ಸಂಜಯ ಮಾಕಲ್
ಹುಡುಕಿದರೆ ನೂರಲ್ಲ ಸಾವಿರಾರು ಹಾಲುಮತ ಕುರುಬ ಸಮುದಾಯದ ಶಿವಶರಣರು ಲಿಂಗಾಯತ ಧರ್ಮದಲ್ಲಿ ಸಿಗುತ್ತಾರೆ. ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಧರ್ಮ ಲಿಂಗಾಯತ ಧರ್ಮ. ಬಸವಾದಿ ಶರಣರು ಹಾಗೂ ಅಂದು ಇಡೀ ಸಮಸ್ತ ಜನಸಮೂಹವೆ ಸೇರಿ ಒಪ್ಪಿ ಸ್ಥಾಪನೆಗೈದಂತಹ ಧರ್ಮ. ಬರಿ ಹನ್ನೆರಡನೇಯ ಶತಮಾನದಲ್ಲಿಯಷ್ಟೆ ಕಾಣದೆ ಇಂದಿಗೂ ನಾವು ಹಾಲುಮತ ಕುರುಬ ಶರಣರ ಕೃಪೆ ಕೊಡುಗೆ ಲಿಂಗಾಯತ ಧರ್ಮಕ್ಕೆ ಅಪಾರವಾಗಿದೆ . ಹನ್ನೆರಡನೆಯ ಶತಮಾನದ ಕುರುಬ ಗೋಲ್ಲಾಳೇಶ, ಕುರುಬರ ಕುಲಗುರು ರೇವಣಸಿದ್ದರು ಲಿಂಗಾಯತ ಧರ್ಮ ನಿರ್ಣಯಗೈದು ಮಾರ್ಗದರ್ಶನವಿತ್ತವರು, ರೇವಣಸಿದ್ದರ ಮಗ ರುದ್ರಮುನಿ ಶರಣರು, ಮಗಳು ಶರಣೆ ರೇಕಮ್ಮ ಇತ್ಯಾದಿ ವಿಜಯನಗರ ಸಾಮ್ರಾಜ್ಯದ ದೊರೆ ಪ್ರೌಢದೇವರಾಯನು ಶರಣರ ಪುರಾಣಗಳು, ವೀರಶೈವ ಕೃತಿಗಳ, ನೂರೊಂದು ವಿರಕ್ತರು ಹೀಗೆ ಮುಳುಗುತ್ತಿದ್ದ ಬಸವಾದಿ ಶರಣ ಸಂಪ್ರದಾಯವನ್ನು ಪುನರುಜ್ಜಿವನಗೊಳಿಸಿದನು. ಈಗಿನ ಕಾಲದಲ್ಲಿ ಬಂತನಾಳ ಶಿವಯೋಗಿಗಳ ಶಿಷ್ಯ ಪರಂಪರೆಯಲ್ಲಿ ಸದ್ಗುರು ಯಲ್ಲಾಲಿಂಗ ಮಹಾರಾಜರು ˌ ಸಜ್ಜಲಗುಡ್ಡದ ಶರಣಮ್ಮನವರು ˌ ಮಹಾ ಶರಣರಾದ ಲಿಂಗೈಕ್ಯರಾದ ನಮಗೆ ಆದರ್ಶಪ್ರಾಯರಾಗಿದ್ದ ಶರಣ ವಿ ಸಿದ್ದರಾಮಣ್ಣನವರು, ಕನಕಗುರುಪೀಠ ಗುರುವರ್ಯರಾದ ನಿರಂಜನಾಂದಪುರಿ ಜಗದ್ಗುರುಗಳು. ಇವರೆಲ್ಲಾ ಲಿಂಗಾಯತ ಧರ್ಮದ ಪ್ರಾಥಃಸ್ಮರಣಿಯರು . ಅವರೆಲ್ಲರಿಗೂ ನನ್ನ ಅನಂತ ಶರಣು ಶರಣಾರ್ಥಿಗಳು.
ಹಾಲುಮತ ಕುರುಬ ಶರಣರ ಕೃಪೆ ಕೊಡುಗೆ ಲಿಂಗಾಯತ ಧರ್ಮಕ್ಕೆ ಅಪಾರ-ಸಂಜಯ ಮಾಕಲ್
ಜಾಹೀರಾತು