Breaking News

ಮುಟ್ಟು ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿದ ಬಸವಾದಿ ಶರಣರು

Basavadi surrendered to the stigma of ‘muttu milei’

ಜಾಹೀರಾತು


WhatsApp Image 2024 05 25 At 12.58.35 PM 300x200

ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ 92 ನೇ ಮಾಸಿಕ ಬಸವಾನುಭವ ಮತ್ತು ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ, ಇವರ ಮಗಳು ಕುಮಾರಿ ಸುನಂದಾ ಇವರ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದ, ಬಸವರಾಜ ಹೂಗಾರ ಇವರು ಮಾತನಾಡಿ, ಇಂದಿನ ದಿನಮಾನದ ಗ್ರಾಮೀಣ ಮಟ್ಟದಲ್ಲಿ ವಿಜ್ಞಾನಕ್ಕೆ ಹತ್ತಿರವಿಲ್ಲದ ಅವೈಜ್ಞಾನಿಕವಾದ ಮೂಢನಂಬಿಕಗಳ ಮೌಢ್ಯಾಚರಣೆಗಳು ಹೆಚ್ಚುತಲಿವೆ. ಕಾರಣ ಬಸವಾದಿ ಶಿವ ಶರಣರ ವಿಚಾರ ಅರಿಯದೇ ಇರುವುದರಿಂದ. ಅದಕ್ಕಾಗಿ ನಾವು ಇಂದು ಗ್ರಾಮದಲ್ಲಿ ಕುಮಾರಿ ಸುನಂದಾ ಮಂತ್ರಿ ಎಂಬ ಕುವರಿಯು ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ನೆಪಮಾಡಿಕೊಂಡು, ಸತ್ಯ ಸಂಸ್ಕೃತಿ ಆಚರಣೆ ಗಳಾದ ಬಸವಾದಿ ಶಿವ ಶರಣರ ವಿಚಾರಗಳನ್ನ ಜನ ಮನಗಳಿಗೆ ಬಿತ್ತರಿಸುವ ಉದ್ದೇಶದಿಂದ, ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಜೊತೆಗೆ ವೃತುಮತಿಯಾದ ಕುವರಿಯ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಂಡಿರುವಂತದ್ದು. ವೃತುಮತಿ ಎಂದರೆ ತಾಯಿತನದ ಸಂಕೇತ, ಇದು ಸಹಜವಾಗಿ
ವಯೋಮಾನದ ಹಂತದಲ್ಲಿ ರಜಸ್ವು ಅಂದರೆ ಮುಟ್ಟು ಆಗುವುದು ಸಹಜವಾದ ಕ್ರೀಯೆ. ಅದನ್ನೇ ನಾವು ನಮ್ಮ ಮನೆಯಲ್ಲಿ ಮುಟ್ಟಾದ ಮಕ್ಕಳ ಮಟ್ಟದೆ ಒಂದು ಮೂಲೆಯಲ್ಲಿ ಕಳ್ಳಿರಿಸಿ, ಅವರನ್ನ ಹೀನಸ್ಥಿತಿಯಲ್ಲಿ ಕಾಣುವುದ ಮಾನವೀಯ ಸಂಸ್ಕೃತಿ ಅಲ್ಲ. ಸರ್ವಜ್ಞ ಕವಿ ಹೇಳುವಂತೆ ಮುಟ್ಟಾದ ಮೂರು ದಿನಕೆ ಗಟ್ಟಿಗೊಂಡಿಹುದು ಈ ಜೀವ, ಅದೇಗೆ ಮೈಲಿಗೆ ಆಗಲು ಸಾದ್ಯ? ಎಂಬ ಪ್ರಶ್ನೆ ಮಾಡುವುದರ ಮೂಲಕ, ಉತ್ತರವಾಗಿ ಸುಸಂಸ್ಕೃತಿಯ ಸಾಹಿತ್ಯ ಹೊಂದಿರುವ ಈ ನಾಡಿಗೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ, ಅದಕ್ಕಾಗಿ ನಾವು ಶರಣರ ಸಂತರ ಸಂಸ್ಕಾರಗಳನ್ನ ಅರಿತು, ಹುಟ್ಟಿನಿಂದ ಸಾಯುವವರೆಗು ನಮ್ಮ ಮನೆಯಲ್ಲಿ ಬರುವಂತ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಬಸವಾದಿ ಶಿವ ಶರಣರ ವಿಚಾರಗಳಂತೆ ಮಾಡಿದಾಗ ಮಾತ್ರ ಮೌಢ್ಯತೆಯಿಂದ ಹೊರ ಬರುಲು ಸಾದ್ಯವಿದೆ ಎಂದರು.
ನಂತರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪರಮ ಪೂಜ್ಯ ಸಿದ್ಧ ಬಸವ ಕಬೀರ್ ಸ್ವಾಮಿಗಳು ಇವರು ಮಾತನಾಡಿ,
ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ. ಎನ್ನುವ ಮೂಲಕ ಬಸವಾದಿ ಶಿವಶರಣರು, ಮಡಿ, ಮೈಲಿಗೆ, ಕಂದಾಚಾರ, ಮೂಢನಂಬಿಕೆಗಳನ್ನು ದಿಕ್ಕರಿಸಿದ್ದಾರೆ. ನಾರಿ ಪರರುಪಕಾರಿ, ನಾರಿ ಸ್ವರ್ಗಕ್ಕೆ ದಾರಿ, ನಾರಿ ಸಕಲರಿಗೆ ಹಿತಕಾರಿ, ಮುನಿದರೆ ನಾರಿಯೆ ಮಾರಿ ಎನ್ನುವ ನುಡಿಗಳನ್ನ ಕವಿ ಕಾದಂಬರಿಗಳಲ್ಲಿ ನಾವು ಕಾಣಬಹುದು. ಗುರು ಬಸವಣ್ಣನವರು, 12 ನೇ ಶತಮಾನದಲ್ಲಿ, ತಾನು ಎಂಟನೆ ವರ್ಷದ ಲ್ಲಿದ್ದಾಗ ತನ್ನ ಅಕ್ಕನಾದ ಅಕ್ಕನಾಗಲಾಂಬಿಕೆ ಮಟ್ಟಾದಾಗ, ಅವರ ತಂದೆ ತಾಯಿಗಳು ಹೊರಗಿಟ್ಟು, ಊಟೋಪಚಾರ ನೀಡುವುದನ್ನ ಕಂಡ ಬಸವಣ್ಣ, ಶೋಷಣೆಗೊಳಗಾದ ತನ್ನ ಅಕ್ಕನ ಕುರಿತಾಗಿ ತನ್ನ ತಂದೆಯವರಿಗೆ ಪ್ರಶ್ನಿಸಿ, ಪುರುಷರಷ್ಟೆ ಸ್ತ್ರೀ ಯರಿಗು ಕೂಡ ಸಮಾನತೆ ಕಾಣಬೇಕು, ಎಂಬ ಮಾತಿಗೆ ಒಪ್ಪದ ತಂದೆ ತಾಯಿಗಳನ್ನ ಧಿಕ್ಕರಿಸಿ, ಬಸವನ ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಬಂದು, ಮುಟ್ಟು ಮೈಲಿಗೆ ಎಂಬ ಕಳಂಕಕ್ಕೆ ತಿಲಾಂಜಲಿ ನೀಡಿ, ಪುರುಷರಷ್ಟೇ ಸ್ತ್ರೀಯರಿಗೂ ಕೂಡ ಸಮಾನತೆ ಇದೆ ಎಂಬುದನ್ನು ಮೊಟ್ಟೆ ಮೊದಲು ಜನ ಮನಗಳಿಗೆ ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ಆಶಿರ್ವಚನ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ, ಇಂದಿನ ದಿನಮಾನದಲ್ಲಿ ಯಾರು ಅಂಗದ ಮೇಲೆ ಲಿಂಗ ಧರಿಸಿ, ಬಸವ ನಾಮಸ್ಮರಣೆ ಮಾಡುತಿರುತ್ತಾರೋ ಅಂಥವರಿಗೆ ಯಾವುದೆ ಮುಟ್ಟು ಮೈಲಿಗೆ ಇರುವುದಿಲ್ಲಾ. ಅಸ್ಪೃಶ್ಯತೆ ನಿವಾರಣೆ, ಸ್ತ್ರೀ ಸಮಾನತೆ, ಅಹಿಂಸೆ, ಸ್ವಾತಂತ್ರ್ಯ, ಶಾಂತಿ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲ ಪ್ರಗತಿ ಪರ ತತ್ತ್ವಗಳನ್ನು