ಗಂಗಾವತಿ, : ತಾಲೂಕಿನ ಸಂಗಾಪುರ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶ್ರೀರಂಗದೇವರಾಯನಗರ ಸ.ಕಿ.ಪ್ರಾ.ಶಾಲೆ ಯಲ್ಲಿ ಏಪ್ರಿಲ್2ರಂದು ಮಕ್ಕಳು ಬರಗಾಲದ ಬಿಸಿಯೂಟವನ್ನು ಉಂಡು ಸುಮಾರು 32ಮಕ್ಕಳು ಅನಾರೋಗ್ಯ ಗೊಂಡುನಂತರ ಚೇತರಿಸಿ ಗೊಂಡರೂ ಹೊಣೆಯಾಗಿಸಿ ಶ್ರೀಮತಿ ಪುಷ್ಪಾವತಿ ಎನ್. ಮುಖ್ಯಗುರುಗಳನ್ನು ಅಮಾನತು ಮಾಡಿರುತ್ತಾರೆ. ಅಮಾನತು ಹಿಂಪಡೆಯುವಂತೆ
ಶಾಲಾ ಮಕ್ಕಳು,ಊರಿನ ಮುಖಂಡರು ಮಹಿಳೆಯರು ಮತ್ತು ಸಂಘ ಸಂಸ್ಥೆಗಳಿಗೆ ಚುನಾವಣೆ ಬಹಿಷ್ಕಾರ ಹೋರಾಟವನ್ನು ಹಮ್ಮಿಕೊಂಡಿದ್ದರು. ಈ ಹೋರಾಟವನ್ನು ಉದ್ದೇಶಿಸಿ ಹಂಪೆಶ್ ಹರುಗೋಲು ಮಾತನಾಡಿ,ಸಂಗಾಪುರ ಸರಕಾರಿ ಕಿ ರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ : 02.04.2024ರಂದು ಬಿಸಿಯೂಟ ಸೇವಿಸಿ ಕೆಲ ಮಕ್ಕಳು ಅಸ್ವಸ್ಥಗೊಂಡ ನಂತರ ಒಂದೆರಡು ಗಂಟೆಗಳಲ್ಲೇ ಚೇತರಿಸಿಕೊಂಡು ಆರೋಗ್ಯ ಪೂರ್ಣರಾಗಿ ಮನೆಗೆ ಮರಳಿರುತ್ತಾರೆ. ಆದರೆ ಅಂದು ಕೆಲವರು ವಿನಾಕಾರಣ ಗಲಾಟೆ ಮಾಡಿ ಆತಂಕ ಸೃಷ್ಟಿಸಿದ್ದು,
ಈ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ. ಆದರೆ ನಿಜವಾದ ಕಾರಣ ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ ಬಿಸಿಲಿನಲ್ಲಿ ಆಟವಾಡಿದ್ದು, ಹೆಚ್ಚು ಬಿಸಿಲಿನ ತಾಪದಿಂದ ಈಗಾಗಿದೆ ಹೊರೆತು ಬೇರೆ ಯಾವುದೇ ಕಾರಣಗಳಿಂದಲ್ಲ ಲಘು ಚಿಕಿತ್ಸೆಯೊಂದಿಗೆ ನಮ್ಮ ಮಕ್ಕಳು ಆರೋಗ್ಯ ಪೂರ್ಣರಾಗಿ ಮನೆಗೆ ಮರಳಿದ್ದಾರೆ. ತದ ನಂತರವೂ ಯಾವುದೇ ಅಪಾಯವಾಗದೇ ಸುರಕ್ಷಿತರಾಗಿದ್ದಾರೆ. ಇಂತಹ ಸಂದರ್ಭವನ್ನು ನೋಡಿಕೊಂಡು ಉಪಯೋಗಿಸಿಕೊಂಡು ಕೆಲವರು ಗಲಾಟೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. . ಆದರೆ 2-3 ದಿನಗಳ ನಂತರ ಮುಖ್ಯ ಗುರುಗಳ ಶ್ರೀಮತಿ ಪುಷ್ಪಾವತಿ ಇವರನ್ನು ಹಾಗೂ ಸಹ ಶಿಕ್ಷಕ ಇಬ್ಬರನ್ನು ಅಮಾನತು ಮಾಡಿರುವುದನ್ನು ಕಂಡು ದಿಗ್ಧಮೆಯಾಯಿತು. ಯಾಕೆಂದರೆ ಪುಷ್ಪಾವತಿ ಮೇಡಂ ಸುಮಾರು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಾ ಲಕ್ಷಾಂತರ ರೂಪಾಯಿಗಳನ್ನು ಶಾಲೆಗೆ ದೇಣಿಗೆಯನ್ನು ತಂದು ಶಾಲೆಯನ್ನು ಸಾಕಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಮತ್ತು ನಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ನಾವೆಲ್ಲಾ ಕೂಲಿ ಕೆಲಸ ಮಾಡುತ್ತಾ ತೀರಾ ಬಡತನ ರೇಖೆಗಿಂತ ಕೆಳಗೆ ಇದ್ದು, 100ಕ್ಕೆ 99% ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೇ ಆಗಿದ್ದೇವೆ. ನಾವು ಹಾಗೂ ನಮ್ಮ ಮಕ್ಕಳು ಶಿಕ್ಷಣದ ಬಗ್ಗೆ, ಶಾಲೆಯ ಗುರುಗಳ ಬಗ್ಗೆ ಹೆಮ್ಮೆಪಡುತ್ತಾ ಇದ್ದೇವು. ಆದರೆ ಅವತ್ತಿನ ದಿನದಂದು ಶ್ರೀಮತಿ ಪುಷ್ಪಾವತಿ ಎನ್ ಮುಖ್ಯಗುರುಗಳು ತಮ್ಮ ಪತಿಯ ತೀರ್ವ ಅನಾರೋಗ್ಯದ ಬಳಲುತ್ತಿದ್ದರು ಆದ್ದರಿಂದ ಅವರ ಪತಿಯನ್ನು ಕೂಡ ಕಳೆದುಕೊಂಡಿದ್ದಾರೆ. ರಜೆಯ ಮೇಲಿರುವ ಸಂದರ್ಭದಲ್ಲಿ ಮೇಡಂವರನ್ನು ಅಮಾನತುಗೊಳಿಸಲಾಗಿದೆ. ಇವರು ಶಾಲೆಯಲ್ಲಿ ಇದ್ದಿದ್ದರೆ ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಇವೆಲ್ಲ ಕಾರಣಗಳನ್ನು ವಿವರಿಸುತ್ತಾ ಮೇಲಾಧಿಕಾರಿಗಳಿಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದರೂ ವ್ಯರ್ಥವಾದ ಕಾರಣ ಈಗ ಶಾಲಾ ಮಕ್ಕಳು ಮತ್ತು ಪಾಲಕರು ಸೇರಿಕೊಂಡು ಮಕ್ಕಳು ಬರಗಾಲದ ಬಿಸಿಯೂಟವನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಪಾಲಕರಾದ ನಾವು ಕೂಡ ಮೇ-7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮೂಲಕ ಧರಣಿ ಸತ್ಯಾಗ್ರಹವನ್ನು ನಡೆಸಲು ಗ್ರಾಮಸ್ಥರೆಲ್ಲಾ ನಿರ್ಧರಿಸಿದ್ದೇವೆ. ಈಗಾಲಾದರೂ ಎಚ್ಚೆತ್ತುಕೊಂಡು ಶ್ರೀಮತಿ ಪುಷ್ಪಾವತಿ ಎನ್. ಮುಖ್ಯಗುರುಗಳ ಅಮಾನತು ಆದೇಶವನ್ನು ರದ್ದುಪಡಿಸಿ ಯಥಾ ಪ್ರಕಾರ ಶಾಲೆಗೆ ಹಾಜರಾಗಲು ಆದೇಶ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾಗರಾಜ ಬಿಎಸ್ಎಸ್ ಜಿಲ್ಲಾ ಸಂಚಾಲಕರು ಮಂಜುನಾಥ್. ಪೀರಪ್ಪ ನಾಯ್ಕ ಎಸ್ ಡಿ ಎಮ್ ಸಿ ಅಧ್ಯಕ್ಷರು . ಶಂಕರ್ ನಾಗ್ ಹನುಮಂತ ಜಾವಣ್ಣ ಬಸವರಾಜ್ ನಾಯ್ಕ ಸೇರಿದಂತೆ ಇತರರು ಮಹಿಳೆಯರು ಮುಖಂಡರು ಹಾಜರಿದ್ದರು