Congress made another serious allegation against Chief B
ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬರ‍್ಡ್ ಆಫ್ ಇಂಡಿಯಾ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್ ಮತ್ತೊಂದು ಗಂಭೀರ ಆರೋಪ ಮಾಡಿದೆ. ಈಗಾಗಲೇ ಮಾಧವಿ ಪುರಿ ಅವರು ಐಸಿಐಸಿಐ ಸಂಸ್ಥೆಯಿಂದ ನಿವೃತ್ತಿಯಾದ ಬಳಿಕವೂ ಆದಾಯ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು, ಇದೀಗ ಮಾಧವಿ ಅವರು ಬಾಡಿಗೆಯಿಂದ ೨.೬ ಕೋಟಿ ರೂಪಾಯಿ ಆದಾಯ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆಂತರಿಕ ವ್ಯಾಪಾರ ಮತ್ತು ಇತರ ಉಲ್ಲಂಘನೆಗಳ ಆರೋಪದಲ್ಲಿ ಸೆಬಿ ತನಿಖೆಯಲ್ಲಿರುವ ಕಂಪನಿಯಾದ ವೋಕರ‍್ಡ್ ಲಿಮಿಟೆಡ್
ನೊಂದಿಗೆ ಸಂಯೋಜಿತವಾಗಿರುವ ಘಟಕದಿಂದ ಬಾಡಿಗೆ ಆದಾಯವನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಇದು
. ಮಾಧವಿ ಪುರಿ ಬುಚ್ ಅವರು ೨೦೧೮ ರಿಂದ ೨೦೨೪ ರ ನಡುವೆ ಮೊದಲು ಸೆಬಿಯ ಸಂಪರ‍್ಣ ಸದಸ್ಯರಾಗಿ ಮತ್ತು ನಂತರ ಅಧ್ಯಕ್ಷರಾಗಿ, ವೊಕರ‍್ಡ್ ಲಿಮಿಟೆಡ್‌ಗೆ ಸಂಯೋಜಿತವಾಗಿರುವ ಕರೋಲ್ ಇನ್ಫೋ ರ‍್ವೀಸಸ್‌ನಿಂದ ₹೨.೧೬ ಕೋಟಿ ಪಡೆದಿದ್ದಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಗಂಭೀರ ಆರೋಪ ಮಾಡಿದ್ದಾರೆ.ತನಿಖೆಯಲ್ಲಿರುವಾಗ ಹಣಕಾಸು ವ್ಯವಹಾರ ಸೆಬಿ ವೋಕರ‍್ಡ್ ವಿರುದ್ಧ ತನಿಖೆ ನಡೆಸುತ್ತಿರುವ ಸಂರ‍್ಭದಲ್ಲಿ ಮಾಧವಿ ಪುರಿ ಅವರು ಈ ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ ಮರ‍್ಚ್ ೨, ೨೦೨೨ ರಂದು ಸೆಬಿ ಅಧ್ಯಕ್ಷರನ್ನಾಗಿ ಮಾಧವಿ ಪುರಿ ಅವರನ್ನು ನೇಮಕ ಮಾಡಿದೆ. ಅವರು ತಮ್ಮ ಹಿಂದಿನ ಹಣಕಾಸಿನ ವ್ಯವಹಾರಗಳನ್ನು ಮುಂದುವರೆಸಬಹುದು ಎನ್ನುವ ಷರತ್ತಿನ ಮೇಲೆ ಅವರನ್ನು ನೇಮಕ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ವಜಾಗೊಳಿಸಲು ಆಗ್ರಹ
ಒಂದಲ್ಲ ಹಲವು ಆರೋಪಗಳು ಅವರ ಮೇಲಿರುವ ಕಾರಣ ತಕ್ಷಣವೇ ಅವರನ್ನು ಸೆಬಿ ಅಧ್ಯಕ್ಷೆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇಷ್ಟು ದೊಡ್ಡ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಯ ಅಧ್ಯಕ್ಷರಾಗಿರುವವರು ಪಾರರ‍್ಶಕವಾಗಿ ಕೆಲಸ ಮಾಡಬೇಕು, ಇವರ ಮೇಲೆ ಇಷ್ಟು ಆರೋಪ, ಪುರಾವೆಗಳು ಇದ್ದರೂ, ಸುಮ್ಮನಿರುವ ಪ್ರಧಾನಿ ಮೋದಿ ಅವರಿಗೆ ಇನ್ನೆಷ್ಟು ದಾಖಲೆಗಳನ್ನು ತೋರಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕರ‍್ಯರ‍್ಶಿ ಜೈರಾಮ್ ರಮೇಶ್ ಕೇಳಿದ್ದಾರೆ. ಮಾಧವಿ ಪುರಿ ಬುಚ್ ವಿರುದ್ಧ ಹಲವು ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಸಂಸತ್ತಿನ ಸರ‍್ವಜನಿಕ ಲೆಕ್ಕಪತ್ರ ಸಮಿತಿ
ಆರೋಪಗಳ ಬಗ್ಗೆ ತನಿಖೆ ಮಾಡಲು ನರ‍್ಧರಿಸಿದೆ.