Reformation Program in Koppal District Jail
ಕೊಪ್ಪಳ: ಶ್ರೀ ಕಲ್ಯಾಣಸ್ವಾಮಿ ಅಧ್ಯಾತ್ಮಿಕ ಹಾಗೂ ಶಿಕ್ಷಣ ಟ್ರಸ್ಟ್ (ರಿ) ಬಳ್ಳಾರಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ವ್ಯಸನಮುಕ್ತ ಮತ್ತು ಬಂಧಿಗಳ ಮನಪರಿವರ್ತನೆಗಾಗಿ ಪ್ರವಚನ ಕಾರ್ಯಕ್ರಮ
ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಿದ್ದು ಕಾರ್ಯಕ್ರಮದ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಕಲ್ಯಾಣಸ್ವಾಮಿ ಸಂಸ್ಥಾನಮಠ, ಕಮ್ಮರಬೇಡು, ಬಳ್ಳಾರಿ. ಡಾ|| ಶ್ರೀ ಮಹೇಶ್ವರ ಮಹಾಸ್ವಾಮಿಗಳು ಸಾವಯವ ಕೃಷಿ ತಜ್ಞರು, ಪುಣ್ಯಕ್ಷೇತ್ರ ನಂದಿಪುರ ಪರಮಪೂಜ್ಯ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು ಸವಿತಾಪೀಠ ಮಹಾ ಸಂಸ್ಥಾನ, ಶ್ರೀ ಕ್ಷೇತ್ರ ಕೊಂಚೂರು ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಹಾಂತೇಶ್. ಎಸ್ ದರಗದ ಆಗಮಿಸಲಿದ್ದು,ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶರು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಶ್ರೀ ಅಂಬರೀಶ್ ಎಸ್. ಪೂಜಾರ್ ಅಧೀಕ್ಷಕರು, ಜಿಲ್ಲಾ ಕಾರಾಗೃಹ, ಕೊಪ್ಪಳ ಶ್ರೀ ಎಂ.ಜೆ. ಶರಬಯ್ಯ ಸ್ವಾಮಿ ಅಧ್ಯಕ್ಷರು, ಶ್ರೀಮತಿ ಗೌರಮ್ಮ ಜಂಬಯ್ಯಸ್ವಾಮಿ ಚಾರಿಟಬಲ್ ಅಂಡ್ ಎಜುಕೇಷನಲ್ ಟ್ರಸ್ಟ್, ಮಾಳಾಪುರ (ಬಳ್ಳಾರಿ) ಶ್ರೀರಾಮುಲು ಜೈಲರ್, ಜಿಲ್ಲಾ ಕಾರಾಗೃಹ, ಕೊಪ್ಪಳ ಡಾ.ಬಿ.ಎನ್, ಹೊರಪೇಟಿ ಸಾಹಿತಿ,ಪತ್ರಕರ್ತ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ, ಕೊಪ್ಪಳದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತಿ ಇರಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು| ಎಂ.ಎಸ್. ಜಯಲಕ್ಷ್ಮಿ ಸಂಗೀತ ಮತ್ತು ನೃತ್ಯ : ಕು| ಅವಂತಿಕ, ಕು| ಜಾನವಿರೆಡ್ಡಿ, ಬಳ್ಳಾರಿ ಮತ್ತು ಕಲಾ ಬಳಗ ಉಪಸ್ಥಿತರಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.