Farmers are in debt due to crop destruction due to wild animals that entered the farm.
ವರದಿ :ಬಂಗಾರಪ್ಪ ,ಸಿ .
ಹನೂರು :ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ರೈತರ ಜಮೀನುಗಳಿಗೆ ನುಗ್ಗುವುದು ವಾಡಿಕೆಯಾಗಿದೆ ,ಆದರೆ ವರ್ಷವಿಡೀ ಬೆಳೆದ ಬೆಳೆಗಳನ್ನು ಒಂದೆರಡು ದಿನಗಳಲ್ಲಿ ಕಾಡು ಪ್ರಾಣಿಗಳು ತಿಂದು ನಾಶ ಮಾಡಿದ್ದರೆ ನಮ್ಮಗಳ ಹೊಟ್ಟೆಪಾಡಿಗೆ ಎನು ಮಾಡುವುದು ಎಂದು ಕಾಂಚಳ್ಳಿ ಗ್ರಾಮದ ಬಸವರಾಜು ಅಳಲನ್ನು ತೋಡಿಕೊಂಡರು.
ತಾಲೂಕಿನ ಸೂಳೇರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಬಸವರಾಜು ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯನ್ನ ಕಾಡುಪ್ರಾಣಿಗಳು ಬೆಳೆ ನಾಶ ಮಾಡಿರುವ ಘಟನೆ ನೆಡಿದಿದ್ದು ತಡರಾತ್ರಿ ಬೆಳಕಿಗೆ ಬಂದಿದೆ. ನಂತರ ಮಾತನಾಡಿದ ಅವರು ನಮ್ಮ ಜಮೀನಿನಲ್ಲಿ
ಬೆಳೆಯಲಾಗಿದ್ದ ಸುಮಾರು 2 ಎಕರೆ 29 ಸೆಂಟು (ಸರ್ವೇ ನಂ :439)ಮೆಕ್ಕೆಜೋಳವನ್ನ ಕಾಡುಪ್ರಾಣಿಗಳು ನಾಶ ಮಾಡಿದೆ. ಸುಮಾರು 3 ಲಕ್ಷರೂಪಾಯಿ ಸಾಲ ಮಾಡಿ ಹಾಕಿದ್ದ ಬೆಳೆ ಕಾಡು ಪ್ರಾಣಿಗಳ ಪಲಾಗಿದ್ದು, ಹಗಲು ಇರುಳು ಎನ್ನದೆ ಕಾವಲು ಕಾಯ್ದು, ಗೊಬ್ಬರವನ್ನ ಹಾಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಆದರೆ ರೈತರ ಗೋಳು ಕೇಳುವವರು ಯಾರು ಎಂಬಂತಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರು ಸಹ ರೈತ ಬೆವರು ಸುರಿಸಿ ಬಿತ್ತನೆ ಮಾಡಿ, ಬೆಳೆಯನ್ನ ಕಾಪಾಡಿಕೊಂಡು ಬಂದಿರುತ್ತಾರೆ, ಆದರೆ ಈಗ ಕಾಡು ಪ್ರಾಣಿಗಳು ನಾಶ ಮಾಡಿದ್ದು ದಿಕ್ಕು ತೋಚದೆ ರೈತ ಒದ್ದಾಡುತ್ತಿದ್ದೆನೆ ಎಂದರು.
ಬಾಕ್ಸ್ ಐಟಂ:-
ರೈತರು ಬೆಳೆದ ಬೆಳೆಗಳನ್ನ ಕಾಡುಪ್ರಾಣಿಗಳು ನಾಶ ಮಾಡಿದರೆ, ಅರಣ್ಯ ಇಲಾಖೆಯವರು ಸ್ಥಳ ಮಹಜರು ಮಾಡಲು ಹಿಂದೆ ಮುಂದೆ ನೋಡಿ ಕೆಲ ದಿನಗಳು ಕಳೆದ ನಂತರ ಬರುತ್ತಾರೆ, ಆದರೆ ಸೂಕ್ತ ಪರಿಹಾರ ದೊರಕಿಸುವಲ್ಲಿ ವಿಪಲವಾಗುತ್ತಾರೆ, ಪರಿಹಾರದ ಹಣ ಕೇವಲ 5000-10 ಸಾವಿರರೂ ಗಳು ಕೊಡುತ್ತಾರೆ. ಅವರು ಕೊಡುವ ಹಣ ವರ್ಷಗಟ್ಟಲೆ ಬೇಕಾಗುತ್ತದೆ, ಆದರೆ ಹಣ ಬಿತ್ತನೆ ಮಾಡುವುದಕ್ಕೂ ಆಗುವುದಿಲ್ಲ, ಜಮೀನನ್ನೇ ನಂಬಿಕೊಡಿದ್ದೇವೆ. ನಮ್ಮ ಮನೆಯ ಜವಾಬ್ದಾರಿ ಹೊತ್ತು ಮನೆಯಲ್ಲಿ 10 ಜನ ವಾಸವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ, ಕುಟುಂಬ ಸಾಕುವುದಕ್ಕೂ ಆಗುವುದಿಲ್ಲ, ಕೈಗೆ ಬಂದ ಫಸಲು ಬಾಯಿಗೆ ಬಂದಿಲ್ಲ ವಂತಾಗಿದೆ,ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಪರಿಹಾರದ ಹಣ ನೀಡಿ, ರೈತರಿಗೆ ಸಹಾಯವಾಗುತ್ತದೆ,