Kani Journalists Association’s press day on July 28

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕಾ ಘಟಕದಿಂದ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ಜುಲೈ ೨೮ ಭಾನುವಾರದಂದು ವೈದ್ಯಕೀಯ ಭವನದಲ್ಲಿ ಪತ್ರಿಕಾ ದಿನಾಚರಣೆ ಮಾಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಯಿತು. ಚುನಾಯಿತ ಜನಪ್ರತಿನಿಧಿಗಳು, ಗಣ್ಯರು ಹಾಗು ಪತ್ರಿಕೋದ್ಯಮದ ಪ್ರಮುಖರನ್ನು ಆಹ್ವಾನಿಸುವ ಕುರಿತಂತೆ ಚರ್ಚಿಸಲಾಯಿತು.
ನೆನಪಿನ ಕಾಣಿಕೆ, ಆಹ್ವಾನ ಪತ್ರಿಕೆ ಇತರೆ ಕಾರ್ಯನಿರ್ವಹಿಸುವ ಕುರಿತಂತೆ ಜವಬ್ದಾರಿ ವಹಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಸನ್ನ ದೇಸಾಯಿ, ವಿಶ್ವನಾಥ ಬೆಳಗಲ್‌ಮಠ, ಚಂದ್ರಶೇಖರ್ ಮುಕುಂದಿ, ಶಿವಪ್ಪ ನಾಯಕ, ಗಂಗಾವತಿ ತಾಲೂಕಾ ಘಟಕದ ಉಪಾಧ್ಯಕ್ಷ ಹರೀಷ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಬಿ. ದೇವರಾಜ್, ಸಹಕಾರ್ಯದರ್ಶಿ ವಸಂತ್ ಕುಮಾರ್, ಖಜಾಂಚಿ ಹೊಸಕೇರಿ ಮಂಜುನಾಥ್, ಪ್ರಜಾಪರ್ವ ಸಂಪಾದಕರಾದ ಎಂ.ಜೆ.ಶ್ರೀನಿವಾಸ್, ಪತ್ರಕರ್ತರಾದ ಸುದರ್ಶನ ವೈದ್ಯ, ವಿಜಯ್ ಕುಮಾರ್ ಸಣಾಪುರ, ವೆಂಕಟೇಶ್ ಮಾಂತ, ವೆಂಕಟೇಶ್ ಪಿ ಹೊಸಳ್ಳಿ, ರಮೇಶ್ ಜೋಗಿನ್, ಅಕ್ಷಯ್ ಕುಮಾರ್, ಜಿ.ಶರಣಪ್ಪ ಹಾಗು ಆನಂದ್ ಬಸಾ ಪಟ್ಟಣ ಇತರರಿದ್ದರು.