Breaking News

ದಲಿತರು ತಿಪ್ಪನಾಳ ಕೆರೆ ಜಾಗದಲ್ಲಿ ಬಿತ್ತನೆ ಮಾಡಿದ್ದ ಫಸಲನ್ನು ಕಟಾವಿಗೆ ಬಂದಾಗ ಪೊಲೀಸರು ನಾಶ ಮಾಡಿದ್ದ ಪ್ರಕರಣದಲ್ಲಿ ದಲಿತರಿಗೆ ಗೆಲುವು.

A victory for the Dalits in the case where the police destroyed the crop that the Dalits had sown in the Thippana lake area when they came to harvest.

ಜಾಹೀರಾತು

ಗಂಗಾವತಿ: ಕಳೆದ ೬-೭ ವರ್ಷಗಳ ಹಿಂದೆ ಕನಕಗಿರಿ ತಾಲೂಕಿನ ತಿಪ್ಪನಾಳ ಕೆರೆಯಲ್ಲಿ ಸಾಗು ಮಾಡುತ್ತಿರುವ ದಲಿತರು ಬಿತ್ತಿದ ಫಸಲನ್ನು ಕಟಾವಿಗೆ ಬಂದಾಗ ಸರ್ಕಾರ ಪೊಲೀಸರ ಮುಖಾಂತರ ಬೆಳೆ ನಾಶ ಮಾಡಿಸಿದ್ದಲ್ಲದೇ ೧೯ ಜನ ದಲಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನದಲ್ಲಿಟ್ಟಿದ್ದನ್ನು ವಿರೋಧಿಸಿ ಹೋರಾಟ ಮಾಡಿದ ಪ್ರಕರಣದಲ್ಲಿ ಕನಕಗಿರಿ ದಲಿತರಿಗೆ ಏಪ್ರಿಲ್-೨೪ ರಂದು ಗಂಗಾವತಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಈ ಹೋರಾಟವನ್ನು ಬೆಂಬಲಿಸಿದ ದಲಿತ, ಪ್ರಗತಿಪರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಈ ಹೋರಾಟದ ಸಂದರ್ಭದಲ್ಲಿ ಕನಕಗಿರಿಗೆ ಭೇಟಿ ನೀಡಿದ ರೈತ ಸಂಘ, ದಲಿತ ಸಂಘಟನೆಗಳು, ಕಮ್ಯುನಿಸ್ಟ್ ಮುಖಂಡರಿಗೆ ಅಭಿನಂದಿಸುತ್ತಾ, ದಲಿತರಿಗೆ ಆದ ಅನ್ಯಾಯ ಸರಿಪಡಿಸಲು ೨೬ ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ ೦೩ ಎಕರೆಯಂತೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಹೋರಾಟ ಮಾಡುವುದಾಗಿ ತಿಳಿಸಿ, ದಲಿತರಿಗೆ ಭೂಮಿ ಸಿಗುವವರೆಗೂ ಮಾಡುವ ಹೋರಾಟಕ್ಕೆ ರಾಜ್ಯಮಟ್ಟದ ಎಲ್ಲಾ ಪ್ರಗತಿಪರ ಮುಖಂಡರು ಹಾಗೂ ಸಂಘಟನೆಗಳು ಬೆಂಬಲಿಸಲು ಕೋರಿದ್ದಾರೆ.

About Mallikarjun

Check Also

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.