Insist on the construction of well-equipped toilets in Anegundi: Sindhu D
ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮವು ಐತಿಹಾಸಿಕ, ಪುರಾಣ, ಪೌರಾಣಿಕ ಹಾಗೂ ವಿಶ್ವ ಪಾರಂಪರಿಕ ಪ್ರಸಿದ್ಧ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಬಂದು ವೀಕ್ಷಿಸಿ ಹೋಗುವಂತಹ ಸ್ಥಳವಾಗಿರುತ್ತದೆ. ದುರಂತವೇನೆAದರೆ, ಆನೆಗುಂದಿ ಭಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಇರುವುದಿಲ್ಲ ಎಂದು ಪರಿಸರ ಪ್ರೇಮಿಯಾದ ಕೇಂದ್ರೀಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಸಿಂಧು ಡಿ ರವರು ಕಳವಳ ವ್ಯಕ್ತಪಡಿಸಿದರು.
ಅವರು ಆನೆಗೊಂದಿ ಭಾಗದಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ, ಆಗಸ್ಟ್-೧೯ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಸದರಿ ವಿಷಯದ ಕುರಿತು ಹಲವಾರು ಪ್ರವಾಸಿಗರು, ಗೈಡ್‌ಗಳು ಹಾಗೂ ಇದನ್ನು ಅರಿತುಕೊಂಡ ಸಾರ್ವಜನಿಕರು ಸದರಿ ವಿಷಯದ ಕುರಿತಾಗಿ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಶೌಚಾಲಯದ ಕಟ್ಟಡ ನಿರ್ಮಿಸಿ ಪ್ರಾರಂಭಿಸುವAತೆ ವಿನಂತಿಸಿಕೊAಡಿದ್ದು, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಬದಲಾಗಿ ಈ ಭಾಗದ ಸುತ್ತ-ಮುತ್ತಲಿನ ಪ್ರದೇಶದಲ್ಲಿರುವ ಹೋಟೆಲ್‌ಗೆ ಹೋಗಿ ಶೌಚಾಲಯ ಉಪಯೋಗಿಸಿಕೊಂಡು ಬರುವ ಸ್ಥಿತಿ ಬಂದೊದಗಿರುತ್ತದೆ. ಇದರಿಂದ ಪ್ರವಾಸಿಗರು ಯಾರು ಮುಂದೆಯು ಹೇಳಿಕೊಳ್ಳದೇ ಕೆಲ ವ್ಯಕ್ತಿಗಳ ಹತ್ತಿರ ಚರ್ಚೆ ಮಾಡಿರುತ್ತಾರೆ. ಕೇವಲ ಉತ್ಸವದ ಸಮಯದಲ್ಲಿ ಮಾತ್ರ ಈ ಸ್ಥಳವು ಉಪಯೋಗಿಸಿಕೊಂಡು ಉಳಿದ ದಿನಮಾನಗಳಲ್ಲಿ ಇದಕ್ಕೆ ಯಾವುದೇ ರೀತಿಯಿಂದ ಸಹಕರಿಸುತ್ತಿಲ್ಲ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ, ಶಾಸಕರಿಗೆ ಹಾಗೂ ಸಚಿವರುಗಳಿಗೆ ಪ್ರವಾಸಿಗರಿಗಾಗಿ ಮಾತ್ರ ಸುಸಜ್ಜಿತ ಶೌಚಾಲಯ ಕಟ್ಟಡವನ್ನು ನಿರ್ಮಿಸುವಂತೆ ವಿನಂತಿಸಿಕೊAಡಿದ್ದು, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಫೌಜಿಯಾ ತರುನ್ನಂ ರವರು ಆನೆಗುಂದಿ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶೌಚಾಲಯಕ್ಕೆ ಮಾನವಿ ಮಾಡಿದಾಗ ಕೂಡಲೇ ಇದಕ್ಕೆ ಸ್ಪಂದಿಸಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ ಗಂಗಾವತಿ ಇವರಿಗೆ ಪಿ.ಡಿ.ಓ. ಮತ್ತು ಅಧ್ಯಕ್ಷರಿಗೆ ೩ ತಿಂಗಳ ಅವಧಿಯೊಳಗಾಗಿ ಸುಸಜ್ಜಿತ ಶೌಚಾಲಯ ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಡುವಂತೆ ಹೇಳಿರುತ್ತಾರೆ. ಇದರ ಬಗ್ಗೆ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಇದರ ಬಗ್ಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಈ ಹಿಂದೆ ಗಂಗಾವತಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ನಡೆಸಿದ ಜನ ಸಂಪರ್ಕ ಸಭೆಯಲ್ಲಿಯೂ ಸಹ ಇದರ ಬಗ್ಗೆ ಮನವಿ ಮಾಡಿಕೊಂಡಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ತಹಶೀಲ್ದಾರರು ಈ ಕೂಡಲೇ ಪರಿಗಣಿಸಿ ಆನೆಗುಂದಿಯಲ್ಲಿ ಕೇವಲ ಪ್ರವಾಸಿಗರಿಗಾಗಿ ಸುಸಜ್ಜಿತ ಶೌಚಾಲಯ ಒದಗಿಸಿಕೊಡಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮಾಹಿತಿಗಾಗಿ
ದೇವೆಂದ್ರö ತಂ. ಬಾಲಪ್ಪ
ಚಿಕ್ಕರಾಂಪುರ-ಆನೆಗುAದಿ, ತಾ|| ಗಂಗಾವತಿ.