರಿಂದ ಅದೇಶವನ್ನು ಪಡೆದು ಅತ್ಯಂತ ಸರಳವಾದ ಜೀವನವನ್ನು ನಡೆಸಿ ಅಂದಿನ ದಿನಗಳಲ್ಲಿ ನಡೆಯುತ್ತಿದ ಶೋಷಣೆ,ದಬ್ಬಳಿಕೆಯನ್ನು ತಡೆದು ಜನರಿಗೆ ಉತ್ತಮವಾದ ಮಾರ್ಗವನ್ನು ನೀಡಿದರು ಹಾಗೂ ಮುಸ್ಲಿಂರಿಗೆ ಉತ್ತಮ ಜೀವನಕ್ಕೆ ಮಾರ್ಗದರ್ಶಕವಾಗಿ ಪವಿತ್ರವಾದ ಕುರಾನ್ ಗ್ರಂಥವನ್ನು ನೀಡಿದ್ದರೆ. ಜಗತ್ತಿನ ಮಹಾನಿಯರಲ್ಲಿ ,ದರ್ಶನಿಕರಲ್ಲಿ ಪ್ರವಾದಿ ಮುಹಮ್ಮದ್ (ಸ) ಪ್ರಮುಖರಾದವರು ಕುರನ್ ಗ್ರಂಥವನ್ನು ಕೇವಲ ಮುಸ್ಲಿಂ ರೊಂದೆ ಅಲ್ಲ ಎಲ್ಲಾ ಸಮುದಾಯದವರು ಕೂಡ ಓದುವ ಹಾಗೂ ಆಚರಿಸಲು ಯೋಗ್ಯವಾಗಿರುವ ಗ್ರಂಥವಾಗಿದ್ದು ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರö್ಯವಂತ ಎಂಬ ಪುಸ್ತಕವು ಪ್ರವಾದಿ ಮುಹಮ್ಮದ್ (ಸ)ರವರ ಜೀವನದ ಹೆಚ್ಚಿನ ಅಂಶಗಳನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರö್ಯವಂತ ಎಂಬ ಪುಸ್ತಕದ ಕುರಿತು ಡಾ.ಬಸವರಾಜ ಸುಂಕೇಶ್ವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಅಕ್ಕಮ್ಮ , ಪುರಸಭೆ ಸದಸ್ಯರಾದ ಶೇಖ್ ಫಾರೀದ್ ಉಮ್ರಿ, ತಾ.ಅಧ್ಯಕ್ಷರಾದ ಅಬ್ದುಲ್ ರೆಹಮಾನ್ , ಸೀರತ್ ಅಭಿಯಾನದ ಸಂಚಾಲಕರಾದ ಉಮರ್ ದೇವರ ಮನೆ, ಹಿರಿಯ ನ್ಯಾಯಾವಾದಿಗಳಾದ ಗುಮ್ಮ ಬಸವರಾಜ, ಶಿವರಾಜನಾಯಕ, ಡಾ.ರೋಹಿಣಿ ಮಾನ್ವಿಕರ್, ಜಮಾ ಅತೆ ಇಸ್ಲಾಮಿ ಹಿಂದ್ ಸದಸ್ಯರಾದ ಕುತ್ತಿಜಾ ಪರ್ವಿನ್ ,ಸಬ್ಜಲಿಸಾಬ್, ಅಕ್ಬರ್ ಸಾಬ್, ಮಾಜಿ ಅಧ್ಯಕ್ಷರಾದ ಮುಹಮ್ಮದ್ ದಾವುದ್ ಸಿದ್ದಿಖಿ, ಮತ್ತು ಶೇಖ್ ಬಾಬಾ ಹುಸೇನ್ ಸಾಬ್, ಅಬ್ದುಲ್ ರೌಪ್ ಸಾಬ್ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ

Kalyan Karnataka Festival Day: Land Title Deed Distribution ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸೆ.17ರಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.