Breaking News

ಹಿರೇಜಂತಕಲ್‌ನ ಸರ್ವೇ ನಂ: 363/2ರ ಜಮೀನಿನಲ್ಲಿನ ಉದ್ದೇಶಿತ ಕಸಾಯಿಖಾನೆ (ವಧಾಗೃಹ) ನಿರ್ಮಾಣಕ್ಕೆ ಆಕ್ಷೇಪ: ವೆಂಕಟೇಶ ಕೆ.

Objection to Construction of Proposed Slaughterhouse (Slaughterhouse) on Land Survey No: 363/2, Hirejantakal: Venkatesha K.

ಜಾಹೀರಾತು

ಗಂಗಾವತಿ,12:  ನಗರಸಭೆ ವ್ಯಾಪ್ತಿಯ ಹಿರೇಜಂತಕಲ್‌ ಸರ್ವೆ ನಂ: 363/2ರ ಜಾಗೆಯನ್ನು ಒಳಚರಂಡಿ ತ್ಯಾಜ್ಯ ಸಂಗ್ರಹ ಉದ್ದೇಶಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸರ್ಕಾರದ ನಿಯಮಾವಳಿಗಳ ಪ್ರಕಾರ ನಗರ ವ್ಯಾಪ್ತಿಯಿಂದ ಸುಮಾರು 5 ಕಿ.ಮೀ ಅಂತರದಲ್ಲಿ ಯಾವುದೇ ಕಸಾಯಿಖಾನೆ (ವಧಾಗೃಹ) ನಿರ್ಮಿಸಲು ಅವಕಾಶವಿರುವುದಿಲ್ಲ. ಆದರೆ ಈಗ ಸದರಿ ಜಾಗೆಯನ್ನು ಕಸಾಯಿಖಾನೆಗೆ ನೀಡಲು ಮರುಟೆಂಡರ್ ಕರೆದಿರುವುದು ತೀವ್ರ ಆಕ್ಷೇಪಾರ್ಹವಾಗಿದೆ ಎಂದು ಬಿಜೆಪಿ ನಗರ ಯುವಮೋರ್ಚ ಅಧ್ಯಕ್ಷ  ಕೆ. ವೆಂಕಟೇಶ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೆಪ್ಟೆಂಬರ್-12 ರಂದು ಸದರಿ ಕಸಾಯಿ ಖಾನೆ ನಿರ್ಮಾಣದ ಬೆಂಡರ್‌ನ್ನು ಹಿಂಪಡೆಯಲು ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಹಿರೇಜಂತಕಲ್ ಪ್ರದೇಶವು ತನ್ನದೇ ಆದ ಐತಿಹಾಸಿಕ ಇತಿಹಾಸ ಹೊಂದಿದ್ದು ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಗಳು ನಿರ್ಮಿಸಿದ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನ, ಶಂಖ ಚಕ್ರ ಆಂಜನೇಯ ದೇವಾಲಯ, ಮುಡ್ಡಾಣೇಶ್ವರ ದೇವಸ್ಥಾನ ಹೀಗೆ ಇದು ಹಲವಾರು ದೇವಸ್ಥಾನಗಳು ಹಾಗೂ ಪುಣ್ಯ ಕ್ಷೇತ್ರಗಳಿರುವ ತಾಣವಾಗಿದ್ದು, ವಿಜಯನಗರ ಮುಖ್ಯ ಕಾಲುವೆ ಈ ಭಾಗದಲ್ಲಿ ಹರಿಯುತ್ತಿದ್ದು ಸುಮಾರು 700 ಎಕರೆ ಪ್ರದೇಶದಲ್ಲಿ ಕಬ್ಬು, ಬಾಳೆ, ಭತ್ತ ಮತ್ತು ಇನ್ನಿತರ ಬೆಳೆ ವ್ಯವಸಾಯ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಮರುಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು ಸದರಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಸದರಿ ಮರುಟೆಂಡರ್ ನಿರ್ಣಯವನ್ನು ಕೈಬಿಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇಲ್ಲದೇ ಹೋದಲ್ಲಿ ಯುವಮೋರ್ಚಾವತಿಯಿಂದ ಮುಂದಿನ ಹೋರಾಟಕ್ಕೆ ಅಣೆಯಾಗಬೇಕಾಗುತ್ತದೆ ಎಂದು ತಿಳಿಸುತ್ತಾ, ಈ ಹಿಂದೆ ಇದೇ ವಿಚಾರವಾಗಿ 2020ರ ಫೆಬ್ರವರಿ-19 ರಂದು ಗಂಗಾವತಿ ಬಂದ್ ಕರೆದ ಹಾಗೆ. ಮುಂದಿನ ದಿನಗಳಲ್ಲಿ ಗಂಗಾವತಿ ಬಂದ್‌ ಕರೆ ನೀಡುತ್ತೇವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ದುರಗೇಶ, ರಮೇಶ, ಪ್ರಜ್ವಾಲ್,ಅಭಿಷೇಕ, ಮನು,ಉದಯ,ಸುರೇಶ ಸೇರಿದಂತೆ ಇತರರು ಇದ್ದರು

About Mallikarjun

Check Also

ಬಸವಾದಿ ಶರಣರ ನಿಜವಾದತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು : ಶಿವಣ್ಣ ಇಂದ್ವಾಡಿ

The true ideals of Basavadi Sharan should be conveyed to the next generation : Shivanna …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.