Breaking News

ಜು.೧೯, ಶುಕ್ರವಾರದಿಂದ ನಾಲೆಗಳಿಗೆ ನೀರು ಹರಿಸಲು ಸೂಚಿಸಿದ ಸಚಿವಶಿವರಾಜತಂಗಡಗಿ

Minister Shivarajthangadagi has instructed to drain the canals from Friday, June 19

ಜಾಹೀರಾತು

ತುಂಗಭದ್ರಾ ಜಲಾಶಯದ ನೀರಿನ ಮಟ್ಟ : ಡ್ಯಾಂ ಸಾರ‍್ಥ್ಯ- ೧೦೫.೭೮೮ ಟಿಎಂಸಿ, ಸದ್ಯದ ಸಂಗ್ರಹ – ೪೬.೮೦೨ ಟಿಎಂಸಿ, ಒಳ ಹರಿವು – ೧೦೪೦೬೦ ಕ್ಯೂಸೆಕ್ಸ್, ಹೊರ ಹರಿವು – ೩೦೦ ಕ್ಯೂಸೆಕ್ಸ್

ಕಲ್ಯಾಣ ಸಿರಿ –ಕೊಪ್ಪಳ: ಉತ್ತಮ ಮಳೆಯಿಂದಾಗಿ ತುಂಗಾಭದ್ರಾ ಜಲಾಶಯಕ್ಕೆ ಹೆಚ್ಚಿನ‌ ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜು.೧೯ ರಂದು ಶುಕ್ರವಾರ ಬೆಳಗ್ಗೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾ.

ಈ ಸಂಬಂಧ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ಮುಂಗಾರು- ಹಂಗಾಮಿನ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ‌ ಸಾಕಷ್ಟು ಒಳ ಹರಿವು ಪ್ರಾರಂಭವಾಗಿದೆ. ಜುಲೈ ೧೮ರ ವೇಳೆಗೆ ಜಲಾಶಯದಲ್ಲಿ ೪೬.೮೦೨ ಟಿಎಂಸಿ ನೀರು ಸಂಗ್ರಹ ಇದ್ದು, ಒಳ ಹರಿವಿನ ೧೦೪೦೬೦ ಕ್ಯೂಸೆಕ್ಸ್ ಇದೆ. ಇದೇ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಲ್ಲಿ ವಾರದಲ್ಲಿ ಜಲಾಶಯದ ರ‍್ತಿಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸದೇ ನಾಲೆಗಳಿಗೆ ನೀರು ಹರಿಸಲು ಸೂಚಿಸಲಾಗಿದ್ದು,‌ ಶೀಘ್ರದಲ್ಲೇ ಐಸಿಸಿ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು. ರೈತರ ಹಿತ ದೃಷ್ಟಿಯಿಂದ ಮುಂಗಡವಾಗಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ : ಡ್ಯಾಂ ಸಾರ‍್ಥ್ಯ- ೧೦೫.೭೮೮ ಟಿಎಂಸಿ, ಸದ್ಯದ ಸಂಗ್ರಹ – ೪೬.೮೦೨ ಟಿಎಂಸಿ, ಒಳ ಹರಿವು – ೧೦೪೦೬೦ ಕ್ಯೂಸೆಕ್ಸ್, ಹೊರ ಹರಿವು – ೩೦೦ ಕ್ಯೂಸೆಕ್ಸ್ , ಕಳೆದ ರ‍್ಷ ಇದೇ ಸಮಯಕ್ಕೆ : ಸಂಗ್ರಹ – ೧೦.೯೪೭ ಟಿಎಂಸಿ , ಒಳ ಹರಿವು – ೧೧೪೨೫ ಕ್ಯೂಸೆಕ್ಸ್, ಹೊರ ಹರಿವು – ೨೬೨ ಕ್ಯೂಸೆಕ್ಸ್ ಇತ್ತು. ಎಡದಂಡೆ ಮುಖ್ಯ ಕಾಲುವೆಗೆ ಜುಲೈ ೧೯ರಿಂದ ೪೧೦೦ ಕ್ಯೂಸೆಕ್ಸ್ ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.೧೯ರಿಂದ‌ ೬೫೦ ಕ್ಯೂಸೆಕ್ಸ್ ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.೧೯ರಿಂದ ೧೩೦೦ ಕ್ಯೂಸೆಕ್ ನಂತೆ ಹಾಗೂ ಕರ‍್ಖಾನೆಗಳಿಗೆ ೬೦ ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಇನ್ನು ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜೂ.೧ರಿಂದ ೧೮೦ ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುತ್ತಿದೆ ಎಂದರು.

About Mallikarjun

Check Also

ಕೋಲೆ ಅರೋಪಿಗಳನ್ನು ಬಂಧಿಸುವವರೆಗೂ ಸೂಕ್ತವಾದಭದ್ರತೆಯನ್ನು ನೀಡಿ: ಶಾಂತಮ್ಮ

Provide adequate security till arrest of Kole accused: Shanthamma ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.