Breaking News

ಸರಳಸಜ್ಜನಿಕೆವ್ಯಕ್ತಿತ್ವವುಳ್ಳ ಅಧಿಕಾರಿಯ ವರ್ಗಾವಣೆ.

IMG 20240716 WA0295 300x135

ಗಂಗಾವತಿಯ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಗೋಪಾಲ್ ಧೂಪದ್ ರವರು ಹೊಸಪೇಟೆಗೆ ವರ್ಗಾವಣೆ ಆಗಿರುತ್ತಾರೆ ಇವರಿಗೆ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಗಂಗಾವತಿ ಕಚೇರಿಯಲ್ಲಿ ಇವರ ವತಿಯಿಂದ ಮಾನ್ಯ ಗೋಪಾಲ್ ಅವರಿಗೆ ತುಂಬಾ ವಿಶೇಷವಾಗಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ಕೊಡಲಾಯಿತು.

ಜಾಹೀರಾತು

ಮಾನ್ಯ ಕಾರ್ಮಿಕ ನಿರೀಕ್ಷಕರಾದ ಗೋಪಾಲ್ ಧೂಪದ್ ಅವರು ಸರಳ ವ್ಯಕ್ತಿತ್ವ ಉಳ್ಳ ಅಧಿಕಾರಿಯಾಗಿದ್ದರು, ಅವರು ಇಲ್ಲಿ ಕೆಲಸ ನಿರ್ವಹಿಸುವ ಸಮಯದಲ್ಲಿ ಸಾಕಷ್ಟು ಬಡ ಜನರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದರು, ಮತ್ತು ಇನ್ನಿತರ ಅನುಕೂಲವಾಗುವಂತಹ ಕೆಲಸವನ್ನು ಮಾಡುತ್ತಿದ್ದರು, ತಮ್ಮ ಕಚೇರಿಗೆ ಬರುವಂತಹ ಕಾರ್ಮಿಕರನ್ನು ಸಾರ್ವಜನಿಕರನ್ನು ತುಂಬಾ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು, ಕಾರ್ಮಿಕರ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚುತ್ತಿದ್ದರು, ಕಾರ್ಮಿಕರ ಸಂಘ ಸಂಸ್ಥೆಗಳಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆ ಒಳ್ಳೆಯ ಕೆಲಸ ಮಾಡುತ್ತಿದ್ದರು.ಸರ್ಕಾರದ ಆದೇಶಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ಎಲ್ಲರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ.
ಇಂತಹ ಅಧಿಕಾರಿ ಇನ್ನು ಸಾಕಷ್ಟು ದಿನಗಳ ಕಾಲ ಗಂಗಾವತಿಯಲ್ಲಿ ಇರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಹೊಸಪೇಟೆಗೆ ವರ್ಗಾವಣೆಗೊಂಡರು.

ಈ ಸಂದರ್ಭದಲ್ಲಿ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಶಿವಕುಮಾರ್ ಗೌಡ, ಪಂಪ ಪತಿ ಇಂಗಳಗಿ ಕೊಪ್ಪಳ ಜಿಲ್ಲಾ ಅಧ್ಯಕ್ಷರು, ಚಂದ್ರು, ವೀರೇಶ್, ಯ, ಹನುಮಂತಪ್ಪ ,ರಮೇಶ್, ಬಾಬು ಮೇಸ್ತ್ರಿ ,ಹುಸೇನಿ, ರಾಮು, ಹುಲುಗಪ್ಪ, ಶಂಕರ್, ಆಂಜನೇಯ, ಪರಶುರಾಮ, ಅಬ್ದುಲ್, ವಿಜಯಕುಮಾರ್, ವಿಶ್ವನಾಥ್ ,ಹನುಮಂತ ಹಾಗೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಅವರನ್ನು ಸಂತಸದಿಂದ ಬೇಳ್ಕೊಡೆಯ ಕೊಟ್ಟರು.

About Mallikarjun

Check Also

vakratunda cinema teaser bidugade (2)

“ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ

Teaser of the movie “Vakratunda” released “ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ ಬೆಂಗಳೂರು: ಲೋಚನ ಕ್ರಿಯೇಶನ್ಸ್ಅವರ “ವಕ್ರತುಂಡ” ಗ್ಯಾಂಗ್ಸ್ಆಫ್ ಸುಲ್ತಾನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.