Best Teacher Award : Congratulatory programme

ಗಂಗಾವತಿ.:ನಗರದ ಕಂಪ್ಲಿ ರಸ್ತೆಯಲ್ಲಿರುವ ಉದ್ಭವ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಸಹ ಶಿಕ್ಷಕರ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡ ನೀಲಮ್ಮ ಹಿರೇಮಠ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಭಾನುವಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಮಾತನಾಡಿ, ಶಿಕ್ಷಕ ವೃತ್ತಿಯು ಅಮ್ಯೂವಾಗಿರುವ ವೃತ್ತಿಯಾಗಿದೆ. ವೃತ್ತಿಯಲ್ಲಿರುವ ಪ್ರತಿಯೊಬ್ಬ ಶಿಕ್ಷಕರು ಸಹ ಅದಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಕರು ದೇವರ ಸಮಾನವಾಗಿರುತ್ತಾರೆ. ನಾವು ಕಲಿಸುವ ಪ್ರತಿಯೊಬ್ಬರು ವಿಷಯವು ಸಹ ಅವರ ಬಾಳಿಗೆ ಬೆಳಕು ಆಗಬೇಕು. ಹಾಗಾಗಿ ಶಿಕ್ಷಕರು ಮಕ್ಕಳಲ್ಲಿ ತಾರತಮ್ಯವನ್ನು ಮಾಡದೆ ಶಿಕ್ಷಣ ನೀಡಬೇಕು. ಇನ್ನೂ ಅತ್ಯುತ್ತಮ ಪ್ರಶಸ್ತಿಯನ್ನು ಅವರ ಸೇವೆಯನ್ನು ಗುರುತಿಸಿ ನೀಡಲಾಗುತ್ತಿದೆ. ಅದೇ ರೀತಿಯಾಗಿ ಉಪ್ಪಿನವಳ್ಳಿ ಕ್ಯಾಂಪನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ನೀಲಮ್ಮ ಹಿರೇಮಠ ಅವರು ಅವರ ವೃತ್ತಿ ಜೀವನದಲ್ಲಿ ಅವರ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಪ್ರತಿಯೊಬ್ಬರಿಗೂ ಸಹ ಮಾದರಿಯಾಗಿದೆ ಎಂದು ಹೇಳಿದರು. ನಂತರ ನೀಲಮ್ಮ ಹಿರೇಮಠ ಸಶಿಕ್ಷಕಿಗೆ ಸನ್ಮಾನಿಸಿ, ಅಭಿನಂದನೆಯನ್ನು ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಚಂದ್ರಶೇಖರ ಮುಕ್ಕುಂದಿ, ವೀರೇಶ್, ಯಂಕನಗೌಡ, ಈರಮ್ಮ ಹಾಗೂ ಸಹ ಶಿಕ್ಷಕರು ಇದ್ದರು.
Kalyanasiri Kannada News Live 24×7 | News Karnataka
