Breaking News

Lok Sabha Elections 2024: ಗೆಲುವಿನ ಖಾತೆಯನ್ನು ತೆರೆದ ಬಿಜೆಪಿ

Lok Sabha Elections 2024: BJP opens account of victory

ಜಾಹೀರಾತು
GLwiwc4bsAARFBh 300x200

ಸೂರತ್ ಏಪ್ರಿಲ್ 22: ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮೊದಲನೇ ಹಂತದ ಮತದಾನ ಪೂರ್ಣಗೊಂಡಿದೆ. ಇನ್ನೂ ಆರು ಹಂತದ ಮತದಾನ ನಡೆಯಬೇಕಿದೆ. ಅದಾಗಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಹೌದು… ಚುನಾವಣೆಗೂ ಮುನ್ನ ಬಿಜೆಪಿ ಗೆಲುವು ಕಂಡಿದೆ. ಗುಜರಾತ್‌ನಲ್ಲಿ ಬಿಜೆಪಿ ಕೇಸರಿ ಬಾವುಟವನ್ನು ಆರಿಸಿದೆ. ಲೋಕಸಭೆ ಚುನಾವಣೆಗೂ ಮುನ್ನ ಸೂರತ್‌ನಲ್ಲಿ ಬಿಜೆಪಿ ಭರ್ಜರಿ ಜಯ ಕಂಡಿದ್ದು ಗೆಲುವಿನ ಬಾವುಟ ಹಾರಿಸಿದೆ. ಲೋಕಸಭಾ ಚುನಾವಣೆ 2024 ಲೋಕಸಭಾ ಕ್ಷೇತ್ರಗಳು | ಅಭ್ಯರ್ಥಿಗಳು | ಚುನಾವಣಾ ದಿನಾಂಕ
ಸೂರತ್‌ನಲ್ಲಿ ಒಟ್ಟು ಎಂಟು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಆದರೆ ಆರು ಜನ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇನ್ನುಳಿದ ಅಭ್ಯರ್ಥಿ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಅದನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಸೂರತ್‌ನಲ್ಲಿ ಬಿಜೆಪಿ ಚುನಾವಣೆಗೂ ಮುನ್ನ ಎದುರಾಳಿಗಳಿಲ್ಲದೆ ಗೆಲವು ಸಾಧಿಸಿದೆ. ಸೂರತ್‌ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನಾಂಕವಾಗಿತ್ತು. ಆದರೆ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಬಿಜೆಪಿಯ ಮುಖೇಶ್ ದಲಾಲ್
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಗುಜರಾತ್ ಘಟಕದ ಮುಖ್ಯಸ್ಥ ಸಿಆರ್ ಪಾಟೀಲ್ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂರತ್ ಮೊದಲ ಉಡುಗೊರೆಯನ್ನು ನೀಡಿದೆ. ಸೂರತ್ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

About Mallikarjun

Check Also

screenshot 2025 10 16 17 56 26 72 6012fa4d4ddec268fc5c7112cbb265e7.jpg

ತಿರುಪತಿ ಬೌದ್ಧರ ಕ್ಷೇತ್ರ ವಾಗಿತ್ತು ಎನ್ನುವುದು ಹಾಸ್ಯಾಸ್ಪದ:ಟಿಟಿಡಿ ಸದಸ್ಯ ಎಸ್ ನರೇಶ್  ಕುಮಾರ್

It is ridiculous to say that Tirupati was a Buddhist place: TTD member S Naresh …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.