ಜಾರಿಗೆ ತರಲು ಈ ಆಧುನಿಕ ಕಾಲದಲ್ಲೂ ಕಷ್ಟ ಸಾಧ್ಯ. ಆದರೆ, 12ನೇ ಶತಮಾನದಲ್ಲೇ ಅವುಗಳನ್ನು ಅಕ್ಷರಶಃ ಜಾರಿಗೆ ತರಲು ವಿಶ್ವಗುರು ಬಸವಣ್ಣನವರು ಪ್ರಯತ್ನಿಸಿದರು. ಸಮಾನತೆಯ ಸಮಾಜ ಕಟ್ಟಲು ಪಣತೊಟ್ಟವರು ಅವರು. ಇಂದಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಹಾ ಮಾನವತಾವಾದಿಯ ವಿಚಾರ ಬಿತ್ತರಿಸುವದರ ಮೂಲಕ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರದ ಅಧ್ಯಕ್ಷರು ಮರಕಟ್ಟ, ಶಿವಬಸಯ್ಯ ಹಿರೇಮಠ ವೀರಾಪುರ, ಕೊಟ್ರಪ್ಪ ಶೇಡದ್ ಶರಣಪ್ಪ ಎಚ್ ಹೊಸಳ್ಳಿ ಇವರು ಕೂಡ ಕಾರ್ಯಕ್ರಮದ ಕುರಿತಾಗಿ ತಮ್ಮ ಅನುಭಾವದ ಅಮೃತದ ನುಡಿಗಳನ್ನ ನುಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಶರಣ, ಶಣ್ಮೂಕಪ್ಪ ಬಳ್ಳಾರಿ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಮರಕಟ್ಟ, ಪರಪ್ಪ ಗೊಂದಿಹೊಸಳ್ಳಿ, ದೇವಪ್ಪ ಕೋಳೂರು ವನಜಭಾವಿ, ನಾಗನಗೌಡ ಜಾಲಿಹಾಳ ಗೌರವಾಧ್ಯಕ್ಷರು ಮಾಟಲದಿನ್ನಿ, ಅಮರಪ್ಪ ಅಳ್ಳಳ್ಳಿ ಸಾ. ಯಡ್ಡೋಣಿ ಇವರು ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಗಿರಿಮಲ್ಲಪ್ಪ ಪರಂಗಿ, ವಿರುಪಣ್ಣ ಮೇಟಿ, ಚಿದಾನಂದಪ್ಪ ಗೊಂದಿ, , ನಿಂಗಪ್ಪ ಪರಂಗಿ, ಯಲ್ಲಪ್ಪ ಆಡಿನ್, ಲಿಂಗನಗೌಡ ದಳಪತಿ, ಹನಮೇಶ್, ಬಸಣ್ಣ, ರಾಷ್ಟ್ರಪತಿ ಹೊಸಳ್ಳಿ ನಿಜಲಿಂಗಪ್ಪ, ಮಲ್ಲಿಕಾರ್ಜುನ, ಶರಣಪ್ಪ ಮಂತ್ರಿ ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಬಸಮ್ಮ ಹೂಗಾರ ಶಂಕ್ರಮ್ಮ, ಶರಣಮ್ಮ ಹೊಸಳ್ಳಿ, ನಾಗಮ್ಮ ಜಾಲಿಹಾಳ,ಸಾವಿತ್ರಮ್ಮ ಆವಾರಿ, ಮಲ್ಲಮ್ಮ ಮಂತ್ರಿ, ನಿಂಗಮ್ಮ ಕೋಳೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ,ವನಜಭಾವಿ, ಮರಕಟ್ಟ ಚವಡಾಪುರ ತಾಳಕೇರಿ, ಯಡ್ಡೋಣಿ, ಕೊಪ್ಪಳ, ಟಣಕನಕಲ್, ತರಲಕಟ್ಟಿ ಕಲಭಾವಿ, ಮಾಟಲದಿನ್ನಿ ಗ್ರಾಮದ ಸದ್ಭಕ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
✍️ ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ



ಯಲಬುರ್ಗಾ

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.