ಗಂಗಾವತಿ.ಮೇ.04: ಕನಕಗಿರಿ ವಿಧಾನಸಭಾ ಕ್ಷೇತ್ರದ ಗಂಗಾವತಿ ತಾಲೂಕಿನ ಮರಳಿ ಹೋಬಳಿಯ ಭಟ್ಟರಹಂಚಿನಾಳ ಏರಿಯಾದ ಗಾಳೆಮ್ಮಗುಡಿ ಕ್ಯಾಂಪ್‌ನ ಎಲ್ಲಾ ಮತದಾರರಿಂದ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಲಾಗಿತ್ತು.
ಮೇ-೦೪ ರಂದು ಉಪವಿಭಾಗಾಧಿಕಾರಿ ಮಹೇಶ್ ಮಾಲಗಿತ್ತಿ ಗಾಳೆಮ್ಮಗುಡಿ ಕ್ಯಾಂಪಿನ ಮತದಾರರ ಮನವೊಲಿಸಿ ಅನೇಕ ದಶಕಗಳ ಸಮಸ್ಯೆಯಾದ ಹಕ್ಕಪತ್ರಗಳನ್ನು ಕೊಡಲು ಅನುಸರಿಸಬೇಕಾದ ಮಾನದಂಡಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸುತ್ತೇವೆ ಎಂದು ಭರವಸೆಯ ಮಾತನ್ನು ಕೊಡುವ ಮೂಲಕ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಕೊಪ್ಪಳ ಜಿ.ಪಂ ನ ಉಪಕಾರ್ಯದರ್ಶಿ ಮಲ್ಲಿಕಾರ್ಜುನ, ಗಂಗಾವತಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಗಂಗಾವತಿ ತಹಶೀಲ್ದಾರ್ ಯು.ನಾಗರಾಜ್, ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನಿರೀಕ್ಷಕ ಹಾಲೇಶ, ಗ್ರಾಮ ಆಡಳಿತ ಅಧಿಕಾರಿ ಸುನೀತಾ, ಹೇರೂರು ಗ್ರಾ.ಪಂ ಪಿ.ಡಿ.ಓ ರವಿ ಶಾಸ್ತ್ರಿ, ಡಿ.ವೈ.ಎಸ್.ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ್, ಸಿ.ಪಿ.ಐ ಸೋಮಶೇಖರ್ ಜುಟ್ಟಲ್ ಹಾಗೂ ಗಾಳೆಮ್ಮಗುಡಿ ಕ್ಯಾಂಪ್‌ನ ಮುಖಂಡರಾದ ರಾಜೇಶ ಕುಮಾರ್, ನರಸಿಂಹಲು, ಕೆ.ಹುಸೇನಪ್ಪ, ಹಿರಿಯರಾದ ಸಿ.ನರಸಪ್ಪ, ಎಂ.ನರಸಿಂಹಲು, ಬಜ್ಜಪ್ಪ, ರವಿಕುಮಾರ್, ಸಂಸೋನು, ಯೇಸುರಾಜ್., ಬಿ ನಾರಾಯಣ, ಸುಮಿತ್ರಾ ಹಾಗೂ ಊರಿನ ಮಹಿಳೆಯರು, ಯುವಕರು, ಉಪಸ್ಥಿತರಿದ್ದರು.
ಗಾಳೆಮ್ಮಗುಡಿಕ್ಯಾಂಪ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಗ್ರಾಮಸ್ಥರಮನವೊಲಿಸಿದ ಎ.ಸಿ.ಮಹೇಶ್ ಮಾಲಗಿತ್ತಿ
ಜಾಹೀರಾತು