In the wake of old enmity, the two groups fought with sticks

ರಾಯಚೂರು ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ಹಳೆ ದ್ವೇಷ ಹಿನ್ನಲೆಯಲ್ಲಿ, ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಭರ್ಚಿ, ಬಡಿಗೆ, ಬೆತ್ತಗಳಿಂದ ಹೊಡೆದಾಡಿಕೊಂಡದ್ದಾರೆ. ಶನಿವಾರ ಸಂಜೆ ವೇಳೆ ಘಟನೆ ಜರುಗಿದೆ. ಈ ವೇಳೆ 8 ಜನರಿಗೆ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅದರಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ, ಗಾಯಾಳುಗಳಿಗೆ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಡೆದಾಟದಲ್ಲಿ ಭೀಮೇಶ್ ನಾಯಕ್ (38) ಮೃತಪಟ್ಟಿದ್ದು, ರಾಮಲಮ್ಮ, ಅಲಾರಿ ನಾಯಕ್, ದೂಳಯ್ಯ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕಟ್ಟಿಗೆ, ಕುಡುಗೋಲು, ಭರ್ಜಿಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಗುಂಪಿನಲ್ಲಿ ಯರ್ರಣ್ಣ, ದೊಳ್ಳಯ್ಯ, ದೇವಪ್ಪ, ಮಾದಗಾನು, ಗೊರಿಯಾನು, ವಿರೇಶ್, ತಾಯಪ್ಪ, ಕೃಷ್ಣಗಾರು ಎಂಬುದರಿಂದ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಘರ್ಷಣೆಯಿಂದಾಗಿ ವೃದ್ದರು ಸೇರಿದಂತೆ ಬಹುತೇಕರಿಗೆ ಗಾಯಗ ಳಾಗಿವೆ. ಸ್ಥಳಕ್ಕೆ ಇಡಪನೂರು ಪೋಲಿಸರು ತೆರಳಿ ಪರಸ್ಥಿತಿ ತಿಳಿಗೊಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ. ಈ ಕುರಿತು ಇಡಪನೂರು ಠಾಣೆಯಲ್ಲಿ ಪ್ರಕರಣ ನಡೆದಿದೆ.