A student was beaten by the headmaster. Protest by female students
ವರದಿ : ಪಂಚಯ್ಯ ಹಿರೇಮಠ,,
ಗಂಗಾವತಿ : ನಗರದ ಎಂಎನ್ಎಂ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿಯಮೇಲೆ ಅಲ್ಲಿನ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಎಂಬುವರು ಕಿವಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದoದು ವಿದ್ಯಾರ್ಥಿನಿಯರು ಡಿಎಸ್ಎಸ್ ಮುಖಂಡ ಅಮರೇಶ್ ನೇತೃತ್ವದಲ್ಲಿ ಶಾಲೆಯ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು,,
ಮುಖ್ಯೋಪಾಧ್ಯಾಯರಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ ತಾವು ಆಂಗ್ಲ ಮಾಧ್ಯಮ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದು ಕಳೆದ ಶುಕ್ರವಾರದಂದು ಪ್ರಾಜೆಕ್ಟ್ ವರ್ಕ್ ಗೆ ಸಂಬಂಧಿಸಿದಂತೆ ನಾವು ಮುಖ್ಯೋಪಾಧ್ಯಾಯರಿಗೆ ತೋರಿಸಲು ಹೋದಾಗ ಇಲ್ಲಿಗೆ ಯಾರು ಬರಲು ಹೇಳಿದರು ಎಂದು ಹೇಳಿ ರಭಸವಾಗಿ ಕಿವಿಗೆ ಹೊಡೆದ ಪ್ರಯುಕ್ತ ಕಿವಿಯಲ್ಲಿನ ಓಲೆ ಚುಚ್ಚಿ ಕೊಂಡ ರಕ್ತಸ್ರಾವ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನೂ ಕೇಲವೊಂದಿಷ್ಟು ವಿದ್ಯಾರ್ಥಿಗಳು ತಯಾರಿಸಿದ ಚಟುವಟಿಕೆಯ ಹಾಳೆಗಳನ್ನು ಮುಖ್ಯ ಗುರುಗಳು ಹರಿದು ಹಾಕಿ ಅಪಮಾನಗೊಳಿಸಿದ್ದಾರೆ ಜೊತೆಗೆ ಸಣ್ಣಪುಟ್ಟ ಕಲ್ಲುಗಳಿಂದ ಹೊಡೆಯುವುದು ಸೇರಿದಂತೆ ಇನ್ನೂ ಹುಡುಗಾಟದ ಮನೋಭಾವನೆಯನ್ನು ಹೊಂದಿರುವ ಮುಖ್ಯೋಪಾಧ್ಯಾಯರು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ವಿದ್ಯಾರ್ಥಿನಿಯರು ಹಾಗೂ ಪಾಲಕರು ಸೇರಿದಂತೆ ಡಿಎಸ್ಎಸ್ ಮುಖಂಡ ಅಮರೇಶ ಆಗ್ರಹಿಸಿದರು.
ಈ ಕುರಿತಂತೆ ನಾವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಆಗಮಿಸುವವರೆಗೆ ವರ್ಗದ ಕೊಠಡಿಗೆ ಹೋಗುವುದಿಲ್ಲಾ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಮುಖ್ಯ ಗುರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿ ಆರ್ ಸಿ ಅಧಿಕಾರಿ ಮಲ್ಲಿಕಾರ್ಜುನ ವಸ್ತ್ರದ ಹಾಗೂ ನಾಗರಾಜ ಅವರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಇಲ್ಲಿನ ಕುಂದು ಕೊರತೆಗಳ ಬಗ್ಗೆ ಹಾಗೂ ಮುಖ್ಯ ಗುರುಗಳ ನಡುವಳಿಕೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಜಿಲ್ಲಾ ಉಪಾಧ್ಯಕ್ಷರಿಗೆ ಮಾಹಿತಿ ನೀಡಲಾಗುವುದೆಂದು ಹೇಳಿದರು.
ಇದುವರೆಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಲಭ್ಯವಿಲ್ಲ ಕಳಪೆ ಆಹಾರ ಗುಣ ಮಟ್ಟವಿಲ್ಲದ ಸಾಂಬಾರ ವಿತರಿಸುತ್ತಿದ್ದು, ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡದೆ ನಳದ ನೀರನ್ನೇ ಕುಡಿಯಲು ಪೂರೈಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆಯ ತಾಲೂಕ ಅಧ್ಯಕ್ಷ ಗ್ಯಾನೇಶ್ ಕಡಗದ ಹಾಗೂ ಸದಸ್ಯರು ಮಾತನಾಡಿ ಇವರು ಈ ರೀತಿಯಾಗಿ ವರ್ತಿಸಿದಲ್ಲಿ ಪೊಲೀಸ್ ಇಲಾಖೆಗೆ ದೂರು ನೀಡುವುದಾಗಿ ಪ್ರತಿಭಟನೆ ನಿರತರು ಎಚ್ಚರಿಕೆಯನ್ನು ನೀಡಿದರು.