Breaking News

ಸಾರಿಗೆ ಬಸ್ ಪರಸ್ಪರ ಮುಖ ಮುಖಿ ಡಿಕ್ಕಿ 20 ಕ್ಕೂಹೆಚ್ಚುವಿದ್ಯಾರ್ಥಿಗಳಿಗೆ ಗಂಭೀರ ಗಾಯ

More than 20 students seriously injured in transport bus head-on collision

ಜಾಹೀರಾತು

ಮಾನ್ವಿ: ತಾಲೂಕಿನ ಕಪಗಲ್ ದೊಡ್ಡ ಹಳ್ಳದ ಹತ್ತಿರ ಮಾನ್ವಿ ಪಟ್ಟಣದ ಲೋಯೋಲ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪರಸ್ಪರ ಮುಖ ಮುಖಿ ಡಿಕ್ಕಿ ಹೊಡೆದು ಪರಿಣಾಮವಾಗಿ ಲೋಯೋಲ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನದಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿದ್ದು ಅದರಲ್ಲಿ ವಿದ್ಯಾರ್ಥಿಗಳಿಗೆ ಕಾಲುಗಳು ತುಂಡಾಗಿದರಿಂದ ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ

ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ವಾಹನ ಚಾಲಕರಾಗಿದ್ದ ಬಲವಂತರಾಯ ಗಂಭೀರವಾಗಿ ಗಾಯಗಳಾಗಿದ್ದು ರಿಮ್ಸ್ ಗೆ ದಾಖಲಿಸಲಾಗಿದೆ. ಬಸ್ ನಲ್ಲಿರುವ ಪ್ರಯಾಣಿಸುತ್ತಿದ ಪ್ರಯಾಣಿಕರಲ್ಲಿ 23 ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿದ್ದು ತಾಲೂಕಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತಪಟ್ಟ ವಿದ್ಯಾರ್ಥಿ ಶ್ರೀ ಕಾಂತ ಸಮರ್ಥ ಕುರ್ಡಿ 7 ನೇ ತರಗತಿ. ಮಾನ್ವಿ ಪಟ್ಟಣದಲ್ಲಿನ ಲೋಯೋಲ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ. ಕುರ್ಡಿ, ಹೊಕ್ರಾಣಿ, ಕಪಗಲ್, ಕಂಬಳತಿ, ವಿದ್ಯಾರ್ಥಿಗಳನ್ನು ಮಾನ್ವಿ ಶಾಲೆಗೆ ಕರೆದುಕೊಂಡು ಬರುತ್ತಿರುವಾಗ ಮಾನ್ವಿ ಲೋಯೋಲ ಶಾಲೆಗೆ ಬರುತ್ತಿರುವ ಬಸ್ ಗೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ರಾಯಚೂರಿನ ಕಡೆ ಹೋಗುತ್ತಿರುವ ಮುಖ ಮುಖಿ ಡಿಕ್ಕಿ ಹೊಡೆದು ಪರಿಣಾಮವಾಗಿ ಈ ಸಂಭವಿಸಿದೆ.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.