Breaking News

ದರೋಜಿ-ಗಂಗಾವತಿ-ಬಾಗಲಕೋಟ್ ರೈಲ್ವೆ ಲೈನ್: ಅನುದಾನ ಒದಗಿಸಲು ರೇಲ್ವೆ ರಾಜ್ಯ ಸಚಿವರಿಗೆ ಮನವಿ:

Daroji-Gangavati-Bagalakot Railway Line: Request to the Minister of State for Railways to provide grants:

ಜಾಹೀರಾತು

ರಾಯಚೂರು: ದರೋಜಿ-ಗಂಗಾವತಿ-ಬಾಗಲಕೋಟ್ ನೂತನ ರೈಲ್ವೆ ಲೈನ್ ಮಾರ್ಗ ರಚನೆಗೆ ಅನುದಾನ ಒದಗಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರವಿವಾರ ರಾಯಚೂರು ನಗರದಲ್ಲಿ ಸಚಿವರನ್ನು ಭೇಟಿಯಾದ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಕಾರ್ಯದರ್ಶಿ ಉದಯ ಕುಮಾರ ಈ ಬಗ್ಗೆ ಮನವಿ ಸಲ್ಲಿಸಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮನವಿಯನ್ನು ಪರಿಶೀಲಿಸಿ,ಉತ್ತರ ಕಳುಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ,ಗಂಗಾವತಿ ನಗರ ಸಭೆಯ ಹಿರಿಯ ಸದಸ್ಯ ಮನೋಹರ ಸ್ವಾಮಿ ಹಿರೇಮಠ,ರಾಯಚೂರು ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಶಿ,ಅಧ್ಯಕ್ಷ ಎಸ್.ಕಮಲ ಕಿಶೋರ್, ಕಾರ್ಯದರ್ಶಿ ವಾಯ್.ಜಂಬಣ್ಣ,ಸದಸ್ಯರಾದ ಉದಯ ಕಿಶೋರ್, ಮತ್ತಿತರರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.