Shortage of labor for farming: Machinery is essential for farmers:
ಗಂಗಾವತಿ: ತಾಲೂಕಿನ ಹಣವಾಳ ಗ್ರಾಮದ ವಿರೂಪಾಕ್ಷ ಗೌಡರ ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಗಂಗಾವತಿ ತಾಲೂಕು ವತಿಯಿಂದ ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಈ ದಿನ ಚಾಲನೆ ಮತ್ತು ಪ್ರಾತ್ಯಕ್ಷಿಕ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ ರವರು ಮಾತನಾಡಿ ಕೃಷಿಕರಿಗೆ ಸಹಕಾರ ನೀಡಬೇಕು. ಕೃಷಿಯಲ್ಲಿ ವೈಜ್ಞಾನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ರೈತರಿಗೆ ಭತ್ತ ನಾಟಿ ಮಾಡಲು ಯಂತ್ರದ ಸೌಲಭ್ಯವನ್ನು ಧರ್ಮಸ್ಥಳ ಸಂಸ್ಥೆ ನೀಡುತ್ತಿದ್ದು, ಈ ಯಂತ್ರಗಳ ಸೌಲಭ್ಯವನ್ನು ರೈತರು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮರಳಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಶೋಕ್ ರವರು ರೈತರಿಗೆ ಕೂಲಿ ಕಾರ್ಮಿಕರ ಸಮಸ್ಯೆಯಾಗಿರುವ ಈ ಸಂದರ್ಭದಲ್ಲಿ, ಯಂತ್ರದ ಬಳಕೆಯ ಮೂಲಕ ಯಂತ್ರಕ್ರಾಂತಿ ನಡೆಸುವ ಅನಿವಾರ್ಯತೆ ಇದ್ದು, ಆ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಸಹಕಾರ ನೀಡುತ್ತಿದೆ, ಸರಕಾರವು ಸಹ ಯಂತ್ರಗಳ ಖರೀದಿಗೆ ಅನೇಕ ಯೋಜನೆಗಳನ್ನು ರೈತರಿಗೆ ಅನುದಾನವನ್ನು ಸಹ ನೀಡುತ್ತಿದೆ ಎಂದರು, ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ವಿರೇಶಪ್ಪ, ವಿರೂಪಾಕ್ಷಪ್ಪ, ಸುಬ್ಬರಾವ್, ಹಣವಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ವೆಂಕಮ್ಮ,ಕೃಷಿ ಇಲಾಖೆಯ ಸಹಾಯಕಿ ವಿದ್ಯಾಶ್ರೀ, ಕೃಷಿ ಮೇಲ್ವಿಚಾರಕ ಲೋಕೇಶ, ಮೇಲ್ವಿಚಾರಕ ಮಂಜುನಾಥ, ಪ್ಲಾಂಟರ್ ಬ್ಯಾಂಕ್ ಮೇಲ್ವಿಚಾರಕ ಹನುಮಂತಪ್ಪ, ಶಿವರಾಜ್, ಸೇವಾಪ್ರತಿನಿದಿ ಸೇರಿದಂತೆ ಹಣವಾಳ ಗ್ರಾಮದ ರೈತರು, ಚಾಲಕರು ಉಪಸ್ಥಿತರಿದ್ದರು.